ಗಾನಭಾರತೀ ಜುಲೈ 13, 2019, ಶನಿವಾರ ಸಂಜೆ 6:00 ಗಂಟೆಗೆ ವಿದ್ವಾನ್ ಚಕ್ರಕೋಡಿ ನಾರಾಯಣ ಶಾಸ್ತ್ರಿ ನೆನಪಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವಿದುಷಿ ಶ್ರುತಿ ಎಸ್ ಭಟ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯನ್ನು ನಡೆಸಿಕೊಡಲಿದ್ದಾರೆ. ಅವರೊಂದಿಗೆ ವಿದುಷಿ ಶ್ರೀಲಕ್ಷ್ಮೀ ಎಸ್ ಭಟ್ ಅವರು ವಯೋಲಿನ್ನಿನಲ್ಲಿ, ವಿದ್ವಾನ್ ಪಿ ಎಸ್ ಶ್ರೀಧರ್
ಮೃದಂಗದಲ್ಲಿ, ವಿದ್ವಾನ್ ಬಿ ಶ್ರೀರಾಂ ಭಟ್ ಖಂಜಿರದಲ್ಲಿ ಸಹಕರಿಸಲಿದ್ದಾರೆ. ಶ್ರುತಿಎಸ್ ಭಟ್ ಅವರು ಪ್ರಾರಂಭದಲ್ಲಿ ವಿ|| ಚಂಗಲ್ಪೇಟ್ ರಂಗನಾಥ್, ವಿ|| ಶ್ರೀಮುಷ್ಣಂ ರಾಜಾರಾವ್ ಮೊದಲಾದವರಲ್ಲಿ ಕಲಿತು ಈಗ ವಿದುಷಿ ಎಸ್ ಸೌಮ್ಯ ಅವರಲ್ಲಿ ಕಲಿಕೆಯನ್ನು ಮುಂದುವರಿಸುತ್ತಿದ್ದಾರೆ. ಮದ್ರಾಸ್ ವಿಶ್ವವಿದ್ಯಾನಿಲಯದ ಎಂ.ಮ್ಯೂಸಿಕ್ ಪದವೀಧರೆ. ಸಂಗೀತದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಇವರು ಮ್ಯೂಸಿಕ್ ಅಕಾಡೆಮಿ, ಕಾರ್ತಿಕ್ ಫೈನ್ಆಟ್ರ್ಸ್, ನಾರದ ಗಾನ ಸಭಾ, ಶ್ರೀ ಷಣ್ಮುಗಾನಂದ ಸಭಾದಂತಹ ಪ್ರತಿಷ್ಠಿತ ಸಭೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಆಕಾಶವಾಣಿಯ ‘ಬಿ’ ಗ್ರೇಡ್ ಕಲಾವಿದೆಯಾಗಿರುವ ಇವರು ಅಕಾಶವಾಣಿ ಹಾಗೂ ದೂರದರ್ಶನಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ವಿಮರ್ಶಕರ ಮೆಚ್ಚುಗೆಗೆ ಪಾತ್ರರಾಗಿರುವ ಇವರಿಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಭಾರತರತ್ನ ಶ್ರೀ ಎಂಎಸ್ ಸುಬ್ಬುಲಕ್ಷ್ಮಿ ಪ್ರಶಸ್ತಿ, ಮುಸುರಿ ಸುಬ್ರಮಣ್ಯ ಅಯ್ಯರ್ ಪ್ರಶಸ್ತಿ, ಇಸೈ ಚೆಮ್ಮಾಲ್ ಪ್ರಶಸ್ತಿ, ಭಾರತ್ ಕಲಾಚಾರ್ ಸಂಸ್ಥೆಯಿಂದ ವಿದ್ಯಾರ್ಥಿವೇತನ ಇವು ಅವುಗಳಲ್ಲಿ ಕೆಲವು..
ವಯೋಲಿನ್ ಸಹಕಾರ ನಿಡುತ್ತಿರುವ ವಿದುಷಿ ಶ್ರೀಲಕ್ಷ್ಮೀ ಎಸ್ ಭಟ್ ಅವರು ಅಕ್ಕರೈ ಸ್ವಾಮಿನಾಥನ್ ಅವರಲ್ಲಿ ಕಲಿತು, ಈಗ ವಿದ್ವಾನ್ ಶ್ರೀರಾಂ ಪರಶುರಾಂ ಅವರಲ್ಲಿ ಕಲಿಯುತ್ತಿದ್ದಾರೆ. ಸೋಲೋ ಕಾರ್ಯಕ್ರಮದ ಜೊತೆಗೆ ಪಕ್ಕವಾದ್ಯ ಸಹಕಾರವನ್ನು ನೀಡಿ ಹೆಸರು ಮಾಡಿದ್ದಾರೆ.
ವಿದ್ವಾನ್ ಪಿ ಎಸ್ ಶ್ರೀಧರ್ ವಿದ್ವಾನ್ ತುಮಕೂರು ರವಿಶಂಕರ್ ಅವರ ಶಿಷ್ಯರು. ಹಲವು ಹಿರಿಯ ಕಿರಿಯ ಕಲಾವಿದರಿಗೆ ಘಟ ಮತ್ತು ಮೃದಂಗ ಸಹಕಾರ ನೀಡಿದ ಅಪಾರ ಅನುಭವ ಇವರದು.
ವಿದ್ವಾನ್ ಶ್ರೀರಾಂ ಭಟ್ಟರು ಬಹುಮುಖ ಪ್ರತಿಭೆಯ ಕಲಾವಿದರು. ಕರ್ನಾಟಕ ಮತ್ತು ಹಿಂದುಸ್ತಾನಿ ಗಾಯನ, ಹಾರ್ಮೋನಿಯಂ, ಖಂಜಿರಾ, ಮೃದಂಗ ಹೀಗೆ ಹಲವು ಪ್ರಕಾರಗಳಲ್ಲಿ ಗಟ್ಟಿಗರು.