ಆಗಸ್ಟ್ 30, 31 ಹಾಗೂ ಸೆಪ್ಟೆಂಬರ್ 1 ರಂದು ಶ್ರೀಕೃಷ್ಣ ಜಯಂತಿಯ ಮೂರು ದಿನಗಳ ಸಂಭ್ರಮದ ಕಾರ್ಯಕ್ರಮಗಳನ್ನು ಗಾನಭಾರತೀ ಹಮ್ಮಿಕೊಂಡಿದೆ.
ಆಗಸ್ಟ್ 30
ಸಂಜೆ 6ಗಂಟೆಗೆ ವಿದ್ವಾನ್ ವಿ ವಂಶೀಧರ್ ಅವರಿಂದ ಕೊಳಲುವಾದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿದ್ವಾನ್ ಬಿ ಕೆ ರಘು ಅವರು ವಯೋಲಿನ್ನಿನಲ್ಲಿ, ವಿದ್ವಾನ್ ಬಿ ಎಸ್ ಪ್ರಶಾಂತ್ ಅವರು ಮೃದಂಗದಲ್ಲಿ ಹಾಗೂ ವಿದ್ವಾನ್ ಎಸ್ ಮಂಜುನಾಥ್ ಅವರು ಘಟದಲ್ಲಿ ಸಹಕರಿಸಲಿದ್ದಾರೆ.
ಆಗಸ್ಟ್ 31
ಸಂಜೆ 6ಗಂಟೆಗೆ ವಿದುಷಿ ಜಿ ಚಂದನಬಾಲಾ ಅವರು ಗಾಯನ ಕಾರ್ಯಕ್ರಮ ನೀಡುತ್ತಿದ್ದಾರೆ. ಅವರೊಂದಿಗೆ ವಿದ್ವಾನ್ ಕೆ ಜೆ ದಿಲೀಪ್ ಪಿಟೀಲಿನಲ್ಲಿ, ವಿದ್ವಾನ್ ಎ ರಾಧೇಶ ಅವರು ಮೃದಂಗದಲ್ಲಿ ಹಾಗೂ ವಿದ್ವಾನ್ ವಿಕ್ರಂ ಭಾರದ್ವಾಜ್ ಘಟದಲ್ಲಿ ಸಹಕರಿಸಲಿದ್ದಾರೆ.
1 ಸೆಪ್ಟೆಂಬರ್
ಸಂಜೆ 6:45ಕ್ಕೆ ವಿದ್ವಾನ್ ಪಾರ್ಶ್ವನಾಥ್ ಉಪಾಧ್ಯೆ ಅವರಿಂದ ಭರತನಾಟ್ಯ ಪ್ರಸ್ತುತಿ
Date:
1 Sep 2019 - 6:45pm