ವಿದ್ವಾನ್ ಮಧುರೈ ಟಿ ಎನ್ ಶೇಷಗೋಪಾಲನ್ ವೀಣಾವಾದನ
ಪ್ರಖ್ಯಾತ ವೀಣಾವಾದಕರಾಗಿದ್ದ ಗಾನಕಲಾಭೂಷಣ, ವಿದ್ವಾನ್ ಎಂ ಜೆ ಶ್ರೀನಿವಾಸ ಅಯ್ಯಂಗಾರ್ ನೆನಪಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ವಿದ್ವಾನ್ ಮಧುರೈ ಟಿ ಎನ್ ಶೇಷಗೋಪಾಲನ್ ಪ್ರಖ್ಯಾತ ಗಾಯಕರು. ವೀಣೆ ಮತ್ತು ಹಾರ್ಮೋನಿಯಂ ವಾದನಗಳಲ್ಲಿ ನಿಷ್ಣಾತರು. ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಸಂಗೀತ ಕಲಾನಿಧಿ ಪ್ರಶಸ್ತಿ ಪುರಸ್ಕೃತರು. ವಿಶ್ವದ ಅಸಂಖ್ಯ ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಕಲೈಮಾಮಣಿ, ಪದ್ಮಭೂಷಣ ಮುಂತಾದ ಗೌರವಗಳಿಗೆ ಪಾತ್ರರಾಗಿದ್ದಾರೆ. ತೋಡಿರಾಗಂ ಸಿನಿಮಾದಲ್ಲಿ
ನಾಯಕರಾಗಿ ಅಭಿನಯಿಸಿದ್ದಾರೆ. ಹರಿಕಥೆಯಲ್ಲೂ ತಮ್ಮ ಪ್ರೌಢಿಮೆಯನ್ನು ಮೆರೆದಿದ್ದಾರೆ.ಗುರುಗಳಾಗಿ ಹಲವು ಅತ್ಯುತ್ತಮ ಸಂಗೀತಗಾರರನ್ನು ರೂಪುಗೊಳಿಸಿದ್ದಾರೆ. ಟಿ ಎನ್ ಎಸ್ ಅಕಾಡೆಮಿ ಫಾರ್ ಮ್ಯೂಸಿಕಲ್ ಎಕ್ಸಲೆನ್ಸ್ ಸಂಸ್ಥೆಯ ಮೂಲಕ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ. ವಾಗ್ಗೇಯಕಾರರಾಗಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಇವರ ಪ್ರಾತ್ಯಕ್ಷಿಕೆಗಳು ತುಂಬಾ ಹೆಸರುವಾಸಿ.
ಈ ಕಾರ್ಯಕ್ರಮದಲ್ಲಿ ವಿದ್ವಾನ್ ತುಮಕೂರು ಬಿ ರವಿಶಂಕರ್ ಅವರು ಮೃದಂಗದಲ್ಲಿ ಮತ್ತು ವಿದ್ವಾನ್ ಶ್ರೀಶೈಲನ್ ಅವರು ಘಟದಲ್ಲಿ ಸಹಕರಿಸಲಿದ್ದಾರೆ.
ಎಂ ಜೆ ಎಸ್ ಅವರ ಕುಟುಂಬ, ಶಿಷ್ಯರು ಮತ್ತು ಅಭಿಮಾನಿಗಳು ಈ ಕಾರ್ಯಕ್ರಮವನ್ನು ಪ್ರಾಯೋಜಿಸಲಿದ್ದಾರೆ.