Skip to main content

28ನೇ ಜುಲೈ, ಮತ್ತೊಂದು ಸುಂದರ ಕಾರ್ಯಕ್ರಮ ಆಯೋಜಿಸಿದೆ. ಸಂಗೀತ ಮತ್ತು ನೃತ್ಯದ ಕಾರ್ಯಕ್ರಮ ವಿ|| ಕೃ಼್ಣ ಪವನ್ ಕುಮಾರ್ ಅವರು ಸಂಗೀತದಲ್ಲೂ ವಿ|| ಭ್ರಾಮರಿ ಶಿವಪ್ರಕಾಶ್ ಅವರು ನೃತ್ಯದಲ್ಲೂ ಕಾರ್ಯಕ್ರಮ ಪ್ರಸ್ತುತ ಪಡಿಸಲಿದ್ದಾರೆ. ಭ್ರಾಮರಿ ಶಿವಪ್ರಕಾಶ್ ವಿ|| ವಸುಂಧರಾ ದೊರೆಸ್ವಾಮಿ ಅವರಲ್ಲಿ ಶಿಷ್ಯವೃತ್ತಿ ಮಾಡಿ, ಈಗ ಮಂಗಳೂರಿನ "ನಾದನೃತ್ಯ ಕಲಾ ಸಂಸ್ಥೆ"ಯ ನಿರ್ದೇಶಕರಾಗಿ ಕಲಾ ಸೇವೆ ಮಾಡುತ್ತಿದ್ದಾರೆ. ಅವರು ಹಲವಾರು ಏಕವ್ಯಕ್ತಿ ನೃತ್ಯ ಪ್ರದರ್ಶನಗಳನ್ನು ಮನರಂಜನೆ ಮತ್ತು ಶಿಕ್ಷಣ ಎರಡೂ ದೃಷ್ಟಿಯಿಂದ ನೀಡಿದ್ದಾರೆ. ಖ್ಯಾತ ರಂಗ ಕರ್ಮಿ ಶ್ರೀ ಉದ್ಯಾವರ ಮಾಧವ ಆಚಾರ್ಯ ಅವರೊಂದಿಗೆ ಹಲವು ರಂಗ ಪ್ರಯೋಗಗಳಲ್ಲೂ ಕೆಲಸ ಮಾಡಿದ್ದಾರೆ.

ವಿ|| ಕೃಷ್ಣ ಪವನ್ ಕುಮಾರ್ ಅವರು ಪ್ರಸಿದ್ಧ ನುರಿತ ಹಾದುಗಾರರು ಮತ್ತು ಮೃದಂಗ ಹಾಗು ಕೊಳಲು ವಾದಕರು. ವೃತ್ತಿಯಲ್ಲಿ ಸಾಫ್ಟವೇರ ಇಂಜಿನೀಯರ್ ಆಗಿರುವ ಶ್ರೀಯುತರು, ಹಾಡುಗಾರಿಕೆ ಮತ್ತು ಕೊಳಲು ವಾದನಗಳಲ್ಲಿ ಆಕಾಶವಾಣಿಯಿಂದ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.. ಆಕಾಶವಾಣಿಯ ಬಿ-ಹೈ ಕಲಾವಿದರೂ ಕೂಡ. ಇವರಿಗೆ ಮೃದಂಗ ವಾದನಕ್ಕೆ ಚೆನ್ನೈನ "ಮುದ್ರಾ" ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಮೃದಂಗ ಪಕ್ಕವಾದನವನ್ನು ಹಲವು ಹಿರಿಯ, ಕಿರಿಯ ಕಲಾವಿದರಿಗೆ ನೀಡಿದ್ದಾರೆ.


On the 28th July, This will be followed by Music and Dance performance which will be rendered by Vid. Krishna Pavankumar in Music and Vidushi. Bhramari shivaprakash on dance. Bhramari Shivaprakash is a disciple of Vidushi. Dr Vasundhara Doreswami, and is director of ‘Nadanrutya kala samsthe’ of Mangaluru. She has presented several solo performance aimed at education and entertainment alike. She is also actively participating and performing in several theatre productions of Shri Udyavara Madhava Acharya, a renowned theatre activist.

Vid. Krishna Pavankumar is an acclaimed performer of Vocal, Mridanga and flute. By profession he is an Engineer in the IT industry. He is a recipient of the prestigious Awards from Akashavani for both vocal and flute. He is a B-high grade artist of Akashavani too. He has been bestowed with “Mudra” award of Chennai for Mridanga and many more. He providers Mridanga accompaniment to  several junior and senior musicians. 

Date: 
28 Jul 2018 - 6:00pm

Ganabharathi, Veene Seshanna Bhavana

Veene Sheshanna Bhavana, Adichunchanagiri Road, Kuvempunagar, Mysore - 23


Tel : 0821-2560313

Email: ganabharati@gmail.com

Web: www.ganabharathi.com

  • Icon
  • Icon