1 ಸೆಪ್ಟೆಂಬರ್, ಸಂಜೆ 5:30ಕ್ಕೆ ಶ್ರೀ ಕೃಷ್ಣ ಜಯಂತಿಯ ಸಂದರ್ಭದಲ್ಲಿ ಕಲಾಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ನಾಲ್ಕು ಹಿರಿಯ ಕಲಾವಿದರನ್ನು ಸನ್ಮಾನಿಸಲಾಗುತ್ತದೆ.
- ಪ್ರಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದರಾದ ವಿದುಷಿ ಡಾ ಸುಕನ್ಯಾ ಪ್ರಭಾಕರ್,
- ಪ್ರಖ್ಯಾತ ರಂಗಸಂಗೀತ ಕಲಾವಿದರಾದ ವಿದ್ವಾನ್ ಪರಮಶಿವನ್,
- ಹಿರಿಯ ಕಲಾವಿದರು ಹಾಗೂ ಗುರುಗಳೂ ಆದ ವಿದುಷಿ ಪುಷ್ಪಾ ಶ್ರೀನಿವಾಸನ್ ಹಾಗೂ
- ಪ್ರಸಾಧನ ಕಲಾವಿದರಾಗಿ ಮತ್ತು ಕಲಾಪೋಷಕರಾಗಿ ಸೇವೆ ಸಲ್ಲಿಸಿರುವ ಶ್ರೀ ಬಿ ಎಂ ರಾಮಚಂದ್ರ
ಅವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತದೆ.
ಸನ್ಮಾನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯ ವಯೋಲಿನ್‍ವಾದಕರಾದ ವಿದ್ವಾನ್ ಎಚ್ ಕೆ ನರಸಿಂಹಮೂರ್ತಿಯವರು ಭಾಗವಹಿಸಿ ಕಲಾವಿದರನ್ನು ಸನ್ಮಾನಿಸಲಿದ್ದಾರೆ. ಅದೇ ಸಂದರ್ಭದಲ್ಲಿ ಗಾನಭಾರತಿಯು ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ.
Date:
1 Sep 2019 - 5:30pm