Gaanabharathi invites you all for the karnatic music vocal concert by Vid T M Krishna on 22 nd November 2018 6pm at Veenesheshanna bhavana. He would be accompanied by Vid R K Sriramkumar on violin, Vid Praveenkumar on Mridanga and Vid Vazapalli R Krishnakumar on Ghata.
ಟಿ ಎಂ ಕೃಷ್ಣ ಅವರ ಸಂಗೀತ ಕಾರ್ಯಕ್ರಮ
ಕರ್ನಾಟಕ ಶಾಸ್ತ್ರೀಯ ಸಂಗೀತದ ಹೆಸರಾಂತ ಸಂಗೀತಗಾರ ಟಿ ಎಂ ಕೃಷ್ಣ ಅವರ ಕಾರ್ಯಕ್ರಮವನ್ನು ನವೆಂಬರ್ 22ರಂದು ಸಂಜೆ 6 ಗಂಟೆಗೆ ಗಾನಭಾರತಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಅವರಿಗೆ ಪಿಟೀಲಿನಲ್ಲಿ ವಿದ್ವಾನ್ ಆರ್ ಕೆ ಶ್ರೀರಾಂಕುಮಾರ್, ಮೃದಂಗದಲ್ಲಿ ವಿದ್ವಾನ್ ಪ್ರವೀಣ್ ಕುಮಾರ್ ಹಾಗೂ ಘಟದಲ್ಲಿ ವಿದ್ವಾನ್ ವ್ಹಾಜಪಲ್ಲಿ ಆರ್ ಕೃಷ್ಣಕುಮಾರ್ ಸಹಕರಿಸುತ್ತಿದ್ದಾರೆ.
ವಿದ್ವಾನ್ ಟಿ ಎಂ ಕೃಷ್ಣ ಕೇವಲ ಶ್ರೇಷ್ಠಮಟ್ಟದ ಸಂಗೀತಗಾರರಷ್ಟೇ ಅಲ್ಲ, ಸಂಗೀತವನ್ನು ಕುರಿತು ಸ್ವಂತ ನಿಲುವನ್ನೂ ಹೊಂದಿರುವ ಕಲಾವಿದರು. ಸಮಾಜ, ರಾಜಕೀಯ, ಉಳಿದ ಕಲಾಪ್ರಕಾರಗಳು ಹೀಗೆ ಹತ್ತು ಹಲವಾರು ವಿಷಯಗಳನ್ನು ಕುರಿತು ಬರೆದಿದ್ದಾರೆ. ಟಿ ಎಂ ಕೃಷ್ಣ ಅವರು ವಿದ್ವಾನ್ ಬಿ ಸೀತಾರಾಮ ಶರ್ಮ ಅವರಲ್ಲಿ ಸಂಗೀತ ಶಿಕ್ಷಣ ಪ್ರಾರಂಭಿಸಿ, ರಾಗ-ತಾನ-ಪಲ್ಲವಿ ಕುರಿತು ಚೆಂಗಲ್‍ಪೇಟ್ ರಂಗನಾಥನ್ ಅವರ ಬಳಿ ವಿಶೇಷ ತರಬೇತಿ ಪಡೆದರು. ನಂತರ ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರಲ್ಲಿ ಉನ್ನತ ಶಿಕ್ಷಣ ಪಡೆದರು. 12ನೇ ವರ್ಷದಲ್ಲಿ ಮ್ಯೂಸಿಕ್ ಅಕಾಡೆಮಿ ಸಂಘಟಿಸಿದ ಸ್ಪಿರಿಟ್ ಆಫ್ ಯೂತ್ ಸರಣಿಯಲ್ಲಿ ಕಾರ್ಯಕ್ರಮ ನೀಡಿದರು. ದೇಶವಿದೇಶಗಳಲ್ಲಿ ತುಂಬಾ ಬೇಡಿಕೆ ಇರುವ ಈ ಕಲಾವಿದ ಸಾವಿರಾರು ಕಾರ್ಯಕ್ರಮಗಳು ಪ್ರಾತ್ಯಕ್ಷಿಕೆಗಳು, ಭಾಷಣಗಳನ್ನು ನಡೆಸಿಕೊಟ್ಟಿದ್ದಾರೆ.
ಅವರ ಕೃತಿ ಸದರನ್ ಮ್ಯೂಸಿಕ್ ಸಂಗೀತ ಕ್ಷೇತ್ರದಲ್ಲಿ ಒಂದು ಅಲೆಯನ್ನೇ ಸೃಷ್ಟಿಸಿದೆ. ಅವರ ಇತ್ತೀಚಿನ ಪುಸ್ತಕ ರಿಶೇಪಿಂಗ್ ಮ್ಯೂಸಿಕ್. ಸಂಗೀತದಲ್ಲೂ ನಿರಂತರ ಹುಡುಕಾಟ ನಡೆಸುತ್ತಿರುವ ಇವರು ತಮ್ಮ ಈ ಮಾರ್ಗದಲ್ಲಿ ತೊಡಕಾಗಬಹುದಾದ ಎಲ್ಲಾ ರೂಢಿಗತ ಆಚರಣೆಗಳನ್ನೂ ಪ್ರಶ್ನಿಸುತ್ತಾ ಸಾಗಿದ್ದಾರೆ. ಸಂಗೀತದಲ್ಲಿ ಕಾಣುತ್ತಿರುವ ಅಸಮಾನತೆಯ ಬಗ್ಗೆ ಮಾತನಾಡುತ್ತಲೇ ಸಂಗೀತವನ್ನು ಜನರ ನಡುವೆ ತೆಗೆದುಕೊಂಡು ಹೋಗಲು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುತ್ತಿದ್ದಾರೆ. ಇದನ್ನು ಗುರುತಿಸಿ ಇವರಿಗೆ ಪ್ರತಿಷ್ಠಿತ ಮ್ಯಾಗ್ಸೆಸೇ ಪ್ರಶಸ್ತಿ ನೀಡಲಾಗಿದೆ.