
ವೈಣಿಕ ಶಿಖಾಮಣಿ ವೀಣೆ ಶೇಷಣ್ಣನವರ ದಿನಾಚರಣೆಯ ಅಂಗವಾಗಿ ವೀಣಾ ಉತ್ಸವವನ್ನು ಆಚರಿಸಲಾಗುತ್ತಿದೆ. ಪ್ರೊ ಮೈಸೂರು ವಿ ಸುಬ್ರಮಣ್ಯ ಅವರ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ವಿವಿಧ ವಿದ್ವಾಂಸರಿಂದ ವಿವಿಧ ಪರಂಪರೆಯ ವೀಣೆಯನ್ನು ಸಂಗೀತ ವಿದ್ವಾಂಸರು, ಸಂಗೀತೋಪಾಸಕರು ಮತ್ತು ಸಂಗೀತ ರಸಿಕರು ಒಂದೇ ದಿನ ಆಸ್ವಾದಿಸಲು ಉಪಯುಕ್ತವಾದ ಕಾರ್ಯಕ್ರಮ. ಸಂಗೀತದ ವಿದ್ಯಾರ್ಥಿಗಳಿಗಂತೂ ಇದು ಅತಿ ಮುಖ್ಯ ಕಲಿಕಾ ವೇದಿಕೆ, ಎಲ್ಲರಿಗೂ ಆದರದ ಸುಸ್ವಾಗತ.