ಒಂದು ಕಾಲದಲ್ಲಿ ಕಲೆಗೆ ರಾಜಾಶ್ರಯ ಇತ್ತು. ಅದು ತಪ್ಪಿತು. ಸರ್ಕಾರ ಒಂದಿಷ್ಟು ಪ್ರೋತ್ಸಾಹ ನೀಡಿತು. ಈಗಲೂ ನೀಡುತ್ತಿದೆ. ಆದರೆ ಅದು ಏನೇ ಆದರೂ ಸೀಮಿತವೇ. ಆಸಕ್ತ ಜನ, ಕಲಾಭಿಮಾನಿಗಳು, ಆಸಕ್ತರು ಈ ನಿಟ್ಟಿನಲ್ಲಿ ಸಕ್ರಿಯರಾದರು. ಹಲವು ಸಂಗೀತ ಸಭೆಗಳು, ಸಂಘಟನೆಗಳು ಹುಟ್ಟಿಕೊಂಡವು. ಗಾನಭಾರತೀಯೂ ಹಾಗೆ ಹುಟ್ಟಿಕೊಂಡ ಸಂಸ್ಥೆ. ೨೫ ವರ್ಷ ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಇಂದು ಕಲೆ ಬದಲಾದ ತಂತ್ತಜ್ಞಾನದಿಂದ, ಜನರ ಅಭಿರುಚಿಯಿಂದ ಹೊಸ ಸವಾಲುಗಳನ್ನು ಎದುರಿಸುತ್ತಿದೆ.
ಸಭೆಗಳು ಹೊಸ ರೀತಿಯಲ್ಲಿ ಕೆಲಸ ನಿರ್ವಹಿಸಬೇಕಾಗಿದೆ, ಹೊಸ ಜವಾಬ್ದಾರಿಗಳನ್ನು ಹೊರಬೇಕಾಗಿದೆ. ಹೊಸ ಜನರನ್ನು ತಲುಪುವ, ಕಲೆಯನ್ನು ಕುರಿತು ಸಮಕಾಲೀನ ಸಂದರ್ಭದಲ್ಲಿ ಚರ್ಚಿಸುವ, ಜನರಲ್ಲಿ ಅರಿವನ್ನು ಮೂಡಿಸುವ ಕೆಲಸ ನಡೆಯಬೇಕಾಗಿದೆ. ಮಾಮೂಲಿ ಕಛೇರಿಗಳನ್ನು ಏರ್ಪಡಿಸುವುದಕ್ಕೇ ಸೀಮಿತಗೊಳಿಸಿಕೊಲ್ಲದೆ ಈ ಎಲ್ಲಾ ನಿಟ್ಟಿನಲ್ಲೂ ಯೋಚಿಸಬೇಕಾಗಿದೆ.
ಗಾನಭಾರತೀ ಈ ದೆಸೆಯಲ್ಲಿ ಕಾರ್ಯೋನ್ಮುಖವಾಗಿದೆ. ಕಾರ್ಯಕ್ರಮ ವೈವಿಧ್ಯ, ಸಭೆಯ ಆಚೆಗೆ ಕಾರ್ಯಕ್ರಮ, ಕಲಾವಿದರನ್ನು, ಪ್ರೇಕ್ಷಕರನ್ನು ಒಳಗುಮಾಡಿಕೊಳ್ಳುತ್ತಾ ಕಾರ್ಯಕ್ರಮ ರೂಪಿಸುವುದು, ತನ್ನ ಮಾಸಿಕ 'ತಿಲ್ಲಾನ'ದ ಮೂಲಕ ಇಂತಹ ಸಂವಾದವನ್ನು ಮುಂದುವರಿಸುವುದು, ಶಾಲೆಯ ಮೂಲಕ ಕಲಿಕೆಯನ್ನು ಪರಿಣಾಮಕಾರಿಯಾಗಿ ನಡೆಸುವುದು ಇತ್ಯಾದಿ ಹಲವು ನಿಟ್ಟಿನಲ್ಲಿ ಸಕ್ರಿಯವಾಗಿರುವುದರಿಂದ ಇಂದು ಗಾನಭಾರತಿಯ ಪ್ರಸ್ತುತತೆ ಹೆಚ್ಚಾಗಿದೆ.