Skip to main content

ನವೆಂಬರ್ 2018

ಸಂಪುಟ 26 ಸಂಚಿಕೆ 3

 

ಸಂಪಾದಕರ ಮಾತು

ನವೆಂಬರ್ ತಿಂಗಳ ಕಾರ್ಯಕ್ರಮ

ಮುನ್ನೋಟ: ಡಿಸೆಂಬರ್ ತಿಂಗಳ ಕಾರ್ಯಕ್ರಮ

ಬೆಂಗಳೂರು ನಾಗರತ್ನಮ್ಮ-ಒಂದು ಅಣುಶಕ್ತಿ                 ಶಾಂತಿ ನರಸಿಂಹನ್

ನಾ ಕಂಡ ನಾಗರತ್ನಮ್ಮ                                                ಮೈಸೂರು ವಾಸುದೇವಾಚಾರ್ಯ

ಬೆಂಗಳೂರು ನಾಗರತ್ನಮ್ಮ                                  ಡಿವಿಜಿ

ನಾಗರತ್ನಮ್ಮ ಕೆಲವು ನೆನಪುಗಳು                                   ಶೈಲಜ

ಪುಸ್ತಕ ಪರಿಚಯ                                                          ಶೈಲಜ

ಮರೆಯಲಾಗದ ಕ್ಷಣಗಳು                                              ದೀಪಾ ಗಣೇಶ್

ಅನುಭಾವಿಗಳು ಕಂಡ ನವವಿಧ ಭಕ್ತಿ                              ಡಾ|| ಸುಕನ್ಯಾ ಪ್ರಭಾಕರ್

ನನ್ನ ಸಿನಿಮಾದಲ್ಲಿ ಸಂಗೀತ                                          ಸತ್ಯಜಿತ್ ರೇ

Palghat Mani Iyer                                                                     ಬಿವಿಕೆ ಶಾಸ್ತ್ರಿ

ನವೆಂಬರ್ ತಿಂಗಳ ಪ್ರಾಯೋಜಕರು

ಕೃಷ್ಣ ಜಯಂತಿಯ ಪ್ರಯುಕ್ತ ನಡೆದ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರು

ಕಲಾರಸಿಕರಲ್ಲಿ ಮನವಿ

ತಿಲ್ಲಾನದ ಓದುಗರಲ್ಲಿ ಮನವಿ

 

 

ಸಂಪಾದಕರ ಮಾತು

ಆತ್ಮೀಯರೇ,

ಬೆಂಗಳೂರು ನಾಗರತ್ನಮ್ಮ ಸಂಗೀತ ಕ್ಷೇತ್ರದಲ್ಲಿ, ಅಷ್ಟೇ ಅಲ್ಲ ಸಾಮಾಜಿಕವಾಗಿ ಹಲವಾರು ಕಾರಣಗಳಿಗೆ ತುಂಬಾ ಮುಖ್ಯರು. ಸಂಗೀತದ ಕ್ಷೇತ್ರದಲ್ಲಿ ಅವರದು ದೊಡ್ಡ ಸಾಧನೆ. ತಮ್ಮ ಧನಕನಕ, ವಜ್ರವೈಢೂರ್ಯಗಳೆಲ್ಲವನ್ನೂ ತ್ಯಾಗಮಾಡಿ, ತಮ್ಮನ್ನು ತ್ಯಾಗರಾಜರ ದಾಸಿಯೆಂದೇ ಭಾವಿಸಿ, ತ್ಯಾಗರಾಜರ ಸಮಾಧಿಯನ್ನು ಜೀರ್ಣೋದ್ಧಾರ ಮಾಡಿದ ಮಹಾನ್ ಮಹಿಳೆ ನಾಗರತ್ನಮ್ಮ. ಇನ್ನು ಮಹಿಳೆಯರ ವಿರುದ್ಧ ಇದ್ದ ತಾರತಮ್ಯದ ಧೋರಣೆಯನ್ನು ನಿವಾರಿಸಿ ಅವರಿಗೆ ಸ್ಥಾನಮಾನ ದೊರಕಿಸಿಕೊಡುವಲ್ಲಿಯೂ ಅವರ ಹೋರಾಟ ಅಪ್ರತಿಮವಾದುದು. ಹಾಗೆಯೇ ಒಂದು ವ್ಯವಸ್ಥೆಯನ್ನು ಬದಲಿಸುವಾಗ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅದಕ್ಕೆ ಪೂರಕವಾದ ಬದಲಾವಣೆಗಳು ಹೇಗಿರಬೇಕು ಎಂಬುದನ್ನು ಕುರಿತು ಅವರು ಎತ್ತುವ ಪ್ರಶ್ನೆಗಳು ಮತ್ತು ಮುಂದಿಡುವ ಸಲಹೆಗಳು ಸದಾ ಕಾಲಕ್ಕೂ ಪ್ರಸ್ತುತ. ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಕೆಲಸಮಾಡಿದ ಕರ್ನಾಟಕದವರಾದ ಅವರನ್ನು ನೆನೆಸಿಕೊಳ್ಳುವುದು ನಮ್ಮ ಕರ್ತವ್ಯ.

ನಾಗರತ್ನಮ್ಮನವರನ್ನು ಕುರಿತಂತೆ ವಿ ಶ್ರೀರಾಂ ಅವರು ಒಂದು ಮೌಲಿಕ ಪುಸ್ತಕ ಬರೆದಿದ್ದಾರೆ. ಕನ್ನಡದಲ್ಲಿ ಮೈಸೂರು ವಾಸುದೇವಾಚಾರ್ಯರು, ಡಿ ವಿ ಗುಂಡಪ್ಪನವರು  ನಾಗರತ್ನಮ್ಮನವರನ್ನು ಕುರಿತು ಲೇಖನಗಳನ್ನು ಬರೆದಿದ್ದಾರೆ. ಇತ್ತೀಚೆಗೆ ಅವರ ಬಗ್ಗೆ ಜಗದೀಶ್ ಕೊಪ್ಪ ಒಂದು ಪುಸ್ತಕ ಬರೆದಿದ್ದಾರೆ. ಪ್ರೊ. ಮಲೆಯೂರು ಗುರುಸ್ವಾಮಿಯವರ ಒಂದು ಕಾದಂಬರಿಯೂ ಪ್ರಕಟವಾಗಿದೆ. ನಾಗರತ್ನಮ್ಮನವರ ಕೆಲವು ಹಾಡುಗಳ ಧ್ವನಿಮುದ್ರಣವೂ ಲಭ್ಯ. ಇಷ್ಟಾದ ಮೇಲೆಯೂ ನಾಗರತ್ನಮ್ಮನವರ ಬಗ್ಗೆ ತಿಳಿಯಬೇಕಾದ್ದು ಇನ್ನೂ ತುಂಬಾ ಇದೆ ಎನ್ನುವ ಭಾವನೆ ನಮ್ಮನ್ನು ಕಾಡುತ್ತದೆ

ಶ್ರೀಮತಿ ಶಾಂತಿಯವರು ವಿ ಶ್ರೀರಾಂ ಅವರ ಪುಸ್ತಕವನ್ನು ಆಧರಿಸಿ ನಾಗರತ್ನಮ್ಮನವರ ಬಗ್ಗೆ ಲೇಖನವೊಂದನ್ನು ಬರೆದಿದ್ದಾರೆ. ವಾಸುದೇವಾಚಾರ್ಯ ಹಾಗೂ ಡಿವಿಜಿಯವರ ಇಲ್ಲಿ ಲೇಖನಗಳನ್ನು ಬಳಸಿಕೊಂಡಿದ್ದೇವೆ

ದಾಖಲೀಕರಣದಲ್ಲಿ ನಾವು ಎಂದೂ ಹಿಂದೆಯೇ ಉಳಿದಿದ್ದೇವೆ. ಹಾಗಾಗಿ ಇಂತಹವರ ಬದುಕಿನ ಬಗ್ಗೆ ನಮ್ಮ ತಿಳುವಳಿಕೆ ಅಪೂರ್ಣವಾಗಿಯೇ ಉಳಿಯುತ್ತದೆ. ಅಲ್ಲಿ ಇಲ್ಲಿ ಚದುರಿ ಹೋಗಿರುವ ಮಾಹಿತಿಗಳನ್ನು ಒಂದೆಡೆ ಕಲೆಹಾಕಿ ಅವನ್ನು ಕ್ರೋಢೀಕರಿಸಿ ದಾಖಲಿಸುವ ಕೆಲಸ ಇನ್ನಾದರೂ ವ್ಯವಸ್ಥಿತವಾಗಿ ಆಗಬೇಕಿದೆ. ಕರ್ನಾಟಕದ ಕಲಾವಿದರನ್ನು ಕುರಿತಂತೆ ನಿಮ್ಮಲ್ಲಿ ಯಾವುದಾದರೂ ದಾಖಲೆಗಳು, ಮಾಹಿತಿಗಳು, ಫೋಟೊಗಳು ಲಭ್ಯವಿದ್ದರೆ ಅವುಗಳನ್ನು ನಮ್ಮ ವೆಬ್ಸೈಟಿನಲ್ಲಿ ಹಂಚಿಕೊಳ್ಳಲಾಗುತ್ತದೆ.

ತಿಲ್ಲಾನವನ್ನು ಬೆಳೆಸುವ ನಿಟ್ಟಿನಲ್ಲಿ ನಿಮ್ಮ ಸಲಹೆ, ಸಹಾಯಕ್ಕೆ ಸದಾ ಸ್ವಾಗತ.

ಶೈಲಜ

 

ನವೆಂಬರ್ ತಿಂಗಳ ಕಾರ್ಯಕ್ರಮ

 ಚಿಗುರು

ಯುವ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸುವ ದೃಷ್ಟಿಯಿಂದಚಿಗುರುಎಂಬ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದ್ದೇವೆ. ಯುವಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ ಎಂದು ಗಾನಭಾರತೀ ದೃಢವಾಗಿ ನಂಬುತ್ತದೆ. ಪ್ರೇಕ್ಷಕರು ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು.

ನವೆಂಬರ್ 9 ಶುಕ್ರವಾರ

ಸಂಜೆ 6 - 7.15

ಕುಮಾರಿ ಮಹತೀ ರಘುರಾಂ                     ಗಾಯನ

ಪೂಜಾ ಶ್ರೀಧರ್                                    ಪಿಟೀಲು

ಪವನ್ ಮಾಧವ್                                         ಮೃದಂಗ

ಶ್ರೀನಿಧಿ ಆರ್ ಕೌಂಡಿನ್ಯ                             ಘಟ

 

ಕುಮಾರಿ ಮಹತೀ ರಘುರಾಂ ಗಾನಕಲಾ ಭೂಷಣ ವಿದ್ವಾನ್ ವಿ. ದೇಶಿಕಾಚಾರ್ ಅವರ ಮೊಮ್ಮಗಳು. ಕಳೆದ 10 ವರ್ಷಗಳಿಂದ ವಿದುಷಿ ಆರ್ ಎನ್ ಶ್ರೀಲತಾ ಅವರಲ್ಲಿ ಸಂಗೀತ ಶಿಕ್ಷಣ ಪಡೆಯುತ್ತಿ ದ್ದಾಳೆ. ಗಾನಭಾರತೀ ಸೇರಿದಂತೆ ಹಲವು ಪ್ರತಿಷ್ಠಿತ ಸಭೆಗಳು ನಡೆಸಿರುವ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುತ್ತಾಳೆ. ಸಧ್ಯ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

7.15ರಿಂದ 8.30ರವರೆಗೆ

ಶ್ಯಾಮಕೃಷ್ಣ ಸತೀಶ್                                   ಗಾಯನ

ಪೃಥ್ವೀ ಭಾಸ್ಕರ್                                           ಪಿಟೀಲು

ಮಲೋಲ ಸಿಂಹ                                         ಮೃದಂಗ

ಸುಧೀಂದ್ರ                                                     ಘಟ

ಶ್ಯಾವiಕೃಷ್ಣ ಅವರದು ಸಂಗೀತದ ಮನೆತನ. ಬಳ್ಳಾರಿ ವೆಂಕಟೇಶಾಚಾರ್ ಅವರ ಮೊಮ್ಮಗತಾಯಿ ವಿದುಷಿ ವಾಣಿ ಸತೀಶ್ ಅವರಲ್ಲಿ ಸಂಗೀತ ಕಲಿಯುತ್ತಿದ್ದಾನೆ. ಹಲವಾರು ಸಭೆಗಳಲ್ಲಿ ಕಾರ್ಯಕ್ರಮ ನೀಡಿದ್ದಾನೆ. ಶ್ಯಾಮಕೃಷ್ಣ ಹಲವಾರು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದ್ದಾನೆ. ಸಧ್ಯ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

14 ನವೆಂಬರ್ 2018 ಸಂಜೆ 6.30                                                 

ಗುರು ಲಲಿತಾ ದೊರೈ, ಪಂಡಿತ್ ತಿರತ್ ರಾಂ ಆಜಾದ್ ಹಾಗೂ ಪಂಡಿತ್ ವೈ ಎನ್ ಸಿಂಹ ಅವರ ಸಂಸ್ಮರಣೆಯಲ್ಲಿ ರಾಸವೃಂದ ಅರ್ಪಿಸುವ

ಭಾರತೀಯ ಜನಪದ ನೃತ್ಯಗಳು: ಕರ್ನಾಟಕ, ಗುಜರಾತ್, ಬಿಹಾರ್, ಹಿಮಾಚಲ, ಕೇರಳ, ಹರಿಯಾಣ ಹಾಗೂ ನಾಗಾಲ್ಯಾಂಡಿನ ನೃತ್ಯಗಳನ್ನೊಳಗೊಂಡ ಭಾರತೀಯ ಜನಪದ ನೃತ್ಯಗಳ ಕಾರ್ಯಕ್ರಮ. ನಂದಿನಿ ಈಶ್ವರ್ ಅವರ ನಿರ್ದೇಶನದಲ್ಲಿ ರಾಸವೃಂದದ ವಿದ್ಯಾರ್ಥಿಗಳು ಪ್ರಸ್ತುತಪಡಿಸುತ್ತಾರೆ.

 ನವೆಂಬರ್ 22, ಗುರುವಾರ ಸಂಜೆ 6 ಗಂಟೆಗೆ

ಟಿ ಎಂ ಕೃಷ್ಣ ಅವರಿಂದ ಗಾಯನ

ವಿದ್ವಾನ್ ಆರ್ ಕೆ ಶ್ರೀರಾಂಕುಮಾರ್-ಪಿಟೀಲು, ವಿದ್ವಾನ್ ಪ್ರವೀಣ್ ಕುಮಾರ್ - ಮೃದಂಗ,   ವಿದ್ವಾನ್ ವ್ಹಾಜಪಲ್ಲಿ ಆರ್ ಕೃಷ್ಣಕುಮಾರ್-ಘಟ

ನವೆಂಬರ್ 22 ಗುರುವಾರ, ಸಂಜೆ 6:00 ಗಂಟೆಗೆ,  ವಿದ್ವಾನ್ ಟಿ ಎಂ ಕೃಷ್ಣ  ಕೇವಲ ಶ್ರೇಷ್ಠಮಟ್ಟದ ಸಂಗೀತಗಾರರಷ್ಟೇ ಅಲ್ಲ, ಸಂಗೀತವನ್ನು ಕುರಿತು ಸ್ವಂತ ನಿಲುವನ್ನೂ ಹೊಂದಿರುವ ಕಲಾವಿದರು. ಸಮಾಜ, ರಾಜಕೀಯ, ಉಳಿದ ಕಲಾಪ್ರಕಾರಗಳು ಹೀಗೆ ಹತ್ತು ಹಲವಾರು ವಿಷಯಗಳನ್ನು ಕುರಿತು ಸಂಗೀತದಷ್ಟೇ  ಅಧಿಕಾರಯುತವಾಗಿ ಮಾತನಾಡಬಲ್ಲರು, ಬರೆಯಬಲ್ಲರು. ಟಿ ಎಂ ಕೃಷ್ಣ ಅವರು ವಿದ್ವಾನ್ ಬಿ ಸೀತಾರಾಮ ಶರ್ಮ ಅವರಲ್ಲಿ ಸಂಗೀತ ಶಿಕ್ಷಣ ಪ್ರಾರಂಭಿಸಿ, ರಾಗ-ತಾನ-ಪಲ್ಲವಿ ಕುರಿತು ಚೆಂಗಲ್ಪೇಟ್ ರಂಗನಾಥನ್ ಅವರ ಬಳಿ ವಿಶೇಷ ತರಬೇತಿ ಪಡೆದರು. ನಂತರ ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರಲ್ಲಿ ಉನ್ನತ ಶಿಕ್ಷಣ ಪಡೆದರು. 12ನೇ ವರ್ಷದಲ್ಲಿ ಮ್ಯೂಸಿಕ್ ಅಕಾಡೆಮಿ ಸಂಘಟಿಸಿದ ಸ್ಪಿರಿಟ್ ಆಫ್ ಯೂತ್ ಸರಣಿಯಲ್ಲಿ ಕಾರ್ಯಕ್ರಮ ನೀಡಿದರು. ದೇಶವಿದೇಶಗಳಲ್ಲಿ ತುಂಬಾ ಬೇಡಿಕೆ ಇರುವ ಕಲಾವಿದ ಸಾವಿರಾರು ಕಾರ್ಯಕ್ರಮಗಳು ಪ್ರಾತ್ಯಕ್ಷಿಕೆಗಳು, ಭಾಷಣಗಳನ್ನು ನಡೆಸಿಕೊಟ್ಟಿದ್ದಾರೆ. ಅವರ ಕೃತಿ ಸದರನ್ ಮ್ಯೂಸಿಕ್ ಸಂಗೀತ ಕ್ಷೇತ್ರದಲ್ಲಿ ಒಂದು ಅಲೆಯನ್ನೇ ಸೃಷ್ಟಿಸಿದೆ. ಅವರ ಇತ್ತೀಚಿನ ಪುಸ್ತಕ ರಿಶೇಪಿಂಗ್ ಮ್ಯೂಸಿಕ್. ಸಂಗೀತದಲ್ಲೂ ನಿರಂತರ ಹುಡುಕಾಟ ನಡೆಸುತ್ತಿರುವ ಇವರು ತಮ್ಮ ಮಾರ್ಗದಲ್ಲಿ ತೊಡಕಾಗಬಹುದಾದ ಎಲ್ಲಾ ರೂಢಿಗತ ಆಚರಣೆಗಳನ್ನೂ ಪ್ರಶ್ನಿಸುತ್ತಾ ಸಾಗಿದ್ದಾರೆ. ಸಂಗೀತದಲ್ಲಿ ಕಾಣುತ್ತಿರುವ ಅಸಮಾನತೆಯ ಬಗ್ಗೆ ಮಾತನಾಡುತ್ತಲೇ ಸಂಗೀತವನ್ನು ಜನರ ನಡುವೆ ತೆಗೆದುಕೊಂಡು ಹೋಗಲು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುತ್ತಿದ್ದಾರೆ. ಇದನ್ನು ಗುರುತಿಸಿ ಇವರಿಗೆ ಪ್ರತಿಷ್ಠಿತ ಮ್ಯಾಗ್ಸೆಸೇ ಪ್ರಶಸ್ತಿ ನೀಡಲಾಗಿದೆ.

 

ವೈಣಿಕ ಶಿಖಾಮಣಿ ವೀಣೆ ಶೇಷಣ್ಣನವರ ದಿನಾಚರಣೆಯ ಅಂಗವಾಗಿ ವೀಣಾ ಉತ್ಸವ

ನವೆಂಬರ್ 25ರಂದು ಭಾನುವಾರ ಬೆಳಗಿನ 10 ಗಂಟೆಯಿಂದ ರಾತ್ರಿ 8 ರವರೆಗೆ

ಬೆಳಿಗ್ಗೆ 10ರಿಂದ 11ರವರೆಗೆ

ವಿದ್ವಾನ್ ಡಾ ವಿಜಯರಾಘವನ್, ವಿದ್ವಾನ್ ಜಿ ಎಸ್ ರಾಮಾನುಜಂ, ವಿದ್ವಾನ್ ಎಸ್. ಮಂಜುನಾಥ್

11ರಿಂದ 12ರವರೆಗೆ

ವಿದುಷಿ ಶುಭಾ ಸಂತೋಷ್, ವಿದ್ವಾನ್ ಪಿ ನಟರಾಜ್, ವಿದ್ವಾನ್ ಎಸ್. ಮಂಜುನಾಥ್

12ರಿಂದ 1:30ರವರೆಗೆ

ವೀಣೆ ಶೇಷಣ್ಣನವರ ರಚನೆಗಳನ್ನು ಕುರಿತು ವಿಚಾರ ಸಂಕಿರಣ.

ಸ್ವರಜತಿಗಳು: ವಿದುಷಿ ನಾಗಮಣಿ ಶ್ರೀನಾಥ್

ವರ್ಣಗಳು: ವಿದುಷಿ ಗೀತಾ ರಮಾನಂದ್

ಕೀರ್ತನೆಗಳು: ವಿದ್ವಾನ್ ಎಚ್ ಕೆ ವೆಂಕಟರಾಂ

ತಿಲ್ಲಾಣಗಳುವಿದ್ವಾನ್ ಡಿ ಬಾಲಕೃಷ್ಣ

ಅಧ್ಯಕ್ಷತೆ : ಪ್ರೊ. ಮೈಸೂರು ವಿ ಸುಬ್ರಹ್ಮಣ್ಯ

 ಮಧ್ಯಾಹ್ನ 1:30ರಿಂದ 2.15ರವರೆಗೆ ಭೋಜನ ವಿರಾಮ

 ಮಧ್ಯಾಹ್ನ 2.15ರಿಂದ 3.15ರವರೆಗೆ:

ವಿದ್ವಾನ್ ಆರ್ ಕೆ ರಾಘವನ್, ವಿದ್ವಾನ್ ಸಾಯಿಶಿವು ಲಕ್ಷ್ಮೀಕೇಶವ್, ವಿದ್ವಾನ್ ವಿ.ಎಸ್.ರಮೇಶ್

 ಮಧ್ಯಾಹ್ನ 3.15ರಿಂದ 4.15ರವರೆಗೆ:

ವಿದುಷಿ ಅರುಣಾ ಕುಮಾರಿ, ವಿದ್ವಾನ್ ಎಚ್ ಎಲ್ ಶಿವಶಂಕರಸ್ವಾಮಿ, ವಿದ್ವಾನ್ ವಿ.ಎಸ್. ರಮೇಶ್

ಮಧ್ಯಾಹ್ನ 4.15ರಿಂದ 5.15ರವರೆಗೆ:

ವಿದುಷಿ ರಕ್ಷಿತಾ ರಮೇಶ್À, ವಿದ್ವಾನ್ ಎಂ ಆರ್ ಮಂಜುನಾಥ್, ವಿದ್ವಾನ್ ವಿಕ್ರಮ್

 ಸಂಜೆ 5.15ರಿಂದ 5.45ರವರೆಗೆ  ಚಹಾ ವಿರಾಮ

 ಸಂಜೆ 5:45ರಿಂದ 6ರವರೆಗೆ

ಸಭಾ ಕಾರ್ಯಕ್ರಮ

ಸಂಜೆ 6ರಿಂದ 7ರವರೆಗೆ:

ವಿದುಷಿ ಆರ್ ಎಸ್ ಜಯಲಕ್ಷ್ಮಿ, ವಿದ್ವಾನ್ ಸಿ ಚೆಲುವರಾಜು, ವಿದ್ವಾನ್ ಶರತ್ ಕೌಶಿಕ್

7ರಿಂದ 8ರವರೆಗೆ:

ವಿದುಷಿ ಪೊನ್ನಿ, ವಿದ್ವಾನ್ ಸಿ ಚೆಲುವರಾಜುವಿದ್ವಾನ್ ಶರತ್ ಕೌಶಿಕ್

 ಎಲ್ಲರಿಗೂ ಆದರದ ಸ್ವಾಗತ

ಮುನ್ನೋಟ: ಡಿಸೆಂಬರ್ ತಿಂಗಳ ಕಾರ್ಯಕ್ರಮ

ಡಿಸೆಂಬರ್ 14:                 ಶ್ರೀ ರಾಮಾನುಜ ವೈಭವ: ವಿದ್ವಾನ್ ಬದರಿಭೂಷಣ್ ಅವರ ತಂಡದವರಿಂದ ನೃತ್ಯರೂಪಕ

ಡಿಸೆಂಬರ್ 16:                 ಆರ್ಟಿಕ್ಯುಲೇಟ್ ಸಂಸ್ಥೆಯಿಂದ  ನೃತ್ಯ ಕಾರ್ಯಕ್ರಮ

ಡಿಸೆಂಬರ್ 21:                 ವೀಣಾ ಚೊಕ್ಕಮ್ಮ ಸಂಸ್ಮರಣಾ ಕಾರ್ಯಕ್ರಮ

ವಿದ್ವಾನ್ ಕೃಷ್ಣಮೂರ್ತಿ ಹಾಗೂ ತಂಡದವರಿಂದ ನಾಗಸ್ವರ ಕಾರ್ಯಕ್ರಮ

 

 

ಬೆಂಗಳೂರು ನಾಗರತ್ನಮ್ಮ - ಒಂದು ಅಣುಶಕ್ತಿ

ಶಾಂತಿ ನರಸಿಂಹನ್

 ಸಂತ ತ್ಯಾಗರಾಜರ ಆರಾಧನೆಯನ್ನು ಜನವರಿ ತಿಂಗಳಲ್ಲಿ ಶ್ರದ್ಧಾಭಕ್ತಿಗಳಿಂದ ಆಚರಿಸುವ ರೂಢಿ ದಕ್ಷಿಣ ಭಾರತದಲ್ಲೆಲ್ಲಾ ಇದೆ. ಇತ್ತೀಚಿನ ದಿನಗಳಲ್ಲಿ ಕರ್ಣಾಟಕ ಸಂಗೀತಗಾರರು ಪ್ರಪಂಚದ ಯಾವ ಮೂಲೆಯಲ್ಲೇ ಇದ್ದರೂ ಇದನ್ನು ಆಚರಿಸುತ್ತಾರೆ. ತಂಜಾವೂರಿನ ತಿರುವಯ್ಯಾರಿಗೆ ತ್ಯಾಗರಾಜರ ಆರಾಧಕರು ಒಂದು ಬಾರಿಯಾದರೂ ಭೇಟಿ ನೀಡುತ್ತಾರೆ. ಸಂದರ್ಭದಲ್ಲಿ ಯುಗದಲ್ಲೇ ಇದ್ದ ಒಂದು ಮಹಾಚೇತನವನ್ನು, ಅವರ ಕೊಡುಗೆ, ಅವರು ಎದುರಿಸಿದ ಕಷ್ಟ, ಛಲಬಿಡದೆ ನಿರ್ಭಿಡೆಯಿಂದ ಸಾಧಿಸಿದ ಮಹತ್ಕಾರ್ಯಗಳನ್ನು ನೆನೆಯಲೇಬೇಕು. ಇವರೇ ವಿದುಷಿ ಬೆಂಗಳೂರು ನಾಗರತ್ನಮ್ಮ.

ಭಗವಂತನ ಆರಾಧನೆಯನ್ನು ಸಂಗೀತದ ಮೂಲಕ ನಡೆಸುವುದು ಅನಾದಿ ಕಾಲದಿಂದಲೂ ಬಂದಿದೆ. ವಿಶೇಷವಾಗಿ ಸಂಗೀತನೃತ್ಯ ಬಲ್ಲವರನ್ನು ಬಹಳ ಸೂಕ್ಷ್ಮವಾಗಿ ಪರೀಕ್ಷಿಸಿ ದೇವರ ಸೇವೆಗೆ ಮತ್ತು ದೇವಸ್ಥಾನದ ವಿಶೇಷ ಕಾರ್ಯಗಳಿಗೆ ಮುಡುಪಾಗಿಟ್ಟಿದ್ದರು. ದೇವರ ಸ್ವತ್ತು ಎಂದು ಭಾವಿಸಿದ್ದ ಅವರನ್ನು ಮರ್ಯಾದೆಯಿಂದ ಆದರಿಸುತ್ತಿದ್ದರು. ಕೆಲವು ಅರಸರು, ಹಾಗೂ ಗಣ್ಯರು ಅವರನ್ನು ತಮ್ಮ ಸಂಸಾರದ ಒಂದು ಭಾಗವಾಗಿ ಸ್ವೀಕರಿಸಿ, ಉತ್ತುಂಗ ಸ್ಥಾನದಲ್ಲಿ ಇರಿಸಿದ್ದರು. ‘ದೇವದಾಸಿಎಂದು ಪರಿಗಣಿಸ ಲಾಗಿದ್ದ ಇವರು ಹೆಚ್ಚಾಗಿ ಕಾವೇರಿ, ಕೃಷ್ಣ, ಗೋದಾವರಿ ತೀರಗಳಲ್ಲಿ ಇದ್ದರು. ಕ್ರಿ.. 850ರಲ್ಲಿ ತಂಜಾವೂರಿನಲ್ಲಿ ಚೋಳರ ಕಾಲದಲ್ಲಿ ಆರಂಭ ವಾದ ಪದ್ಧತಿಯಲ್ಲಿ ಸುಮಾರು 400 ನರ್ತಕಿಯರು ಮತ್ತು ಇತರ ದೇವದಾಸಿಯರು ಇದ್ದರೆಂಬ ಉಲ್ಲೇಖವಿದೆ. ಸಂಪ್ರದಾಯ ಮುಂದೆ ಪಾಂಡ್ಯ, ವಿಜಯನಗರ ಮತ್ತು ಹೊಯ್ಸಳರ ಕಾಲದಲ್ಲೂ ಮುಂದುವರೆಯಿತು. ಆನಂತರ ನಾಯಕರ ಕಾಲದಲ್ಲಿ ಸಂಗೀತನೃತ್ಯಕ್ಕೆ ದುಡಿಯುತ್ತಿದ್ದ ದೇವದಾಸಿಯರನ್ನು ಒಂದು ಕುಲವಾಗಿಯೇ ಪರಿಗಣಿಸಲಾಗಿತ್ತು. ಕುಲದಲ್ಲಿ ಹೆಣ್ಣು ಮಗುವಿನ ಜನನವನ್ನು ಸಂಭ್ರಮಿಸು ತ್ತಿದ್ದರು. ಸುಮಾರು 19ನೇ ಶತಮಾನದವರೆಗೂ ವರ್ಗದವರು ಸಂಗೀತನೃತ್ಯಗಳ ಬೆಳವಣಿಗೆಗೆ ಬಹಳ ಶ್ರೇಷ್ಠಮಟ್ಟದ ಕೊಡುಗೆ ನೀಡಿದ್ದಾರೆ. ಪದಂ, ಜಾವಳಿ ಮುಂದೆ ಪ್ರಚಲಿತವಾಗಿದ್ದು ಇವರಿಂದಲೇ. ಇಂತಹ ವಾತಾವರಣದಲ್ಲಿ ನವೆಂಬರ್ ಮೂರು, 1878ರಲ್ಲಿ ಹೆಗ್ಗಡದೇವನಕೋಟೆಯ ಪುಟ್ಟಲಕ್ಷ್ಮಿ ಅಮ್ಮಾಳ್ ವೈಷ್ಣವಿ ಅವರಿಗೆ ಒಂದು ಹೆಣ್ಣು ಮಗುವಾಯಿತು. ಆಗ ಪುಟ್ಟಲಕ್ಷ್ಮಿಯವರಿಗೆ ಇಪ್ಪತ್ತೊಂದು ವರ್ಷಗಳು. ಆಕೆ ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದ  ದೇವದಾಸಿಯಾಗಿದ್ದರು. ಮಗುವಿನ ತಂದೆ ಮೈಸೂರಿನ ಹೆಸರಾಂತ ವಕೀಲರಾದ ಎನ್. ಸುಬ್ಬರಾವ್. ಒಂದು ವರುಷದವರೆಗೆ ಅವರು ತಾಯಿ-ಮಗುವನ್ನು ನೋಡಿಕೊಂಡರು. ಆದರೆ ಸಮಾಜ ತಾಯಿ ಮಕ್ಕಳನ್ನು ಬಹಿಷ್ಕರಿಸಿ, ಬೀದಿಯಲ್ಲಿ ಮೆರವಣಿಗೆ ಮಾಡಿತು. ಮುಂದಕ್ಕೆ ವಿಧಿ ಮೈಸೂರಿನ ಚಾಮರಾಜ ಒಡೆಯರ್ (1868) ಅವರ ಅರಮನೆ ಮುಜರಾಯಿಗೆ ಇವರನ್ನು ಸೇರಿಸಿತು. ಅಲ್ಲಿ ಆಸ್ಥಾನ ವಿದ್ವಾಂಸರಾಗಿದ್ದ ಗಿರಿಭಟ್ಟರ ತಮ್ಮಯ್ಯ ನವರು ಪುಟ್ಟಲಕ್ಷ್ಮಿ ಮತ್ತು ಅವರ ಕೂಸು ನಾಗರತ್ನಳಿಗೆ ಆಸರೆ ಕೊಟ್ಟು ಕಾಪಾಡಿದರು

ನಾಗರತ್ನಳಿಗೆ ಸಂಗೀತ, ಸಾಹಿತ್ಯ ಮತ್ತು ಸಂಸ್ಕø ವ್ಯಾಕರಣ, ಅದರಲ್ಲೂ ಶುದ್ಧ ಉಚ್ಚಾರಣೆ, ಅಮರಕೋಶ, ಜೈಮಿನಿ ಭಾರತ, ಕುಮಾರವ್ಯಾಸ ಭಾರತ, ರಾಜಶೇಖರ ವಿಲಾಸವನ್ನು ಗಿರಿಭಟ್ಟರು ಕಲಿಸಿದರು. ನಾಗರತ್ನಳ ಜೊತೆಯಲ್ಲಿ ಬಿಡಾರಂ ಕೃಷ್ಣಪ್ಪನವರ ಪುತ್ರ ವಿಶ್ವನಾಥಯ್ಯ ಮತ್ತು ಅರಮನೆಯ ಯಕ್ಷಗಾನ ಕಲಾವಿದರಿಗೂ ಅವರು ಹೇಳಿಕೊಡುತ್ತಿದ್ದರು. ಒಂಬತ್ತು ವರ್ಷದ ನಾಗರತ್ನ ಕನ್ನಡ, ತೆಲುಗು ಮತ್ತು ಇಂಗ್ಲಿಷ್ ಕಲಿತರು. ಆದರೆ ಕ್ರಮೇಣ ಸಾಮರಸ್ಯ ಹಳಸಿ ಪುಟ್ಟಲಕ್ಷ್ಮಿ ಮತ್ತು ಎಳೆಯ ನಾಗರತ್ನನನ್ನು ಗಿರಿಭಟ್ಟರು ಹೊರಗೆ ಅಟ್ಟಿದರು. ತಾಯಿಮಗಳು ಬೀದಿಯಲ್ಲಿ ಸಗಣಿಯ ಬೆರಣಿ ತಟ್ಟಬೇಕೆಂದು ಹಂಗಿಸಿದರು. ಇದರಿಂದ ಮನನೊಂದ ಪುಟ್ಟಲಕ್ಷ್ಮಿ ಮೈಸೂರಿಗೆ ಪುನಃ ಅರಸರ ಆಹ್ವಾನದ ಮೇರೆಗೆ ಮಾತ್ರ ಬರುತ್ತೇನೆ ಎಂದು ಪಣತೊಟ್ಟು, ಕಾಂಚೀಪುರ ಸೇರಿದರು. ಆನಂತರ ಅಲ್ಲಿ ಅವರಿಗೆ ತಾತ್ಕಾಲಿಕ ವಾಗಿ ಆಶ್ರಯ ಕೊಟ್ಟಿದ್ದ ಧನಕೋಟಿ ಸಹೋದರಿ ಯರ ಆರೋಗ್ಯ ಹದಗೆಟ್ಟಿದ್ದರಿಂದ ಅವರು ಬೆಂಗಳೂರಿನಲ್ಲಿದ್ದ ತಮ್ಮ ಸಹೋದರ ವೆಂಕಟ ಸ್ವಾಮಪ್ಪನವರ ಆಶ್ರಯಕ್ಕೆ ಬಂದರು. ಅವರು ನಗರ್ತಪೇಟೆಯ ಕಾಳಿಕಾಂಬ ದೇಗುಲದ  ಹತ್ತಿರ ವಾಸವಿದ್ದರು. ಸಂಗೀತ ಕಲಿಕೆಗೇನೂ ಕೊರv Éಯಾಗಲಿಲ್ಲ. ಗಾಯನ ಮತ್ತು ಪಿಟೀಲನ್ನು ತ್ಯಾಗರಾಜರ ಪರಂಪರೆಯ ಹೈದರಾಬಾದ್ ಮುನಿಸ್ವಾಮಪ್ಪನವರಿಂದ ಕಲಿತರು. ಬೆಂಗಳೂರು ಕಿಟ್ಟಣ್ಣನವರಲ್ಲಿ ನೃತ್ಯಾಭ್ಯಾಸ, ಮದ್ರಾಸಿನ ತಿರು ವೆಂಕಟಾಚಾರ್ ಅವರಿಂದ ಅಭಿನಯದ ಕಲಿಕೆ ಯೂ ಇದರ ಜೊತೆಗೆ ನಡೆಯುತ್ತಿತ್ತು. ಇದೆಲ್ಲಾ ತಾಯಿಯ ಶಿಸ್ತು ಮತ್ತು ಕಠಿಣ ಕ್ರಮದಿಂದ ಆಗುತ್ತಿತ್ತು. 1887ರಲ್ಲಿ ಬೆಂಗಳೂರು ಅರಮನೆ ಕಟ್ಟಡದ ಆರಂಭೋತ್ಸವಕ್ಕೆ ಒಂದು ತೇಲುವ ವೇದಿಕೆಯ ಮೇಲೆ ಪುಟ್ಟಲಕ್ಷ್ಮಿ ಮತ್ತು ನಾಗರತ್ನಳಿಗೆ ನೃತ್ಯ ಕಾರ್ಯಕ್ರಮ ನೀಡುವ ಸಂದರ್ಭ ಒದಗಿ ಬಂತು. ಆದಾದ ಕೆಲವು ದಿನÀಗಳಲ್ಲಿ ಪುಟ್ಟಲಕ್ಷ್ಮಿ ಕ್ಷಯರೋಗಕ್ಕೆ ತುತ್ತಾಗಿ 1891ರಲ್ಲಿ ತೀರಿಕೊಂಡರು. ವೇಳೆಗಾಗಲೆ ಬಟ್ಟಲು ಕಣ್ಣುಗಳ, ದಂತ Àಕಾಂತಿಯ, ಗುಂಗುರು ಕೂದಲಿನ, ಸ್ವಲ್ಪ ದುಂಡ ಗಿನ, ರೂಪವತಿ ನಾಗರತ್ನಮ್ಮ ಗುರು ಮುನು ಸ್ವಾಮಪ್ಪ ಅವರಲ್ಲಿ ಆಶ್ರಯ ಪಡೆದರು. ತಾಯಿಯ ಆಸೆಯಂತೆ ಮೈಸೂರಿನ ಅರಮನೆ ಯಲ್ಲಿ ಸಂಗೀತ, ನೃತ್ಯ ಪ್ರಸ್ತುತಪಡಿಸಲು ಅವರಿಗೆ ಇನ್ನೂ ಸಮಯ ಒದಗಿ ಬಂದಿರಲಿಲ್ಲ. ಆದರೆ ಮೈಸೂರಿ ಆಸ್ಥಾನ ವಿದ್ವಾಂಸರಾದ ವೀಣೆ ಶೇಷಣ್ಣನವರ ಮನೆಯಲ್ಲಿ ಕಛೇರಿಗೆ ಅವಕಾಶ  ದೊರಕಿತು. ವೀಣೆ ಸುಬ್ಬಣ್ಣ, ಬಿಡಾರಂ ಕೃಷ್ಣಪ್ಪ ನವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗಳಿಸಿತು. ಹೀಗೆಯೇ ಕ್ರಮೇಣ ಮೈಸೂರು ಅರಸರ ಸಮ್ಮುಖದಲ್ಲಿ ಸಂಗೀತನೃತ್ಯ ಸೇವೆ ಸಲ್ಲಿಸುವ ಅವಕಾಶ ದೊರಕಿ, ಅವರ ತಾಯಿಯ ಹರಕೆ ಮತ್ತು ಶಪಥವನ್ನು ಪೂರೈಸಿದರು.

ಮುಂದೆ ಬೆಂಗಳೂರಿನಲ್ಲೇ ನೆಲೆಸಿ, ಅನೇಕ ಕಛೇರಿಗಳನ್ನು ಪ್ರಸ್ತುತ ಪಡಿಸುತ್ತಾ ಚಾಮರಾಜ ಪೇಟೆಯ ವೆಂಕಟರಮಣಸ್ವಾಮಿ ದೇವಸ್ಥಾನ ದಲ್ಲಿಯೂ ಸೇವೆ ಸಲ್ಲಿಸುತ್ತಿದ್ದರು. ದೇವದಾಸಿ ಎಂಬ ಭಾವನೆ ಇಟ್ಟುಕೊಳ್ಳದೆ ಅನೇಕ ಸಂಗೀತ ಪ್ರಿಯರು ಅಲ್ಲಿಗೆ ಬರುತ್ತಿದ್ದರುಅವರಲ್ಲಿ ಜಸ್ಟಿಸ್ ನರಹರಿರಾವ್ ಸೀತಮ್ಮ ದಂಪತಿಗಳು, ದಿವಾನ್ ರಂಗಾಚಾರುಲು ಮತ್ತು ಮೊಮ್ಮಕ್ಕಳು, ದಿವಾನ್ ಶೇಷಾದ್ರಿ ಅಯ್ಯರ್ ಇವರು ಪ್ರಮುಖರು. ನರಹರಿರಾಯರು ನಿವೃತ್ತಿಯಾದ ಮೇಲೆ ಬೆಂಗಳೂರಿನಲ್ಲಿಮೌಂಟ್ ಜಾಯ್ಎನ್ನುವ ಬೆಟ್ಟದ ಮೇಲೆ ಒಂದು ಪುಟ್ಟ ರಂಗಮಂದಿರ ಕಟ್ಟಿಸಿ, ಅಲ್ಲಿ ನಾಗರತ್ನಮ್ಮನವರ ಕಛೇರಿಯನ್ನು  ಏರ್ಪಡಿಸುತ್ತಲೇ ಇದ್ದರು. ಅನೇಕ ಶ್ರೋತೃಗಳು, ಗಣ್ಯರು, ರಸಿಕರು ಅಲ್ಲಿಗೂ ಬರುತ್ತಿದ್ದರು. ಈಗಲೂ ಅದನ್ನುನರಹರಿರಾಯರ ಗುಡ್ಡಎಂದೇ ಕರೆಯುತ್ತಾರೆ. ಇಲ್ಲಿ ಸಂಗೀತನೃತ್ಯ ಕುರಿತು ಹಲವು ಚರ್ಚೆ, ವಿಶ್ಲೇಷಣೆಗಳು  ನಡೆಯುತ್ತಿದ್ದವು. ನಾಗರತ್ನಮ್ಮನವರ ಜೊತೆ ಮಾತನಾಡುವುದಕ್ಕೆ ವೀಣೆ ಸುಬ್ಬಣ್ಣ, ಹಿಂದೂಸ್ತಾನಿ  ದಿಗ್ಗಜ ವಿದ್ವಾನ್ ಭಾತ್ಕಂಡೆ (ಹಿರಿಯ ಹಿಂದೂಸ್ತಾನಿ ಗಾಯಕರಾದ ಪಂಡಿತ್ ಇಂದುಧರ ನಿರೋಡಿ ಭಾತ್ಕಂಡೆ ಪರಂಪರೆಯ ಮೂರನೇ ತಲೆಮಾರಿಗೆ ಸೇರಿದ ವರು) ಮತ್ತಿತರರು ಬರುತ್ತಿದ್ದರು. ನರಹರಿರಾಯರು ಶಿವನ ದೇಗುಲ ಕಟ್ಟಿಸಿದ್ದರು. 1903 ವೇಳೆಗೆ ಜಸ್ಟಿಸ್ ರಾವ್ ಅವರ ಆರೋಗ್ಯ ಕೆಟ್ಟಿದ್ದರಿಂದ ನಾಗರತ್ನಮ್ಮನನ್ನು ಅವರು ಮದ್ರಾಸಿನ ಸಂಗೀತಾ ಸಕ್ತ ಉದ್ಯಮಿ ಸಿ.ಎಸ್. ರಾಜರತ್ನ ಮೊದಲಿಯಾರ್ ಅವರಿಗೆ ಪರಿಚಯಿಸಿ, ಇಪ್ಪತ್ತೈದರ ಹರೆಯದ ನಾಗರತ್ನಮ್ಮನನ್ನು ಮದರಾಸಿಗೆ ಕಳುಹಿಸಿದರು. ಅಲ್ಲಿಂದ ನಾಗರತ್ನಮ್ಮನವರ ಘನವಾದ ಜೀವನ ಆರಂಭವಾಯಿತು. ಅನೇಕ ಚರ್ಚೆ, ಸಂವಾದ ಗಳಲ್ಲಿ ಭಾಗವಹಿಸಲು ಆಂಧ್ರಪ್ರದೇಶಕ್ಕೂ ಹೋಗ ಲು ಪ್ರಾರಂಭಿಸಿದರು. ಅವುಗಳಲ್ಲಿ ಭಾಗವಹಿಸು ವುದು ಅವರಿಗೆ ಸಂತೋಷದಾಯಕವಾಗಿತ್ತು

ಮುದ್ದುಪಳನಿ 1750ರಲ್ಲೇ ರಚಿಸಿದ್ದರಾಧಿಕಾ ಸ್ವಾಂತನಮುಕೃತಿಯನ್ನು ನಾಗರತ್ನಮ್ಮನವರು  ಹೊಸ ಮುನ್ನುಡಿಯೊಂದಿಗೆ ಮತ್ತೆ 1911ರಲ್ಲಿ ಪ್ರಕಟಿಸಿದರು. ಹಲವು ಕಾರಣಗಳಿಗಾಗಿ ಅದು ವಿವಾದಕ್ಕೊಳಗಾಯಿತು. ನ್ಯಾಯಾಲಯದವರೆಗೂ ಹೋಯಿತು. ಸರ್ಕಾರದ ಧೋರಣೆಯ ವಿರುದ್ಧ ಅವರು ಹೋರಾಡಿದರು. ಕೃತಿಯನ್ನು ಹೆಮ್ಮೆ ಮತ್ತು ದಿಟ್ಟತನದಿಂದ ಸಮರ್ಥಿಸಿಕೊಂಡರುಅವರು ಅನೇಕ ಭಕ್ತಿ ಪ್ರಧಾನವಾದ ಪುಸ್ತಕಗಳನ್ನು ಬರೆದಿದ್ದಾರೆ. ಅವರ ವೃತ್ತಿಬದುಕು ಕೂಡ ಆಗ ಅಷ್ಟೇ ಉತ್ತುಂಗದಲ್ಲಿತ್ತು. ಅವರು ತಿರುಚಿನಾಪಳ್ಳಿ, ವೆಂಕಟಗಿರಿ, ನೆಲ್ಲೂರು ಹಾಗೂ ತಂಜಾವೂರಿನಲ್ಲಿ ಬಹು ಬೇಡಿಕೆಯ ಕಲಾವಿದರಾಗಿದ್ದರು. ಸಿಲೋನಿ ಜಾಫ್ನಾದಲ್ಲೂ ಅವರು ಕಚೇರಿ ಮಾಡಿದರು. ಊರಿಂದೂರಿಗೆ ಮಡಿಸಿ ಒಯ್ಯಬಲ್ಲ ತಂಬೂರಿ ಯನ್ನು ಮೊದಲು ಮಾಡಿಸಿ ಬಳಸಿದ್ದು  ನಾಗರತ್ನ ಮ್ಮನವರು. ಇದನ್ನು ಮೈಸೂರು ವಾಸುದೇವಾ ಚಾರ್ಯರೂ ಹೊಗಳಿದ್ದಾರೆ. ಅವರ ತೆಲುಗು ಭಾಷೆಯ ಪಾಂಡಿತ್ಯ ಅವರ ಕಛೇರಿ ಮತ್ತು ಹರಿಕಥೆಗಳಲ್ಲಿ ಎದ್ದು ಕಾಣುತ್ತಿತ್ತು. ಹಾಗಾಗಿ ಸಂತ ತ್ಯಾಗರಾಜರ ಕೀರ್ತನೆಗಳನ್ನು ಬಹಳ ನೆಮ್ಮದಿ ಯಿಂದ ಹಾಡುತ್ತಿದ್ದರು. ಮುತ್ತುಸ್ವಾಮಿ ದೀಕ್ಷಿತರ ಕೃತಿಗಳು ಸಂಸ್ಕøತದಲ್ಲಿದ್ದುದ್ದರಿಂದ ಮನದಾಳ ದಿಂದ ಹಾಡಲು ಆಗುವುದಿಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ. ಅವರ ತಾಯಿ ಹಾಗೂ ಗುರುಗಳ ದಿವಸವನ್ನು ಬೆಂಗಳೂರಿನ ಕೋಟೆ ರಾಮನ ಸನ್ನಿಧಿಯಲ್ಲಿ ಹಾಡುತ್ತಾ ಆಚರಿಸುತ್ತಿದ್ದರು. ಮೇಲುಕೋಟೆಯ ವೈರಮುಡಿ ಉತ್ಸವಕ್ಕೂ ಉದಾರವಾಗಿ ಕಾಣಿಕೆ ನೀಡುತ್ತಿದ್ದರು. ಅಲ್ಲಿ ಅವರ ಕಛೇರಿ ಇರುತ್ತಲೇ ಇತ್ತು.  

ನಾಗರತ್ನಮ್ಮನವರಿಗೆ ದೇವರು ಮಕ್ಕಳ ಭಾಗ್ಯ ಕರುಣಿಸಲಿಲ್ಲ. ಚಿಕ್ಕ ವಯಸ್ಸಿನಲ್ಲಿ ಒಂದು ಹೆಣ್ಣು ಮಗು ಜನಿಸಿದರೂ ಅದು ಬೇಗ ತೀರಿಕೊಂಡಿತು. ನಂತರ ಒಂದು ಹೆಣ್ಣುಮಗುವನ್ನು ಬೆಳೆಸಿ ಸಂಗೀತನೃತ್ಯ ಕಲಿಸಿದರು. ಆದರೆ ಕ್ರಮೇಣ ಹುಡುಗಿಯ ತಂದೆತಾಯಿಗೆ ಹಣದಾಸೆ ಹೆಚ್ಚಾಗಿ ನಾಗರತ್ನಮ್ಮನವರ ಪ್ರಾಣಕ್ಕೇ ಕುತ್ತಾಗುವ ಸನ್ನಿವೇಶ ಒದಗಿತು. ಆಗ ಅವರು ಹುಡುಗಿಯನ್ನು ವಾಪಸ್ಸು ಕಳಿಸಿದರು. ಮನನೊಂದಿದ್ದ ಅವರು ಸುಬ್ರಹ್ಮಣ್ಯ ನಾಯ್ಡು ಎಂಬ ಹುಡುಗನನ್ನು ಬೆಳೆಸಲಾರಂಭಿಸಿದರು. ಹುಡುಗ ವೀಣಾ ಧನಂ ಅವರಿಂದ ವೀಣೆ ಕಲಿತು, ನಂತರ ನೈನಾಪಿಳ್ಳೈ ಅವರಲ್ಲಿ ವಿದ್ಯಾಭ್ಯಾಸ ಮಾಡಿ ಮುಂದೆಚಿತ್ತೂರು ಸುಬ್ರಹ್ಮಣ್ಯ ಪಿಳ್ಳೈಎಂದು  ಹೆಸರುವಾಸಿಯಾದರು. ನಾಗರತ್ನಮ್ಮ ಮದ್ರಾಸಿನ  ಟ್ರಿಪ್ಲಿಕೇನಿನ ಕೋಥೈನಾಯಕಿ ಎಂಬ ಹೆಣ್ಣು ಮಗಳಿಗೆ ಸಂಗೀತ ಕಲಿಸಿ, ವೇದಿಕೆಯಲ್ಲಿ ಹಾಡಲು ಪ್ರೋತ್ಸಾಹ ನೀಡಿದರು. ಅವಳನ್ನು ಮೈಸೂರಿಗೆ ತಮ್ಮ ಗುರು ಬಿಡಾರಂ ಕೃಷ್ಣಪ್ಪನವರ ಬಳಿಗೆ ಕಳುಹಿಸಿ, ವಿದ್ವಾನ್ ಟಿ. ಚೌಡಯ್ಯನವರ ಸಮ್ಮುಖ ದಲ್ಲಿ ಶ್ರೀರಾಮನವಮಿ ಉತ್ಸವದಲ್ಲಿ  ಹಾಡಿಸಿದರು. ಮೈಸೂರು ವಾಸುದೇವಾಚಾರ್ ಅವರ ಎದುರಿ ನಲ್ಲಿ ಹಾಗೂ ಅರಮನೆಯಲ್ಲಿ ಹಾಡುವ ಅವಕಾಶ ವನ್ನೂ ಕಲ್ಪಿಸಿಕೊಟ್ಟರು. ಆನಂತರದಲ್ಲಿ ಕೆಲಕಾಲ ಅವರು ತಮ್ಮ ಸಾಕು ಪ್ರಾಣಿಗಳಾದ ನಾಯಿ, ಗಿಣಿಗಳ ಜೊತೆಗೆ ಪ್ರೀತಿ ಹಂಚಿಕೊಳ್ಳುತ್ತಿದ್ದರು.

ಅದೇ ಸಮಯದಲ್ಲಿ ಅವರಿಗೆ ಉಮಯಾಳ ಪುರಂ ಪಂಚಾಪಕೇಶ ಭಾಗವತರು ಒಂದು ವಿಶಿಷ್ಟವಾದ ತ್ಯಾಗರಾಜರ ಪಟವನ್ನು ಕೊಟ್ಟು ಅದನ್ನು ದಿನಾ ಪೂಜಿಸಬೇಕೆಂದು ತಿಳಿಸಿದರು. ಅದನ್ನು ಭಕ್ತಿಭಾವದಿಂದ ಬೆಳ್ಳಿ ಪೆಟ್ಟಿಗೆಯಲ್ಲಿಟ್ಟು, ನಿತ್ಯ ದೀಪ ಬೆಳಗಿಸಿ, ತ್ಯಾಗರಾಜರ ಕೃತಿಗಳನ್ನು ಹಾಡುತ್ತಾ ಮೈಮರೆಯುತ್ತಿದ್ದರು. ಒಂದು ದಿನ ಮಧ್ಯಾಹ್ನದ ಕನಸಿನಲ್ಲಿ ತ್ಯಾಗರಾಜರೇ ಬಂದು ಅವರನ್ನು ಹರಸಿದಂತೆ ಅವರಿಗೆ ಭಾಸವಾಯಿತುಕಾಕತಾಳಿಯವೆಂಬಂತೆ ಮರುದಿನ ಅವರ ಗುರು ಬಿಡಾರಂ ಕೃಷ್ಣಪ್ಪನವರ ಪತ್ರ ಬಂದಿತು. ಅವರು ತಿರುವಯ್ಯಾರಿಗೆ ಬಂದಿರುವುದಾಗಿಯೂ, ಅಲ್ಲಿ ಸಂತ ತ್ಯಾಗರಾಜರ ಸಮಾಧಿ ಬಹಳ ಶೋಚ ನೀಯವಾಗಿ ಇರುವುದನ್ನು ದುಃಖದಿಂದ ಬಣ್ಣಿಸಿ ದ್ದರು. ಅದನ್ನು ಸರಿಪಡಿಸುವುದು ನಾಗರತ್ನಮ್ಮ ನಿಂದ ಮಾತ್ರ ಸಾಧ್ಯವೆಂದು ಬರೆದಿದ್ದರು. ಅಲ್ಲಿ ಸಮಾಧಿ ಇರುವ ವಿಷಯವೇ ತಿಳಿಯದಿದ್ದ ನಾಗರತ್ನಮ್ಮನವರಿಗೆ ಕಣ್ಣು ತೆರೆಸಿದಂತಾಯಿತು.

6ನೇ ಜನವರಿ 1847ರಲ್ಲಿ ತೀರಿಕೊಂಡ ತ್ಯಾಗರಾಜರ ಆರಾಧನೆ ತಿರುವೈಯ್ಯಾರಿನಲ್ಲಿ ಸಣ್ಣದಾಗಿ ವರ್ಷಕ್ಕೊಮ್ಮೆ ನಡೆಯುತ್ತಿತ್ತುಸ್ವಾಮಿಗಳ ಅಂತ್ಯಕ್ರಿಯೆ ಆದ ಮೇಲೆ, ಸಮಾಧಿಯ ಮೇಲೆ ಬೃಂದಾವನವನ್ನು ನಿರ್ಮಿಸಿ ತುಳಸೀಗಿಡ ನೆಡಲಾಗಿತ್ತು. 1855ರವರೆಗೂ ಪ್ರತಿ ವರ್ಷವೂ ಅವರ ಅಣ್ಣನ ಮೊಮ್ಮಗ ಪಂಚಾಪಕೇಶಯ್ಯ ಶ್ರಾದ್ಧಕರ್ಮ ಮಾಡುತ್ತಿದ್ದರು. ಅವರ ಮರಣದ ನಂತರ ಅದು ನಿಂತುಹೋಗಿತ್ತು. ಆನಂತರ ಅವರ ಶಿಷ್ಯ ಸುಬ್ಬರಾಮ ಭಾಗವತರು ಪುಣ್ಯ ತಿಥಿಯನ್ನು ಸಮಾಧಿಯ ಬಳಿ ಮುಂದುವರೆಸಿ ದರು. 1903ರಲ್ಲಿ ತ್ಯಾಗರಾಜರ ಶಿಷ್ಯರಾಗಿದ್ದ ಉಮಯಾಳಪುರಂ ಸಹೋದರರು - ಕೃಷ್ಣ ಮತ್ತು ಸುಂದರ ಭಾಗವತರು - ಸಮಾಧಿಯನ್ನು ದುರಸ್ಥಿ ಪಡಿಸಿ, ದೀಪ ಹೊತ್ತಿಸಿ, ನೈವೇದ್ಯ ಮಾಡುವ ವ್ಯವಸ್ಥೆ ಮಾಡಿದರು. ಪುಣ್ಯತಿಥಿ ಯನ್ನು ಆರಾಧನೆ ಯಾಗಿ ಪರಿವರ್ತಿಸಿ, ಸಂಗೀತ, ಹರಿಕಥೆಗಳನ್ನು ಏರ್ಪಡಿಸಲಾರಂಭಿಸಿದರು. ಆದರೆ ಇವರಿಗೆ ವಯಸ್ಸಾಗಿದ್ದರಿಂದ, ಸಮಾಧಿಯ ನಿರ್ವಹಣೆಯನ್ನು ತಮ್ಮ ಶಿಷ್ಯ ಉಮಯಾಳ ಪುರಂ ಪಂಚಾಪಕೇಶ ಭಾಗವತರಿಗೆ  ವಹಿಸಿದರು. ನಂತರ ತಿಲ್ಲೈಸ್ಥಾನಂ ಶಾಖೆಯ ನರಸಿಂಹ ಭಾಗವತರು ಹಾಗೂ ಅವರ ತಮ್ಮ ಪಂಜು ಭಾಗವತರು ಕೂಡ ತ್ಯಾಗರಾಜರ ಆರಾಧನೆ ಯನ್ನು 1904ರಲ್ಲಿ ಪ್ರಾರಂಭಿಸಿದರು. ಶ್ರಾದ್ಧ, ಪೂಜೆ ಮತ್ತು ದ್ವಿಜರಿಗೆ ಅನ್ನಸಂತರ್ಪಣೆಯನ್ನು ಬೃಂದಾವನದ ಹತ್ತಿರ ಮುಗಿಸಿ, ಊರೊಳಗೆ ಪಚ್ಚಾಯಿಯಪ್ಪನ್ ಅವರ ಛತ್ರದಲ್ಲಿ ಹರಿಕಥೆ, ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದವು.

ನರಸಿಂಹ ಭಾಗವತರಿಗೆ ಇಷ್ಟಕ್ಕೇ ಸಮಾಧಾನ ಆಗಲಿಲ್ಲ. ಹಾಗಾಗಿ, ‘ಸ್ವಾಮಿಗಳ್ ಕಥಾಎಂದು ತ್ಯಾಗರಾಜ ಬಗ್ಗೆ ಅವರು ಹರಿಕಥೆ ಮಾಡಿ, ತುಂಬಾ ಪ್ರಚಾರ ನೀಡಿದರು. ಅನೇಕ ಸರ್ಕಾರಿ ಅಧಿಕಾರಿಗಳನ್ನು, ಭಾಗವತರನ್ನು ಸಂಪರ್ಕಿಸಿ, ಅವರಿಂದ ದೇಣಿಗೆ ಪಡೆದು, 1909 ಹೊತ್ತಿಗೆ ತ್ಯಾಗರಾಜರ ಆರಾಧನೆಯನ್ನು ಒಂದು ಪ್ರತಿಷ್ಠಿತ ಕಾರ್ಯಕ್ರಮವನ್ನಾಗಿ ಮಾಡಿದರು.

ಆದರೆ 1911ರಲ್ಲಿ ಸಹೋದರರ ನಡುವೆ ವೈಮನಸ್ಯ ಉಂಟಾಯಿತು. ಆಗ ಹಿರಿಯವರಾದ ನರಸಿಂಹ ಭಾಗವತರು ಕುಂಭಕೋಣಂನಲ್ಲಿಯೂ ಮತ್ತು ಕಿರಿಯವರಾದ ಪಂಜು ಭಾಗವತರು ತಿರುವೈಯ್ಯಾರಿನಲ್ಲೂ ಆರಾಧನೆ ನಡೆಸಲು ಆರಂಭಿಸಿದರು. ಹಿರಿಯವರ ಬಣವನ್ನು ಪೆರಿಯ ಕಚ್ಚಿ ಎಂದೂ ಕಿರಿಯವರ ಬಣವನ್ನು ಚಿನ್ನಕಚ್ಚಿ ಎಂದೂ ಜನ ಕರೆಯಲಾರಂಭಿಸಿದರು. ಆದರೆ ಒಂದು ವರ್ಷದ ನಂತರ ಎರಡು ಬಣಗಳೂ ತಿರುವೈಯ್ಯಾರಿನಲ್ಲಿಯೇ ಬೇರೆ ಬೇರೆಯಾಗಿ ಆರಾಧನೆ ನಡೆಸಲು ಪ್ರಾರಂಭಿಸಿತು. ಎರಡು ಬಣಗಳಿಗೂ ವಿದ್ವಾಂಸರನ್ನು, ವಿದ್ವನ್ಮಣಿಗಳನ್ನು ತಮ್ಮ ತಮ್ಮ ಬಣಕ್ಕೆ ಸೇರಿಸಿಕೊಳ್ಳುವ ತವಕವಿತ್ತು. ಎರಡನ್ನೂ ಸೇರದೆ ಇದ್ದವರೂ ಕೆಲವರಿದ್ದರುಅದರಲ್ಲಿ ಒಬ್ಬರು ಹರಿಕೇಶನಲ್ಲೂರು ಮುತ್ತೈಯ್ಯ ಭಾಗವತರು. ಎರಡು ಗುಂಪುಗಳೂ ತಿರು ವೈಯ್ಯಾರಿನಲ್ಲಿ ಆರಾಧನೆಯ ವೇಳೆ ಒಳ್ಳೆಯ ಕಛೇರಿಗಳನ್ನು, ಹರಿಕಥೆಗಳನ್ನು ಏರ್ಪಡಿಸುತ್ತಿದ್ದರು. ಸಂದರ್ಭದಲ್ಲಿ ಅಲ್ಲಿ ನಡೆಯುತ್ತಿದ್ದ ಕೆಲವು ಅಹಿತಕರ ಘಟನೆಗಳು ಇಂದು ದಂತಕತೆಗಳಾಗಿವೆ. ನಾಗಸ್ವರ ವಿದ್ವಾಂಸರಿಗೆ ಮತ್ತು ಮಹಿಳೆಯರಿಗೆ ಅಲ್ಲಿ ಸಂಗೀತಸೇವೆ ನಡೆಸಲು ಅವಕಾಶವಿರಲಿಲ್ಲ. ಎರಡು ಬಣದವರಿಗೂ ಆರಾಧನೆ ಪ್ರತಿಷ್ಠೆಯ ವಿಚಾರವಾಗಿತ್ತು. ಆದರೆ ಯಾರಿಗೂ ತ್ಯಾಗರಾಜರ ಸಮಾಧಿಯನ್ನು ಪುನರುಜ್ಜೀವಗೊಳಿಸುವುದು ಮುಖ್ಯವಾಗಿರಲಿಲ್ಲ.  

 ಗುರುಗಳ ಪತ್ರ ಬಂದ ನಂತರ ನಾಗರತ್ನಮ್ಮ  ತಿರುವೈಯ್ಯಾರಿಗೆ ಹೋಗಿ ತ್ಯಾಗರಾಜರ ಅಣ್ಣನ ಮೊಮ್ಮಗÀ ರಾಮುಡು ಭಾಗವತರ ಜೊತೆಯಲ್ಲಿ ಸಮಾಧಿಯ ಬಳಿ ಹೋದರು. ಸಮಾಧಿಯನ್ನು ಮುಳ್ಳುಕಂಟಿಗಳು, ಹಾವುಹುಪ್ಪಟ್ಟೆಗಳು ಮತ್ತು ಹೊಲಸು ಆವರಿಸಿಕೊಂಡಿತ್ತು. ಅಲ್ಲಿನ ಪರಿಸ್ಥಿತಿ ನೋಡಿ ಬಹಳÀ ದುಃಖತಪ್ತರಾದ ನಾಗರತ್ನಮ್ಮ ದಿನದಿಂದಲೇ ಅಂದರೆ ತಮ್ಮ 43 ವಯಸ್ಸಿನಲ್ಲಿ ಸಂತ ತ್ಯಾಗರಾಜರ ದಾಸಿಯಾಗಿಬಿಟ್ಟರು.

ಅವರು ಮೊದಲು ಮಾಡಿದ ಕಾರ್ಯ ಸಮಾಧಿಯ ಸುತ್ತಲಿನ ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಂಡದ್ದು. ಮರಾಠ ಸೂರ್ವೆ ವಂಶಸ್ಥರ ಟ್ರಸ್ಟ್ ಒಡೆತನದಲ್ಲಿದ್ದ ಸ್ಥಳವನ್ನು ಏಲಿನೇಟ್ ಮಾಡಲು ಸಾಧ್ಯವಿರಲಿಲ್ಲ. ಅದೇ ಕ್ರಯಕ್ಕೆ ತಮ್ಮ ಹೆಸರಿನಲ್ಲಿದ್ದ ಇನ್ನೊಂದು ರೆವಿನ್ಯೂ ಜಾಗವನ್ನು ಟ್ರಸ್ಟ್ಗೆ ಕೊಟ್ಟು ಸಮಾಧಿಯ ಜಾಗವನ್ನು ತಮ್ಮ ಹೆಸರಿಗೆ ಬದಲಿಸಿಕೊಂಡರು. ವ್ಯವಹಾರವನ್ನು  ಒಂದೇ ವಾರದಲ್ಲಿ ಮುಗಿಸಿ 27ನೇ ಅಕ್ಟೋಬರ್ 1921ರಲ್ಲಿ ಸಮಾಧಿಯ ಬಳಿ ದೇವಸ್ಥಾನ ನಿರ್ಮಿ ಸಲು ಆರಂಭಿಸಿಯೇಬಿಟ್ಟರು. ಸುದ್ದಿಯನ್ನು ಪೆರಿಯ ಮತ್ತು ಚಿನ್ನ ಕಚ್ಚಿ ಪಂಗಡಗಳಿಗೆ ತಿಳಿಸಿ ದಾಗ ಅವರು ಬಗ್ಗೆ ಯಾವ ಆಸಕ್ತಿಯನ್ನು ತೋರಿಸಲಿಲ್ಲ.

ಮದ್ರಾಸಿನಲ್ಲಿ ತಿರುವಯ್ಯಾರಿನ ದೇವಸ್ಥಾನ ಕ್ಕಾಗಿ ಹಣ ಸಂಗ್ರಹಿಸಲು ಕಛೇರಿ ಮಾಡಲು  ಆರಂಭಿಸಿ, ಬಿಡುವಿದ್ದಾಗಲೆಲ್ಲಾ ತಿರುವೈಯ್ಯಾರಿಗೆ ಹೋಗಿ ನಿರ್ಮಾಣಕಾರ್ಯ ಗಮನಿಸುತ್ತಿದ್ದರು. ದೇವÀಸ್ಥಾನದ ಪೂರ್ಣ ಕಟ್ಟಡ ಮುಗಿದಾಗ ಅದಕ್ಕೆ ಅನೇಕ ವಿದ್ವಾಂಸರು ಕೊಟ್ಟ ಕಾಣಿಕೆ ಮತ್ತು ಮುಖ್ಯವಾಗಿ ಹರಿಕಥಾ ವಿದುಷಿ ಪದ್ಮಾಸಿನಿ ಬಾಯಿ ಅವರು ದಾನ ಮಾಡಿದ ಬೆಳ್ಳಿ ಪಾತ್ರೆಗಳು, ಅಚ್ಚುಕಟ್ಟಾದ ತೋಟ, ತೆಂಗಿನ ತೋಪು, ಕಾವೇರಿ ದಡದ ರಂಜನೀಯ ಸ್ಥಳವನ್ನು ನೋಡಿ ಎಲ್ಲರೂ ಮೋಡಿಗೆ ಒಳಗಾದರು. 7ನೇ ಜನವರಿ 1925ರಲ್ಲಿ ನಡೆದ ದೇವಸ್ಥಾನದ ಪ್ರತಿಷ್ಠಾಪನೆಯ ನಂತರವೂ ಆರಾಧನೆ ನಡೆಸುವುದಕ್ಕೆ ಎರಡು ಬಣಗಳ ನಡುವೆ ಪೈಪೋಟಿ ನಡೆಯುತ್ತಲೇ ಇತ್ತು

ನಡುವೆ ಆರಾಧನಾ ಮಹೋತ್ಸವದಲ್ಲಿ ಹೆಂಗಸರು ಹಾಡಬಾರದು ಎಂದು ಪೆರಿಯಕಚ್ಚಿ ವಿಧಿಸಿದ್ದ ಕಟ್ಟಲೆಯನ್ನು ಉಪಾಯವಾಗಿ ಉಲ್ಲಂಘಿಸಿ, ನಾಗರತ್ನಮ್ಮ ಇತರ ದೇವದಾಸಿ ಯರ ಜೊತೆಯಲ್ಲಿ ಹಾಡಿ, ಭಕ್ತಿಭಾವ ಮೆರೆದರು. ಆರಾಧನೆಯ ವೇಳೆಯಲ್ಲಿ ಹೆಂಗಸರು ಹಾಡಲು ಪ್ರಾರಂಭವಾಗಿದ್ದು ನಾಗರತ್ನಮ್ಮ ಅವರಿಂದಲೇ.

ನಾಗರತ್ನಮ್ಮನವರು ಎರಡು ಬಣಗಳನ್ನು ಸೇರಿಸಲು ಪ್ರಯತ್ನಿಸುತ್ತಲೇ ಇರುತ್ತಿದ್ದರು. 1928 ಆರಾಧನೆಯಲ್ಲಿ ನಾಗರತ್ನಮ್ಮನವರ ಗುರು ಬಿಡಾರಂ ಕೃಷ್ಣಪ್ಪನವರೂ ಭಾಗವಹಿಸಿದರು. ಮುಂದೆ ಮೈಸೂರಿನಿಂದ ತಪ್ಪದೆ ವಿದ್ವಾಂಸರನ್ನು ಪ್ರತಿ ವರುಷ ಕಳುಹಿಸುವುದಾಗಿ ಹೇಳಿದರು. ನಾಗರತ್ನಮ್ಮ ತಮ್ಮ ಸತತ ಪ್ರಯತ್ನದಿಂದ ಸಮಾಧಿಯ ಸುತ್ತಲಿನ ಜಾಗವನ್ನು ಪಡೆದು, ಅಲ್ಲಿ ಯಾವ ಅಂಗಡಿ ಮುಗ್ಗಟ್ಟು ಬರದ ಹಾಗೆ ತಡೆದರು. ಸಮಾಧಿಯ ಸ್ವಾಧೀನವನ್ನು ಸಂತ ತ್ಯಾಗರಾಜರ ಪರಂಪರೆಯವರಿಂದ ತಮ್ಮ ಹೆಸರಿಗೆ ಮಾಡಿಸಿಕೊಂಡು, ಆರಾಧನೆಯನ್ನು ದೇವಸ್ಥಾನದ ಮುಂದೆ ನಡೆಸಲು ಅನುಕೂಲ ಮಾಡಿಕೊಂಡರು. ಸ್ಥಳಗಳನ್ನು ನಾಗರತ್ನಮ್ಮನವರ ಹೆಸರಿಗೆ ಮಾಡಲು ಶ್ರೀ ಸಿ.ವಿ. ರಾಜಗೋಪಾಲಾಚಾರಿ ಸಹಾಯ ಮಾಡಿದರು. ಆದರೂ ವಿದ್ವಾಂಸರಲ್ಲಿದ್ದ ಒಗ್ಗಟ್ಟಿನ ಕೊರತೆಯಿಂದ ತ್ಯಾಗರಾಜರ ಆರಾಧನೆ ತಿರುವಯ್ಯಾರಿನಲ್ಲೇ ಮೂರು ಸ್ಥಳಗಳಲ್ಲಿ ಆಗುತ್ತಿತ್ತು.   

ಮಧ್ಯೆ ನಾಗರತ್ನಮ್ಮನವರಿಗೆ ತುಂಬಾ ಆತ್ಮೀಯರಾಗಿದ್ದ ವೀಣಾ ಧನಂ ಕಾಲವಾದರು. ಇದರಿಂದ ಮನನೊಂದ ನಾಗರತ್ನಮ್ಮನವರು ಮದ್ರಾಸಿನಲ್ಲಿದ್ದ ತಮ್ಮ ಮನೆಯನ್ನು ಮಾರಿ, ಬಂದ ಹಣದಲ್ಲಿ ತಿರುವೈಯ್ಯಾರಿನ ತ್ಯಾಗರಾಜರ ಸಮಾಧಿಯ ಸುತ್ತ ಪ್ರದಕ್ಷಿಣೆ ಮಾಡಲು ಕಟ್ಟಡ ಕಟ್ಟಿಸಿದರು. ವೇಳೆಗೆ ಅವರಿಗೆ ದೇಹಭಾರ ತುಂಬಾ ಹೆಚ್ಚಾಗಿ, ಓಡಾಡುವುದೇ ಕಷ್ಟವಾಗಿತ್ತು. ಕೊನೆಯ ದಿನಗಳಲ್ಲಿ ಸದಾ ತ್ಯಾಗರಾಜರ ಕೃತಿಗಳನ್ನೇ ಹಾಡುತ್ತಾ, ಅವರ ಸಂಗದಲ್ಲಿರುತ್ತಿದ್ದ ಕಮಲ ಮಾಮಿ, ಜೂಜು ಮಾಮಿ ಮತ್ತು ಅವರ ಮಗಳು ಜಾನಕಿ ಇವರಿಗೆ ನಾಗರತ್ನಮ್ಮ ಸಂಗೀತ ಕಲಿಸುತ್ತಿದ್ದರು. ಜೂಜುಮಾಮಿ ಈಗ ಬೆಂಗಳೂರಿ ನಲ್ಲಿ ನೆಲೆಸಿದ್ದಾರೆ ಎಂದು ತಿಳಿದು ಬಂದಿದೆ. ಎಷ್ಟೋ ದಿನಗಳು ನಾಗರತ್ನಮ್ಮ ಸಮಾಧಿಯ ಬಳಿ ಒಬ್ಬರೇ ಕುಳಿತು, ಮಾತಿಲ್ಲದೆ ಜಪಿಸುತ್ತ್ತಾ, ಕೆಲವು ವೇಳೆ ತೆಲುಗಿನಲ್ಲಿ ಒಬ್ಬರೇ ಮಾತಾಡಿ ಕೊಳ್ಳುತ್ತಿದ್ದರು. ಆಗ ಅವರು ಸಂತ ತ್ಯಾಗರಾಜರ ಜೊತೆ ಮಾತನಾಡುತ್ತಿದ್ದೆ ಎಂದು ಹೇಳುತ್ತಿದ್ದರು.

ಸುಮಾರು 1940 ವೇಳೆಗೆ ಮದ್ರಾಸಿನಲ್ಲಿ ಸಂತ ತ್ಯಾಗರಾಜರ ಆರಾಧನಾ ಸಮಿತಿ ಒಂದನ್ನು ರಚಿಸಲಾಯಿತು. ಇದರಲ್ಲಿ ಅನೇಕ ವಕೀಲರು, ಸರ್ಕಾರದ ಪ್ರತಿನಿಧಿಗಳು ಹಾಗೂ ವಿದ್ವಾಂಸರು ಸೇರಿ ಒಂದೇ ಸ್ಥಳದಲ್ಲಿ ಆರಾಧನೆ ನಡೆಸಬೇಕೆಂದು ನಿರ್ಧರಿಸಿದರು. ಸಮಿತಿಯಲ್ಲಿ ರಾಜಾಜಿ ಮುಸಿರಿ ಸುಬ್ರಹ್ಮಣ್ಯ ಅಯ್ಯರ್, ಎಸ್. ವೈ. ಕೃಷ್ಣಸ್ವಾಮಿ, ಸುಬ್ರಹ್ಮಣ್ಯಪಿಳ್ಳೈ, ತಿರುವಿಳಿಮಿಳಾಳೈ ಸೋದರರು, ಅಲಮೇಲು ಜಯರಾಮೈಯ್ಯರ್, ಬೆಂಗಳೂರು ನಾಗರತ್ನಮ್ಮ, ಸರಸ್ವತಿಬಾಯಿ, ಬಾಲ ಸರಸ್ವತಿ, ಕೆ.ಬಿ. ಸುಂದರಾಂಬಾಳ್, ಮೈಸೂರು, ರಾಜಸ್ತಾನ, ಗ್ವಾಲಿಯರ್ ಮತ್ತು ತಿರುವಾಂಕೂರು ಸಂಸ್ಥಾನದವರೂ ಕೆಲವರು ಇದ್ದರು. ಹೀಗೆ ಮುಂದಿನ ದಿನಗಳಲ್ಲಿ ಸಂತ ತ್ಯಾಗರಾಜರ ಆರಾಧನೆ ಒಂದು ಮಹಾ ಉತ್ಸವÀವಾಯಿತು. ಉತ್ಸವದಲ್ಲಿ ನಾಗಸ್ವರವಾದಕರಿಗೆ ವಿಶಿಷ್ಟ ಮನ್ನಣೆ, ತ್ಯಾಗರಾಜರ ಕೀರ್ತನೆಗಳು, ಹರಿಕಥೆ, ನಾಟಕಗಳು ವಿಜೃಂಭಿಸಿದವು. ಇದನ್ನೆಲ್ಲಾ ಕಣ್ತುಂಬ ನೋಡಿದ ನಾಗರತ್ನಮ್ಮನವರಿಗೆ ಬಹಳ ಆನಂದವಾಯಿತು. ಎಲ್ಲಾ ಬೆಳವಣಿಗೆಗಳಿಗೆ ನಾಗರತ್ನಮ್ಮನವರೇ ಕಾರಣ ಎನ್ನುವುದು ಎಲ್ಲರಿಗೂ ಮನವರಿಕೆ ಆಯಿತು.

ಐವತ್ತರ ದಶಕದ ಆರಂಭದಿಂದಲೇ ಅವರ ಆರೋಗ್ಯ ಕ್ಷೀಣಿಸುತ್ತಾ ಬಂದಿತ್ತು. ಕೊನೆ ಉಸಿರು ಇರುವವರೆಗೆ ಶ್ರೀರಾಮ ಮತ್ತು ಮಾರುತಿಯ ನಾಮ ಜಪಿಸುತ್ತಾ ಅಂತ್ಯ ಪಡೆಯಬೇಕೆಂಬುದು ಅವರ ಇಚ್ಛೆಯಾಗಿತ್ತು. 1952 ಬೇಸಿಗೆಯಲ್ಲಿ ಒಂದು ಮಹಾನ್ಚೇತನ ಮುಕ್ತಿ ಪಡೆಯಿತು. ತಿರುವೈಯ್ಯಾರಿನಲ್ಲಿ ತ್ಯಾಗರಾಜರ ಸಮಾಧಿಯ ಎದುರೇ ಬೆಂಗಳೂರು ನಾಗರತ್ನಮ್ಮನವರ ಸಮಾಧಿ ಇದೆ. ಇದು ಎಲ್ಲಾ ಸಂಗೀತಪ್ರಿಯರು ಮತ್ತು ಆರಾಧಕರು ಸಂದರ್ಶಿಸಲೇಬೇಕಾದ ಸಂಗೀತಕಾಶಿ.

 

(ಕೃಪೆ ಮತ್ತು ಆಧಾರ: The Devadasi and the Saint by Sriram.V)

 

ನಾ ಕಂಡ ಬೆಂಗಳೂರು ನಾಗರತ್ನಮ್ಮ

ಮೈಸೂರು ವಾಸುದೇವಾಚಾರ್ಯರು

 ಕಮಲಪುಷ್ಪ ಕೆಸರಿನಲ್ಲಿ ಹುಟ್ಟಿದ್ದೇ ಆದರೂ ಭಗವದರ್ಪಣಕ್ಕೆ ಯೋಗ್ಯವೇ ಹೌದು. ದೇವ ದಾಸಿಯರ ಕುಲದಲ್ಲಿ ಜನ್ಮ ತಾಳಿದ್ದರೂ ಗಾಂಭೀರ್ಯದ ಗಣಿಯಾಗಿ, ಗಾಯನ-ನರ್ತನ ಮಣಿಯಾಗಿ, ವಿರಾಗಿಣಿಯಾಗಿ, ಇಹಲೋಕ ಜೀವನದ ಸಾರ್ಥಕತೆಯನ್ನು ಪಡೆದು ಕನ್ನಡ ನಾಡಿನ ಕಣ್ಮಣಿಯಂತಿದ್ದ ನಾಗರತ್ನಮ್ಮನನ್ನು ಪಡೆದ ನಮ್ಮ ನಾಡು ನಿಜಕ್ಕೂ ಭಾಗ್ಯದ ಬೀಡು. ರೂಪ, ವಿದ್ಯೆ, ಸಂಪತ್ತು ಮೂರೂ ಸರಿಸಮವಾಗಿ ನಾಗರತ್ನಮ್ಮನವರಲ್ಲಿ ಮನೆಮಾಡಿ ಕೊಂಡಿದ್ದರೂ ಆಕೆ ವಿನಯನಿಧಿಯಾಗಿದ್ದರು.

ನಾಗಮ್ಮನವರ ಪ್ರಥಮ ಪರಿಚಯ ನನಗಾ ದದ್ದು ವೀಣೆ ಸುಬ್ಬಣ್ಣನವರ ಮನೆಯಲ್ಲಿ. ಶೇಷಣ್ಣ, ಸುಬ್ಬಣ್ಣ, ಕೃಷ್ಣಪ್ಪ ಮೊದಲಾದ ಹಿರಿಯ ವಿದ್ವಾಂಸರ ಎದುರು ಆಳುದ್ದ ದೇಹವನ್ನು ಗೇಣುದ್ದ ಮಾಡಿಕೊಂಡು, ಅವರ ಪಾದಗಳಿಗೆ ಸರ್ವಸ್ವ ವನ್ನೂ ಸಮರ್ಪಣೆ ಮಾಡಬಯಸುವ ಭಾವ ಭಂಗಿಯಲ್ಲಿ ನಿಲ್ಲುತ್ತಿದ್ದ ಆಕೆಯ ಆಕೃತಿ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ ನನಗೆ. ಹಿರಿಯರನ್ನು ಕಣ್ಣೆತ್ತಿಯೂ ಸಹ ನೋಡುತ್ತಿರಲಿಲ್ಲ ಆಕೆ. ಇಂಪಿನ ಕೊರಳಿನಿಂದ ಹೊರಬೀಳುತ್ತಿದ್ದ ಆಕೆಯ ಮಿತ ವಾದ ಮಾತು ಮುತ್ತಿಗಿಂತ ನಯ. ಆಕೆಯ ಸೌಂದರ್ಯರಾಶಿಯ ಹಿಂದಡಗಿದ್ದ ಅಪೂರ್ವ ಕಾಂತಿಯೊಂದು ನೋಡುಗರಲ್ಲಿ ಪೂಜ್ಯ ಭಾವನೆ ಯನ್ನು ಉಂಟುಮಾಡುತ್ತಿತ್ತು.

ನಂಜನಗೂಡಿನ ವಕೀಲ್ ಸುಬ್ಬರಾಯರ ಆಶ್ರಯದಲ್ಲಿ ಬೆಳೆದವರು ನಾಗರತ್ನಮ್ಮ ಹಾಗೂ ಅವರ ತಾಯಿ. ಬಾಲ್ಯದಲ್ಲಿಯೇ ಹುಡುಗಿಯ ಕಲಾಕಿರಣಗಳನ್ನು ಕಂಡುಕೊಂಡ ವಕೀಲರು ಕಲಾಕುಸುಮವನ್ನು ವಿಕಸನಗೊಳಿಸುವ ಉದ್ದೇಶ ದಿಂದ ಮೈಸೂರಿಗೆ ಅವರನ್ನು ಕರೆತಂದರು. ಬಿಡಾರಂ ಕೃಷ್ಣಪ್ಪ ಹಾಗೂ ಆಸ್ಥಾನ ಕವಿ ಗಿರಿಭಟ್ಟರ ತಮ್ಮಯ್ಯನವರಲ್ಲಿ ನಾಗರತ್ನಮ್ಮನ ವ್ಯಾಸಂಗ ಪ್ರಾರಂಭವಾಯಿತು. ತಮ್ಮಯ್ಯ ಸಂಗೀತ ಮತ್ತು ಸಾಹಿತ್ಯಗಳಲ್ಲಿ ಗಣ್ಯ ವಿದ್ವಾಂಸರು. ಮೈಸೂರು ಅರಮನೆಯ ಶಾಕುಂತಲ ನಾಟಕ ಸಭೆಯ ಶಿಕ್ಷಕರಾಗಿದ್ದರು. ಇವರ ಬಳಿ ಒಂದೆರೆಡು ವರ್ಷಗಳ ಕಾಲ ಸಂಗೀತ, ನರ್ತನ ಹಾಗೂ ಕನ್ನಡ ಸಾಹಿತ್ಯವನ್ನು ಅಧ್ಯಯನಮಾಡಿದರು ನಾಗರತ್ನಮ್ಮ. ತಮ್ಮಯ್ಯ ಹೊಸದಾಗಿ ಕಲಾ ಮೂರ್ತಿಯನ್ನೇನೂ ಕಡೆಯಬೇಕಾಗಿರಲಿಲ್ಲ. ದೈವದತ್ತವಾದ ಮೂರ್ತಿಗೆ ಶೃಂಗಾರ ಮಾಡುವ ಕೆಲಸ ಮಾತ್ರ ಉಳಿದಿತ್ತು ಅಷ್ಟೆ. ಆದುದರಿಂದಲೇ ನಾಗರತ್ನಮ್ಮನ ವಿದ್ಯಾರ್ಜನೆ ಹೂವಿನಸರ ಎತ್ತಿ ದಷ್ಟು ಹಗುರವಾಗಿಯೂ ತ್ವರಿತವಾಗಿಯೂ ಸಾಗಿತು.

ಅಲ್ಲಿಂದ ಮುಂದೆ ಬೆಂಗಳೂರಿನಲ್ಲಿದ್ದ ತನ್ನ ಸೋದರಮಾವಂದಿರಾದ ಪಿಟೀಲು ವೆಂಕಟ ಸಾಮಪ್ಪನವರಲ್ಲಿ ಸಂಗೀತಾಭ್ಯಾಸವನ್ನು ಮುಂದು ವರೆಸಿದರು ನಾಗರತ್ನಮ್ಮ. ವಿದ್ವಾಂಸರ ಮತ್ತು ರಸಿಕರ ಗೌರವಾದರಗಳಿಗೆ ಪಾತ್ರರಾದರು. ಪ್ರಭುಗಳ ಕೃಪಾಕಟಾಕ್ಷ ದೊರಕಲೂ ಹೆಚ್ಚು ಕಾಲ ಬೇಕಾಗಲಿಲ್ಲ.

ನಾಗರತ್ನಮ್ಮನಿಗೆ ಇನ್ನೂ ಹೆಚ್ಚಿನ ಪಾಂಡಿತ್ಯ ವನ್ನು ಸಂಪಾದಿಸಬೇಕೆಂಬ ಹಿರಿಯಾಸೆಯಾಗಿ ಮದ್ರಾಸಿಗೆ ಪ್ರಯಾಣ ಬೆಳೆಸಿದರು. ಪ್ರಖ್ಯಾತ ವಿದ್ವಾಂಸರ ಕಛೇರಿಗಳನ್ನು ಕೇಳಿ ವಿಷಯ ಸಂಗ್ರಹ ಮಾಡಿಕೊಂಡರು. ಸಂಗ್ರಹ ಮಾಡಿದುದನ್ನು ಸಾಧಿಸಿ, ತಮ್ಮ ವಿದ್ಯೆಯನ್ನು ಪರಿಪಕ್ವ ಮಾಡಿ ಕೊಂಡರು. ಅವರ ಸಂಗೀತಜ್ಞಾನ ಒಂದಕ್ಕೆ ಹತ್ತರಷ್ಟಾಯಿತು.

ತ್ಯಾಗರಾಜರ ಕೀರ್ತನೆಗಳೆಂದರೆ ನಾಗರತ್ನಮ್ಮ ನಿಗೆ ಬಲು ಅಕ್ಕರೆ. ಸಾಹಿತ್ಯ ಭಾವವನ್ನು ಸಂಪೂರ್ಣ ಗ್ರಹಿಸಿ, ಚಿತ್ತಾಕರ್ಷಕ ಶೈಲಿಯಲ್ಲಿ ಹಾಡುತ್ತಿದ್ದರು. ಅವರು ದೀಕ್ಷಿತರ ಕೃತಿಗಳನ್ನು ಹಾಡಿದ್ದೇ ವಿರಳ. ಒಮ್ಮೆ ಆಕೆಯ ಮಿತ್ರರೊಬ್ಬರುದೀಕ್ಷಿತರ ಕೀರ್ತನೆಗಳನ್ನು ನೀವೇಕೆ ಅಷ್ಟಾಗಿ ಹಾಡುವುದಿಲ್ಲ?” ಎಂದು ಕೇಳಿದರು. “ದೀಕ್ಷಿತರ ಕೀರ್ತನೆಗಳನ್ನು ಅರ್ಥಮಾಡಿಕೊಂಡು, ಪದಗಳ ನ್ನೂ ಅಕ್ಷರಗಳನ್ನೂ ಸ್ಪಷ್ಟವಾಗಿ ಉಚ್ಚರಿಸುವುದು ಸುಲಭಸಾಧ್ಯವಲ್ಲ. ಆಳವಾದ ಸಾಹಿತ್ಯ ಜ್ಞಾನ ಅತ್ಯಾವಶ್ಯಕ. ಹೇಳಿಕೊಟ್ಟಿದ್ದನ್ನು ಗಿಳಿಯಪಾಠದಂತೆ  ಹಾಡಿ ಒಪ್ಪಿಸುವುದು ಹೆಚ್ಚಿನದಲ್ಲ. ನನಗೆ ಸಂಸ್ಕೃತ ಭಾಷೆಯ ಪರಿಚಯ ಅಷ್ಟಾಗಿಲ್ಲ. ತಿಳಿಯದ ವಿಷಯಕ್ಕೆ ಕೈ ಹಾಕಿ ಕೀರ್ತನೆಗೂ ಅದರ ಕರ್ತೃವಿಗೂ ದ್ರೋಹ ಮಾಡುವುದು ನನಗೆ ಇಷ್ಟವಿಲ್ಲಎಂದು ಪ್ರತ್ಯುತ್ತರವಿತ್ತರು. ಕನ್ನಡ ದೇವರನಾಮಗಳನ್ನೂ ತ್ಯಾಗಯ್ಯನವರ ಕೀರ್ತನೆ ಗಳನ್ನೂ ಭಾವಗರ್ಭಿತವಾಗಿ ಹಾಡಿ ಜನಾದರ ಣೀಯವನ್ನಾಗಿ ಮಾಡಲು ಶ್ರಮಿಸಿದರು. ಮದ್ರಾಸಿ ನಲ್ಲಿ ಸಹ ನಾಗರತ್ನಮ್ಮನವರ ಹೆಸರು ಮೂಲೆ ಮೂಲೆಗೂ ಹಬ್ಬಿತು.

 ಹೀಗಿರುವಲ್ಲೊಂದು ದಿನ ವಿಚಿತ್ರ ಪ್ರಸಂಗ ವೊಂದು ನಡೆಯಿತು. ಅಂದು ತ್ಯಾಗಯ್ಯನವರ ಆರಾಧನೆಯ ದಿನ. ನಾಗರತ್ನಮ್ಮ ಭಕ್ತಿಪುಸ್ಸರ ದಿಂದ ಅಯ್ಯನವರ ಪೂಜೆ ಕೈಗೊಂಡರು. ನಾಲ್ಕಾರು ಕೀರ್ತನೆಗಳನ್ನು ಹಾಡಿ ಗಾನಸೇವೆ ಯನ್ನು ಸಲ್ಲಿಸಿದರು. ರಾತ್ರಿ ಊಟ ಮಾಡದೆಯೇ ಪ್ರಸಾದರೂಪವಾದ ಹಾಲು ಹಣ್ಣನ್ನು ಮಾತ್ರ ಸೇವಿಸಿ ಮಲಗಿದರು. ಎಂದೂ ಇಲ್ಲದ ಪ್ರಶಾಂತತೆ ಗಂಭೀರತೆಯೊಂದು ಅವರ ಮನವನ್ನು ಆವರಿಸಿ ತ್ತು ದಿನ. ತ್ಯಾಗರಾಜರ ಪುಣ್ಯ ಜೀವನದ ಒಂದೊಂದು ಘಟನೆಯೂ ಕಣ್ಮುಂದೆ ಸುಳಿದು ನಾಗರತ್ನಮ್ಮನಿಗೆ ರೋಮಾಂಚನವಾಯಿತು. ರಾತ್ರಿ ಸುಮಾರು ಒಂದು ಘಂಟೆಯ ಸಮಯ ತೇಜಃ ಪುಂಜರಾದ ವೃದ್ಧರೊಬ್ಬರು ಬಂದು ನಾಗರತ್ನಮ್ಮ ನವರನ್ನು ನಿದ್ದೆಯಿಂದ ಎಬ್ಬಿಸಿದಂತೆ ಆಯಿತು. “ತಾಯಿ ನಿನ್ನ ಭಕ್ತಿ ಪೂಜೆಯಿಂದ ರಾಮಚಂದ್ರ ತೃಪ್ತನಾಗಿದ್ದಾನೆ. ತಿರುವೈಯ್ಯಾರಿನಲ್ಲಿ ತ್ಯಾಗರಾಜರ ಬೃಂದಾವನದ ಬಳಿ ಒಂದು ಮಂಟಪ ಕಟ್ಟಿಸಿ ವರ್ಷವರ್ಷವೂ ಭಕ್ತಶ್ರೇಷ್ಠರು ಬಂದು ಸೇರಿ ರಾಮನಾಮ ಸಂಕೀರ್ತನವನ್ನು ಮಾಡಲು ಅವಕಾಶವನ್ನು ಕಲ್ಪಿಸಿ ಪುಣ್ಯಶಾಲಿನಿಯಾಗು,” ಎಂದು ಹೇಳಿ ವ್ಯಕ್ತಿ ಅದೃಶ್ಯವಾದರಂತೆ. ನಾಗರತ್ನಮ್ಮನಿಗೆ ಮೈ ಪುಳಕಿತವಾಯಿತು. ಮಹತ್ಕಾರ್ಯ ಸಾಧನೆಗಾಗಿ ತನ್ನ ಇಡೀ ಜೀವ ಮಾನವನ್ನೇ ಮುಡುಪಾಗಿಟ್ಟಳು ಮಹಾ ತಾಯಿ. ಮಾರನೆಯ ದಿನವೇ ಮದ್ರಾಸಿಗೆ ತೆರಳಿ ಸಂಬಂಧಪಟ್ಟ ಅಧಿಕಾರಿಗಳನ್ನೂ ಪುರಪ್ರಮುಖ ರನ್ನೂ ಕಂಡು ಮಾತುಕತೆ ನಡೆಸಿ ಪುಣ್ಯಕೆಲಸದ ಅಂಕುರಾರ್ಪಣೆ ಮಾಡಿದರು. ಕೆಲಸಕಾರ್ಯಗಳ ಮೇಲ್ವಿಚಾರಣೆಯನ್ನು ಖುದ್ದಾಗಿ ಪರಿಶೀಲಿಸುವ ಉದ್ದೇಶದಿಂದ ಮದ್ರಾಸಿನಲ್ಲೇ ನೆಲೆಸಿದರು.

ಸ್ಥಳ ಪರಸ್ಥಳಗಳಲ್ಲಿ ನಾಗರತ್ನಮ್ಮನವರ ಕಛೇರಿಗಳಾದವು. ಸಂಗ್ರಹವಾದ ಧನವನ್ನೆಲ್ಲ ತಮ್ಮ ಕನಸನ್ನು ನನಸಾಗಿಸಲು ಕೂಡಿಟ್ಟರು. ಹಗಲಿರುಳೂ ದೇವಬ್ರಾಹ್ಮಣರ ಪೂಜೆ, ರಾಮಾಯಣಶ್ರವಣ, ಸಂಗೀತಾರಾಧನೆ ನಡೆಸುತ್ತ ಕಾರ್ಯಾರಂಭದ ಸುದಿನವನ್ನು ಇದಿರು ನೋಡಿತ್ತಿದ್ದರು.

ಕೊನೆಗೊಂದು ದಿನ ಕಾಲಹರಣ ಮಾಡದೆ ಒಡನೆಯೇ ಕಟ್ಟಡದ ಕೆಲಸವನ್ನು ಪ್ರಾರಂಭಿಸ ಬೇಕೆಂಬ ಆಸೆಯಾಯಿತು ನಾಗರತ್ನಮ್ಮನಿಗೆ. ಆದರೆ ಬೇಕಾಗಿದ್ದ ಮೊಬಲಗಿಗಿಂತ ಶೇಖರ ವಾಗಿದ್ದ ಹಣ ಕಡಿಮೆಯಾಗಿದ್ದಿತು. ಧೈರ್ಯ ಗೆಡಲಿಲ್ಲ ನಾಗರತ್ನಮ್ಮ. ಜೀವನದಲ್ಲಿ ಅನುಭವಿಸ ಬೇಕಾಗಿದ್ದ ಸುಖಾಭಿಲಾಷೆಗಳನ್ನೆಲ್ಲ ತೊರೆದಿದ್ದರು ಆಕೆ. ಹುಟ್ಟಿದ್ದ ಒಂದೆರಡು ಮಕ್ಕಳೂ ಮೃತ Àಹೊಂದಿದ್ದರಿಂದ ನಾಗರತ್ನಮ್ಮ ವಿರಕ್ತರಾಗಿದ್ದರು. ತಮ್ಮ ಮನೆಯನ್ನು ಮಾರಿ ಬಂದ ಮೂವತ್ತು ಸಹಸ್ರ ರೂಪಾಯಿಗಳನ್ನು ನಿಧಿಗೆ ಸೇರಿಸಿದರು. ಆಪಾದಮಸ್ತಕವೂ ಇದ್ದ ತಮ್ಮ ಅಮೂಲ್ಯ ಆಭರಣಗಳನ್ನೆಲ್ಲ ಮಾರಿ ಬಂದ ಹಣವನ್ನುಕೃಷ್ಣಾರ್ಪಣಎಂದರು. ತ್ಯಾಗರಾಜ ಕ್ಷೇತ್ರದಲ್ಲಿ ಕಟ್ಟಡದ ನಿರ್ಮಾಣಕಾರ್ಯ ಪ್ರಾರಂಭಗೊಂಡಿ ತು. ಭಕ್ತಳು ಪವಿತ್ರಮನಸ್ಸಿನಿಂದ ಪ್ರಾರಂಭಿಸಿದ ಪುಣ್ಯಕಾರ್ಯಕ್ಕೆ ಜನಸಹಾಯ ತಾನೇ ತಾನಾಗಿ ಒದಗಿಬಂದಿತು. ಕಟ್ಟಡ ಮುಗಿದಂದು ನಾಗರತ್ನ ಮ್ಮನವರಿಗಾದ ಆನಂದ ಸಂಭ್ರಮಗಳಿಗೆ ತುದಿ ಮೊದಲಿರಲಿಲ್ಲ. “ಇನ್ನು ಯಾವ ಘಳಿಗೆಯಲ್ಲಿ ಬೇಕಾದರೂ ಪ್ರಾಣತ್ಯಾಗ ಮಾಡಲು ನಾನು ಸಿದ್ಧಎನ್ನುತ್ತಿದ್ದರು ನಾಗರತ್ನಮ್ಮ.

ವರ್ಷವರ್ಷವೂ ದೇಶದ ನಾನಾ ಮೂಲೆ ಗಳಿಂದ ತಿರುವಯ್ಯಾರಿಗೆ ಬಂದು ಸೇರುವ ಭಕ್ತಾಗ್ರಣಿಗಳು ಇಂದಿಗೂ ನಾಗರತ್ನಮ್ಮನ ಪವಿತ್ರ ಜೀವನವನ್ನು ಕೃತಜ್ಞತೆಯಿಂದಲೂ ಗೌರವದಿಂದ ಲೂ ಸ್ಮರಿಸುತ್ತಾರೆ.

ಮಹತ್ಕಾರ್ಯ ಸಾಧನೆಯಾದ ಬಳಿಕ ನಾಗರತ್ನಮ್ಮ ಒಮ್ಮೆ ಬೆಂಗಳೂರಿಗೆ ಬಂದರು. ಕನ್ನಡಿಗರ ಹೆಸರಾಗಿಮೈಸೂರು ಛತ್ರಒಂದನ್ನು ತಿರುವೈಯ್ಯಾರಿನಲ್ಲಿ ಕಟ್ಟಿಸಿ ವರ್ಷಂಪ್ರತಿ ಹತ್ತು ಮಂದಿ ವಿದ್ಯಾರ್ಥಿಗಳಿಗೆ ಪ್ರೌಢ ಸಂಗೀತ ಶಿಕ್ಷಣ ದೊರೆಯುವಂತೆ ಏರ್ಪಡಿಸಬೇಕೆಂಬ ಉದ್ದೇಶ ದಿಂದ. ಆರ್ಕಾಟು ರಾಮಸ್ವಾಮಿ ಮೊದಲಿ ಯಾರ್ ಅವರ ದಿವಾನಗಿರಿಯ ಕಾಲ ಅದು. ಆಪ್ತಮಿತ್ರರಲ್ಲಿ ತಮ್ಮ ಉದ್ದೇಶವನ್ನು ತಿಳಿಯ ಪಡಿಸಿದರು. ಧನಸಂಗ್ರಹಕ್ಕಾಗಿ ಕಛೇರಿಗಳನ್ನು ಮಾಡಿದರು. ಸುಮಾರು ಆರು ಸಹಸ್ರ ರೂಪಾಯಿ ಗಳಷ್ಟು ಹಣ ಒದಗಿತು. ನಾಗಮ್ಮನವರ ಮುಖ ಕಿರಿದಾಯಿತು. ಆಕೆಯ ಇಂಗಿತವನ್ನರಿತ ಚಿರ ಪರಿಚಿತರೊಬ್ಬರು ನಾಗರತ್ನಮ್ಮನವರನ್ನು ಪ್ರಶ್ನಿಸಿ ದರು: “ನೀವು ಪಟ್ಟ ಇಷ್ಟು ಶ್ರಮಕ್ಕೆ ಅಲ್ಪ ಪ್ರತಿಫಲ ದೊರಕಿದ್ದರಿಂದ ನಿಮ್ಮ ಮನಸ್ಸಿಗೆ ಬೇಸರವಾಗಿರು ವುದು ಸಹಜ. ಮದ್ರಾಸಿನಲ್ಲಿಯೇ ನೀವು ಇಷ್ಟು ಪ್ರಯತ್ನಿಸಿದ್ದರೆ ಇದಕ್ಕೆ ನಾಲ್ಕರಷ್ಟು ಹಣ ಶೇಖರಣೆ ಯಾಗುತ್ತಿತ್ತಲ್ಲ?” ನಾಗರತ್ನಮ್ಮ ನಕ್ಕು ನುಡಿದರು, ಅಲ್ಪ ಆರು ಸಹಸ್ರ ರೂಪಾಯಿಗಳನ್ನು ಅರೆಕ್ಷಣ ದಲ್ಲಿ ಕೇವಲ ಒಬ್ಬ ಧನಿಕನಿಂದ ಪಡೆಯಬಲ್ಲೆ ಮದ್ರಾಸಿನಲ್ಲಿ. ಆದರೆ ನನ್ನ ಉದ್ದೇಶವೇ ಬೇರೆ. ಕನ್ನಡಿಗರಿಗಾಗಿ ಕೈಗೊಂಡ ಕಾರ್ಯಕ್ಕೆ ಕನ್ನಡೇ ತರರ ಕೊಂಕಿರಬಾರದು ಎಂದು. ಕನ್ನಡ ನುಡಿಯ ಮೇಲೆ, ಕನ್ನಡಿಗರ ಮೇಲೆ ಅಷ್ಟು ಅಭಿಮಾನ, ಅಷ್ಟು ಮಮತೆ ಆಕೆಗೆ.

ಮೈಸೂರು ಛತ್ರದ ಕಟ್ಟಡದ ಕೆಲಸ ಪೂರೈಸು ವುದರೊಳಗಾಗಿ ನಾಗರತ್ನಮ್ಮನವರ ಭೌತಿಕ ದೇಹ ನಮ್ಮಿಂದ ಮರೆಯಾಯಿತು. ಆಗ ಅವರ ವಯಸ್ಸು ಸುಮಾರು ಎಂಬತ್ತು.

ನಾಗರತ್ನಮ್ಮನವರದು ಕಟ್ಟುಬಿಕ್ಕಟ್ಟಿನ ಸಂಗೀತ. ಖಚಿತವಾದ ಲಯಜ್ಞಾನ. ಅವರ ಶಾರೀರದ ಒಂದು ಅಪೂರ್ವ ಲಕ್ಷಣವೆಂದರೆ, ಹೆಂಗಸಿನ ಶಾರೀರದ ಮಾಧುರ್ಯ, ಗಂಡಸಿನ ಶಾರೀರದ ಗಾಂಭೀರ್ಯಎರಡೂ ಅದರಲ್ಲಿ ಮಿಲನ ವಾಗಿದ್ದವು. ಸಂಗೀತಶಾಸ್ತ್ರಾಧ್ಯಯನದ ಜೊತೆಯಲ್ಲಿ ನಾಟ್ಯ ಮತ್ತು ಅಭಿನಯ ಶಾಸ್ತ್ರಗಳ ಪರಿಚಯವೂ ಸಾಗಿದ್ದರಿಂದ ಆಕೆಯ ಸಂಗೀತ ಭಾವಭರಿತ ವಾಯಿತು.

ನಾಗರತ್ನಮ್ಮನ ಕಛೇರಿಗಳಲ್ಲಿ ಸ್ವರಕಲ್ಪನೆಗಿಂತ ರಾಗಾಲಾಪನೆಗೆ ಪ್ರಾಮುಖ್ಯ ಹೆಚ್ಚು. ಯದುಕುಲ ಕಾಂಬೋಧಿಯನ್ನು ಹಾಡದೇ ಇದ್ದ ಕಛೇರಿಗಳೇ ಅಪರೂಪ. ರಾಗದಲ್ಲಿಶ್ರೀರಾಮ ಜಯರಾಮಎಂಬ ಕೃತಿಯನ್ನು ಬಲು ಸೊಗಸಾಗಿ ಹಾಡುತ್ತಿ ದ್ದರು. ‘ನಿತ್ಯಕಲ್ಯಾಣಿಎಂಬ ರಾಗಮಾಲಿಕೆಯನ್ನು ಜನಪ್ರಿಯವನ್ನಾಗಿ ಮಾಡಿದವರೇ ನಾಗರತ್ನಮ್ಮ. ‘ಭಕ್ತಾಪಾಯ ಭುಜಂಗ ಗಾರುಡಮಣಿಃ’ ‘ಶತ್ರು ಚ್ಛೇದೈಕ ಮಂತ್ರಇವೇ ಮೊದಲಾದ ಮುಕುಂದ ಮಾಲಾದ ಶ್ಲೋಕಗಳನ್ನೂ ದೇವರ ನಾಮಗಳನ್ನೂ ಹಾಡುವುದರಲ್ಲಿ ನಾಗರತ್ನಮ್ಮನವರದೇ ಒಂದು ಶೈಲಿ, ಒಂದು ವೈಖರಿ. ಸಂಗೀತದಲ್ಲಿ ಖಚಿತವಾದ ಪಾಂಡಿತ್ಯವಿದ್ದುದರಿಂದ ವಿದ್ವಾಂಸರ ಯಾವ ಸವಾಲಿಗೂ ಹಿಂದು ಮುಂದು ನೋಡುತ್ತಿರಲಿಲ್ಲ.

ನಾಗರತ್ನಮ್ಮನವರ ಹಲವಾರು ಕಛೇರಿಗಳನ್ನು ಕೇಳುವ ಸುಯೋಗ ನನಗೆ ದೊರಕಿತ್ತು. ಜಡ್ಜ್ ನರಹರಿರಾಯರು, ಚೀಫ್ ಜಡ್ಜ್ ಚಂದ್ರಶೇಖರ ಯ್ಯನವರು ಪುಟ್ಟಣ್ಣಶೆಟ್ಟರು ಇವರೇ ಮೊದಲಾದ ಕಲಾಭಿಜ್ಞರು ನಾಗರತ್ನಮ್ಮನವರ ಕಛೇರಿಗಳನ್ನು ಆಗ್ಗಿಂದಾಗ್ಗೆ ಏರ್ಪಡಿಸಿ, ಉತ್ತೇಜನ ನೀಡುತ್ತಿ ದ್ದರು. ವೀಣೆ ಸುಬ್ಬಣ್ಣನವರ ಮನೆಯಲ್ಲಿ ಆಕೆ ಅನೇಕ ಸಾರಿ ಹಾಡಿದ್ದರು.

ಎಲ್ಲ ಸನ್ನಿವೇಶಗಳೂ ನನಗೆ ಜ್ಞಾಪಕ ವಿದ್ದಾಗ್ಯೂ, ಮದ್ರಾಸಿನಲ್ಲಿ ನಾನೊಮ್ಮೆ ಅವರ ಮನೆಗೆ ಹೋಗಿದ್ದ ಸಂದರ್ಭ ಮಾತ್ರ ನನ್ನ ಮನಸ್ಸಿನಲ್ಲಿ ಕದಲದೆ ನಿಂತಿದೆ. ಬಲು ವಿಶ್ವಾಸ ದಿಂದ ನಾಗರತ್ನಮ್ಮ ನನ್ನನ್ನು ಬರಮಾಡಿ ಕೊಂಡರು. ಅವರು ವ್ಯಾಸಂಗ ಮಾಡುತ್ತಿದ್ದ ಕೊಠಡಿಗೆ ಹೋದೊಡನೆಯೇ ಮೂಲೆಯಲ್ಲಿ ಒರಗಿಸಿಟ್ಟಿದ್ದ ತಂಜಾವೂರು ತಂಬೂರಿಯೊಂದರ ಮೇಲೆ ನನ್ನ ದೃಷ್ಟಿ ಬಿದ್ದಿತು. ನನ್ನ ಇಂಗಿತವನ್ನರಿತ ನಾಗರತ್ನಮ್ಮ ತಂಬೂರಿಯನ್ನು ನನ್ನ ಮುಂದಿ ಟ್ಟರು. ತಂಬೂರಿಯ ಕಾಯಿ, ದಂಡಿ, ಬಿರುಡೆ ಗಳನ್ನೊಳಗೊಂಡ ತುದಿ - ಹೀಗೆ ಮೂರು ಭಾಗಗಳನ್ನು ಬೇರೆ ಬೇರೆ ಮಾಡಿ ಮತ್ತೆ ಒಂದು ಗೂಡಿಸಿ ತೋರಿಸಿದರು. ಪರಸ್ಥಳಗಳಿಗೆ ಹೋಗು ವಾಗ ಜೊತೆಯಲ್ಲಿ ತೆಗೆದುಕೊಂಡು ಹೋಗಲು ಅನುಕೂಲಕರವಾಗಿರಲೆಂದು ರೀತಿ ಮಾಡಿಸಿ ದ್ದೇನೆಂದರು. ಸೊಗಸಾದ ತಂಬೂರಿ, ಕೈಗೆ ತೆಗೆದು ಕೊಂಡು ಶ್ರುತಿಮಾಡಿದೆ. ಶುದ್ಧವಾದ ತುಂಬು ನಾದವನ್ನು ಕೆಲನಿಮಿಷಗಳ ಕಾಲ ಇಬ್ಬರೂ ಕೇಳಿ ಆನಂದಿಸಿದೆವು. ‘ನಿಮ್ಮ ಹಾಡುಗಾರಿಕೆಯನ್ನು ಕೇಳಿ ಬಹಳ ದಿನಗಳಾದವು ಸ್ವಲ್ಪ ಏನಾದರೂ ಹಾಡಬಹುದಲ್ಲ? ಎಂದೆ. “ಸೂರ್ಯನಿಗೆ ದೀಪೋತ್ಸವವೇ?” ಎಂದರು. “ಬಲು ದೊಡ್ಡ ಮಾತುಎಂದೆ. “ಸರಿ ನಿಮ್ಮ ಚಿತ್ತಎಂದು ನಾಗರತ್ನಮ್ಮ ಹಾಡಲು ಉಪಕ್ರಮಿಸಿದರು. ಮೈಸೂರು ಸದಾಶಿವರಾಯರ ಕಮಾಚ್ ರಾಗದ ಕೀರ್ತನೆಪರಮಾದ್ಭುತಮೈನಎಂಬುದರಿಂದ ಅಂದಿನ ಸಂಗೀತ ಪ್ರಾರಂಭವಾಯಿತು. ಕೀರ್ತನೆ  ಯೇ ಮುದ್ದಾದ ರಚನೆÀ. ನಾಗರತ್ನಮ್ಮ ಸುವರ್ಣ ಪುಷ್ಪಕ್ಕೆ ಸುಗಂಧ ಸೇರಿಸಿದಂತೆ ಮನೋಹರವಾಗಿ ಹಾಡಿದರು. ಸದಾಶಿವರಾಯರ ಕೀರ್ತನೆಗಳನ್ನು ಹಾಡುವುದು ಅಷ್ಟು ಸುಲಭಸಾಧ್ಯವಲ್ಲ. ಶಿಸ್ತಿನ ಅಭ್ಯಾಸ ಬಲದಿಂದ ಮಾತ್ರ ಸಾಧ್ಯ. ನಾಗರತ್ನ ಮ್ಮನವರ ಅಂದಿನ ಹಾಡಿಕೆ ಪರಿಶುದ್ಧವಾಗಿತ್ತು, ಹೃದಯಂಗಮವಾಗಿತ್ತು.  

 

 

ಬೆಂಗಳೂರು ನಾಗರತ್ನಮ್ಮ - ಡಿ ವಿ ಜಿ ಅವರ ಲೇಖನದ ಆಯ್ದ ಭಾಗಗಳು

 ಬೆಂಗಳೂರು ನಾಗರತ್ನಮ್ಮನವರಿಗೆ ಸಂಸ್ಕೃತ ಕಾವ್ಯ ಪಾಠವಾಗಿತ್ತು. ಶಬ್ದದ ಸಾಧುತ್ವ ಅಸಾಧುತ್ವಗಳು ಗೊತ್ತಿದ್ದದ್ದು ಮಾತ್ರವಲ್ಲದೆ ಸಂಧಿ, ಸಮಾಸ ಅಲಂಕಾರ ಮೊದಲಾದ ವಿವರಗಳು ತಿಳಿದಿದ್ದವು. ಆದದ್ದರಿಂದಲೇ ಸಂಸ್ಕೃತಶ್ಲೋಕ ಗಮಕದಲ್ಲಿ ಆಕೆ ಹೊತ್ತಿಗೂ ಅಸಮಾನ ಳಾಗಿದ್ದಾಳೆ. ಗ್ರಾಮೋಫೋನ್ ರಿಕಾರ್ಡಿಂಗಿಗಾಗಿ ಆಕೆ ಹಾಡಿದ ಶ್ಲೋಕಪಠಣಗಳಲ್ಲಿಯೂನಿತ್ಯಕಲ್ಯಾಣಿಎಂಬ ಸಂಸ್ಕೃತ ರಾಗಮಾಲಿಕೆ ಯಲ್ಲಿಯೂ ಆಕೆಯ ಸಾಹಿತ್ಯ ಪರಿಜ್ಞಾನ ಪ್ರಕಾಶಿಸುತ್ತದೆ. ಆಕೆ ಕನ್ನಡ ಸಾಹಿತ್ಯದಲ್ಲಿಯೂ ಪರಿಶ್ರಮ ಮಾಡಿದ್ದವಳು. ಜೈಮಿನಿ ಭಾರತ ದಿಂದಲೂ ರಾಜಶೇಖರವಿಲಾಸದಿಂದಲೂ ಕುಮಾರವ್ಯಾಸ ಭಾರತದಿಂದಲೂ ಹತ್ತಾರು ಪದ್ಯಗಳನ್ನು ಉಚಿತ ರಾಗಗಳೊಡನೆ ಹಾಡಿ ವಿವರಣೆ ಕೊಡುತ್ತಿದ್ದಳು. ಆಕೆ ಮಹಾ ವಿದುಷಿ.

 ಆಕೆಯನ್ನು ನಾನು 1908-09ನೆಯ ವರ್ಷ ದಿಂದ ಬಲ್ಲೆ. ಆಗ ಆಕೆ ಚಿಕ್ಕಪೇಟೆಯಲ್ಲಿರುವ ಸಾಹುಜಿಯವರ ಮಹಡಿಯ ಮೇಲೆ ಸಂಗೀತ ಕಛೇರಿ ನಡೆಸಿದ್ದನ್ನು ನಾನು ನಾಲ್ಕಾರು ಸಲ ಕೇಳಿದ್ದೇನೆ. ಆಕೆಯ ಕಛೇರಿಗೆ ಕುತೂಹಲದಿಂದ ಬರುತ್ತಿದ್ದವರಲ್ಲಿ ದಿವಂಗತರಾದ ಚೀಫ್ ಜಡ್ಜಿ ಕೆ ಎಸ್ ಚಂದ್ರಶೇಖರಯ್ಯರ್ ಅವರೂ ಒಬ್ಬರು. ಅವರಿಗೆ ಆಕೆಯ ಸಂಸ್ಕೃತಶ್ಲೋಕ ಗಾಯನದಲ್ಲಿ ಹೆಚ್ಚು ಮೆಚ್ಚಿಗೆ. ‘ನಾಗರತ್ನಮ್ಮನ ಸ್ಟೈಲೇ ಸ್ಟೈಲುಎನ್ನುತ್ತಿದ್ದರು.

ನಾಗರತ್ನಮ್ಮ ಕೊನೆಯ ಬಾರಿ ಬೆಂಗಳೂರಿಗೆ ಬಂದಾಗ ಬಸವನಗುಡಿಯ ತಾರಾಬಾಯಿಯಮ್ಮ ನವರ ಮನೆಯಲ್ಲಿ ಇಳಿದುಕೊಂಡಿದ್ದರು. ನಾಗ ರತ್ನಮ್ಮನವರು ಶನಿವಾರ ಸಂಜೆ ದೇವರಪೂಜೆ ಮಾಡಿಸಿ ಭಜನೆಮಾಡುವುದು ವಾಡಿಕೆ ಇಂಥ ಒಂದು ಸಂದರ್ಭಕ್ಕೆ ನಾನು ಹೋಗಿದ್ದೆ. ಭಜನೆಯ ನಂತರ ಸದಾಶಿವರಾಯರ ಒಂದು ಕೀರ್ತನೆ ಯನ್ನು ಆಕೆ ಒಬ್ಬ ಶಿಷ್ಯಳಿಗೆ ಹೇಳಿಕೊಟ್ಟರು. ರಾಗ ಹರಿಕಾಂಬೋಧಿ ಎಂದು ನನ್ನ ಜ್ಞಾಪಕ.

ರಾಮಕಥಾಸುಧಾಸಾಗರಮೀಜೆ . . . . . .

ಇದು ಬಹು ಕಷ್ಟವಾದ ಕೀರ್ತನೆ. ಮೊದಲು ಹರಿಕಾಂಬೋಧಿ ರಾಗವೇ ಕೊಂಚ ಕಷ್ಟದ್ದು. ಕಳೆದ ಮೂವತ್ತು ವರ್ಷಗಳಲ್ಲಿ ಯಾವ ಪ್ರಸಿದ್ಧ ವಿದ್ವಾಂಸನೂ ರಾಗವನ್ನು ಆಲಾಪನೆ ಮಾಡಿ ಪಲ್ಲವಿ ಹಾಡಿದ್ದನ್ನು ನಾನು ಕೇಳಿಲ್ಲ. ಬಹು ಸೊಗಸಾದ ಒಂದು ರಾಗ ಯಾವ ಕಾರಣ ದಿಂದಲೋ ಮೂಲೆಗೆ ಬಿದ್ದಿದೆ. ರಾಗದಲ್ಲಿ ಸದಾಶಿವರಾಯರ ಕೀರ್ತನೆಯೆಂದರೆ ಕಬ್ಬಿಣದ ಕಡಲೆ. ಅಂಥ ಕೃತಿಯನ್ನು ನಾಗರತ್ನಮ್ಮ ಆರಿಸಿಕೊಂಡು ಗಮಕಗಳನ್ನು ಸೇರಿಸುತ್ತಿದ್ದುದ್ದು ನನಗೆ ಅದ್ಭುತವೆನಿಸಿತು. ಆಕೆ ತನ್ನ ಕಂಠದಿಂದ ಸ್ವರಗಳನ್ನೂ ಜಾರುಗಳನ್ನೂ ನುಡಿದದ್ದಲ್ಲದೆ ಶಿಷ್ಯೆಗೂ ರೀತಿಯಲ್ಲಿ ಪಲುಕುಬಡಿ ಬರುವಂತೆ ಅಕ್ಷರ ಅಕ್ಷರಕ್ಕೂ ಸ್ವರಸ್ವರಕ್ಕೂ ತಿದ್ದುತ್ತಿದ್ದುದ್ದು ಸೋಜಿಗವೆನಿಸಿತು. ವೇದಾಕ್ಷರಗಳನ್ನು ಅಧ್ಯಯನ ಮಾಡುವುದರಲ್ಲಿ ಹೇಗೆ ಸ್ವರಕ್ರಮಕ್ಕೆ ಪ್ರಾಧಾನ್ಯತೆ ಕೊಟ್ಟು ಅಧ್ಯಾಪಕರು ಗಮನವಿರಿಸಿರುತ್ತಾರೋ ಹಾಗೆ ನಾಗರತ್ನಮ್ಮನವರು ಸ್ವರವಿನ್ಯಾಸದ ಮೇಲೆ ಗಮನವಿರಿಸಿರುತ್ತಿದ್ದರು.

ನಾನುಇಷ್ಟು ಕಷ್ಟವಾದ ಕೀರ್ತನೆಯನ್ನು ಯಾಕಮ್ಮಾ ಆರಿಸಿಕೊಂಡಿರಿ ವಯಸ್ಸಿನಲ್ಲಿ?” ಎಂದು ಕೇಳಿದೆ. ಆಕೆ, “ಸುಲಭವಾದದ್ದನ್ನು ಹೇಳಿಕೊಡುವುದಕ್ಕೆ ಎಷ್ಟೋ ಮಂದಿ ಸಿಕ್ಕಿಯಾರು. ಕಷ್ಟವಾದದ್ದನ್ನು ಕಲಿಸುವ ವಿದ್ವಾಂಸರು ಪೂರ್ವ ಕಾಲದಲ್ಲಿದ್ದರು. ಅಂಥವರು ನನ್ನ ಗುರುಗಳು. ಅವರು ಹಾಕಿಕೊಟ್ಟ ದಾರಿಯನ್ನು ನಾನು ಹಿಡಿ ದಿದ್ದೇನೆ,” ಎಂದರು.

 

ಸಂಪ್ರದಾಯ

ಒಂದು ಮಧ್ಯಾಹ್ನ ಸುಮಾರು ಮೂರೂವರೆ ಘಂಟೆಗೆ ನಾನು ಅವರಲ್ಲಿಗೆ ಹೋದೆ. ಆಕೆ ಹಾಸಿಗೆಯ ಮೇಲೆ ಮಲಗಿ ಮುಲುಗುತ್ತಿದ್ದರು. ನಾನು ಹೋಗಿಏನಮ್ಮಾಎಂದು ಕೂಗುತ್ತಲೇ ಕಣ್ಣುಬಿಟ್ಟು ನೋಡಿ, “ಮೈಯಲ್ಲಿ ಸ್ವಸ್ಥವಿಲ್ಲಪ್ಪಾಎಂದು ಹೇಳುತ್ತಾ ಅಲ್ಲಿಯೇ ಎದ್ದು ಕುಳಿತರು. ನಾನುಹೊರಡುತ್ತೇನೆಂದೆ.” “ಬೇಡ, ನಿಮ್ಮೊಡನೆ ಕೊಂಚ ಮಾತನಾಡುತ್ತಿದ್ದರೆ ಜಾಡ್ಯ ಮರೆ ಯುತ್ತದೆ,” ಎಂದರು.

ಮಾತು ನಾಟ್ಯಕಲೆಯ ಕಡೆಗೆ ಹೊರಳಿತು. ಪ್ರಾಸ್ತಾವಿಕವಾಗಿ ಹಳೆಯ ಸಂಪ್ರದಾಯದ ನಾಟ್ಯ ಕುರಿತು ಪ್ರಶ್ನೆ ಎತ್ತಿದೆ. ಆಕೆ – “ ಮುದುಕಿ ಅದನ್ನು ಹೇಗೆ ತೋರಿಸುವುದು? ಕೂತ ಹಾಗೆಯೇ ಆದಷ್ಟು ತೋರಿಸುತ್ತೇನೆಎಂದು ಹೇಳಿ ತಲೆಗೆ ಸುತ್ತಿದ್ದ ಬಟ್ಟೆಯನ್ನು ತೆಗೆದು, ಹೊದ್ದಿದ್ದ ಕಂಬಳಿಯನ್ನು ದೂರ ತಳ್ಳಿ ಕೈ ಮುಗಿದು ಕುಳಿತು ರಾಗಾಲಾಪನೆಗೆ ಆರಂಭಿಸಿದರು.

 ಸಭಾಕಲ್ಪತರುಂ ವಂದೇ

ವೇದಶಾಖೋಪಜೀವಿನಂ|

ಶಾಸ್ತ್ರಪುಷ್ಪ ಸಮಾಯುಕ್ತಂ

ವಿದ್ವತ್ಭ್ರಮರಶೋಭಿತಂ|

ಷಡ್ದರ್ಶನೀಪರಿಜ್ಞಾನ

ಪಂಡಿತೈರಿವ ಮಂಡಿತೈಶ್ಚ|

ಸ್ತಂಭೈಶ್ಚಿತ್ರೈರ್ವಿತಾನೈಶ್ಚ

ಸಭಾ ಕಿರಮವಭಾಸತೇ||

 ಹೀಗೆ ಸಭಾವಂದನ ಮಾಡತಕ್ಕದ್ದು. ನಾಟ ರಾಗದಲ್ಲಿ ಪ್ರಾರಂಭಿಸುವುದು ಪದ್ಧತಿ. ಆನಂತರ ವಸಂತರಾಗಕ್ಕೆ ಬರತಕ್ಕದ್ದು; ಅದರಲ್ಲಿ ಪದಮಟ್ಟು ವರ್ಣ ಹಾಡತಕ್ಕದ್ದು ಎಂದು ಹೇಳಿ, ಹತ್ತು ನಿಮಿಷ ಅದನ್ನು ಪ್ರದರ್ಶನ ಮಾಡಿದರು. ನರ್ತನದಲ್ಲಿ ಪೀಠಿಕಾಭಾಗಕ್ಕೆ ಅಲರಿಪು ಎಂದು ಹೆಸರು. ಹಾಗೆಂದರೆಹೂವು ಅರಳುವುದುಎಂದರ್ಥ. ಹೂವು ಅರಳಿದಂತೆ ಸಭಿಕರ ಮನಸ್ಸು ಅರಳಬೇಕು. ಪದವನ್ನು ಹಾಡಿ ಅಭಿನಯಿಸಿದರೆ ಕಲಾವಂತೆಯ ಮನಸ್ಸೂ ಅರಳಬೇಕು; ಕೇಳುವವರ ಮತ್ತು ನೋಡುವವರ ಮನಸ್ಸೂ ಅರಳಬೇಕು. ವಿವರಣೆಯಾದ ಮೇಲೆಯಾಹಿ ಮಾಧವ ಎಂಬ ಅಷ್ಟಪದಿಯನ್ನು ಪ್ರಶಂಸೆ ಮಾಡಿದೆ. ನಾಗರತ್ನಮ್ಮ ಭಾಗವನ್ನು ಹಿಡಿದು ಅಷ್ಟಪದಿಯನ್ನು ಅಭಿನಯಿಸಿದರು. “ಯಾಹಿಎಂಬ ಸಣ್ಣ ಮಾತಿನಲ್ಲಿ ಅಷ್ಟೊಂದು ಭಾವ ವಿಶೇಷಗಳು ಅಡಗಿವೆಯೆಂಬುದು ಆಗಲೇ ನನಗೆ ಸ್ಪಷ್ಟವಾದದ್ದು. ಮಹಾಕವಿಯು ಹೇಗೆ ನೂತನ ನಿರ್ಮಾಪಕನೋ, (ಛಿಡಿeಚಿಣive) ಮಹಾ ಅಭಿ ನಯವೇತ್ತಳೂ ಹಾಗೆ ನಿರ್ಮಾಪಕಳಾಗುತ್ತಾಳೆ. ಅಭಿನಯವೂ ಒಂದು ರೀತಿಯ ಭಾಷ್ಯ.

 ಹಾಸ್ಯಪರಿಪಾಟಿ

ನಾಗರತ್ನಮ್ಮನವರಲ್ಲಿ ಹಾಸ್ಯ ಪರಿಪಾಟಿ ತುಂಬಿತ್ತು. ಆಕೆ ಸ್ವವಿಷಯವನ್ನು ಹೇಳಿಕೊಳ್ಳುತ್ತಾಹುಟ್ಟಿನಲ್ಲಿ ನಾಗರತ್ನ, ಆಮೇಲೆ ಭೋಗರತ್ನ, ಈಗ ರೋಗರತ್ನಎಂದು ಮಾತು ಮುಗಿಸಿದರು. ಆಗ ನಾನುಎರಡನ್ನು ಮರೆತುಬಿಟ್ಟಿರಿಎಂದೆ. “ಅದೇನು?” ಎಂದರು. “ಒಂದು ರಾಗರತ್ನ: ಇನ್ನೊಂದು ತ್ಯಾಗರತ್ನ. ಭೋಗರೋಗಗಳು ಕ್ಷಣಿಕವಾದವು. ನಿಮ್ಮ ರಾಗ ಅದನ್ನು ಕೇಳಿದವರ ಮನಸ್ಸಿನಲ್ಲಿ ಪರಿಣಾಮ ಮಾಡಿ, ಅವರ ಜೀವ ನೋಲ್ಲಾಸದಲ್ಲಿಯೂ ಜೀವನೋನ್ನತಿಯಲ್ಲಿಯೂ ಚಿರಕಾಲ ಉಳಿದುಕೊಂಡಿರುತ್ತದೆ. ನಿಮ್ಮ ತ್ಯಾಗದ ಪ್ರತ್ಯಕ್ಷ ರೂಪವಾದ ತಿರುವಾಯೂರು ಕ್ಷೇತ್ರದ ದೇವತಾ ಮಂದಿರಗಳು ಶಾಶ್ವತವಾಗಿ ನಿಂತಿರು ತ್ತವೆ.”

ಇದನ್ನು ನಾನು ಹೇಳುತ್ತಿದ್ದಂತೆಯೇ ಅವರು ಕೈ ಮುಗಿದುನಿಮ್ಮ ಮಾತನ್ನು ನೀವೇ ಇಟ್ಟುಕೊಳ್ಳಿಎಂದರು

 

ನಾಗರತ್ನಮ್ಮ ಕೆಲವು ನೆನಪುಗಳು

ಶೈಲಜ

 ಒಂದು ನಿಷೇಧ ವೃತ್ತಾಂತ.

             ‘ರಾಧಿಕಾ ಸಾಂತ್ವನಂ’ 18ನೇ ಶತಮಾನದ ತಂಜಾವೂರಿನ ದೊರೆ ಪ್ರತಾಪಸಿಂಹನ ಆಸ್ಥಾನ ದಲ್ಲಿ ಗಣಿಕೆಯಾಗಿದ್ದ ಮುದ್ದುಪಳನಿಯ (1739-1790) ಕೃತಿ. ಆಕೆ ಅತ್ಯಂತ ಸ್ಫುರದ್ರೂಪಿ, ಪ್ರತಿಭಾವಂತೆ. ಸಂಸ್ಕೃತ, ತೆಲುಗು ತಮಿಳು ಹೀಗೆ ಬಹುಭಾಷಾ ಪರಿಣತೆ. ಆಂಡಾಳ್ ವಿರಚಿತ  ತಿರುಪ್ಪಾವೈಯನ್ನು ತೆಲುಗು ಭಾಷೆಗೆ ತರ್ಜುಮೆ ಮಾಡಿದ್ದಳು. ತನ್ನ ಪರಂಪರೆ ಮತ್ತು ಕುಲವನ್ನು ತನ್ನ ತಾಯಿ ಮತ್ತು ಅಜ್ಜಿಯ ಮೂಲಕ ತುಂಬಾ ಹೆಮ್ಮೆಯಿಂದ ಕಟ್ಟಿಕೊಳ್ಳುವ ಅವಳಿಗೆ ತಾನೊಬ್ಬ ಸ್ತ್ರೀ ಹಾಗೂ ಗಣಿಕೆ ಎಂಬ ಕೀಳರಿಮೆ ಇರಲಿಲ್ಲ. ತನ್ನ ಕಾಲದ ಪುರುಷರೊಡನೆ ಸಮಾನಸ್ತರದಲ್ಲಿ, ಆತ್ಮವಿಶ್ವಾಸದಿಂದ ಬದುಕಿ ಬಾಳಿದವಳು. ಅವಳ ಸಮಕಾಲೀನ ಲೇಖಕರಲ್ಲಿ ಹಲವರು ತಮ್ಮ ಕೃತಿಯನ್ನು ಅವಳಿಗೆ ಅರ್ಪಿಸಿದ್ದರು. ಅವಳ ಬದುಕು ಮತ್ತು ಬರಹಗಳಿಂದ 17 ಮತ್ತು 18ನೇ ಶತಮಾನಗಳ ಭಾರತ ಈಗಿರುವುದಕ್ಕಿಂತ ಭಿನ್ನವಾಗಿತ್ತು ಎಂಬುದು ತಿಳಿಯುತ್ತದೆ.

              ಅವಳ ಕಾವ್ಯ ರಾಧೆ ಮತ್ತು ಕೃಷ್ಣರ ಸಂಬಂಧವನ್ನು ರಾಧೆಯ ದೃಷ್ಟಿಯಿಂದ, ಅವಳ ಭಾವನೆ, ತೊಳಲಾಟ ಮತ್ತು ಹಂಬಲಗಳ ಮೂಲಕ ಚಿತ್ರಿಸುವ ಅಪರೂಪದ ಪ್ರಣಯ ಕಾವ್ಯ. ಮುದ್ದುಪಳನಿಯ ಕೃತಿ ಭಾಷೆ ಮತ್ತು ಸಾಹಿತ್ಯದ ದೃಷ್ಟಿಯಿಂದ ಉತ್ಕೃಷ್ಟವಾಗಿದೆ ಎಂದು 1887ರಲ್ಲಿ ಓರಿಯಂಟಲಿಸ್ಟ್ ವಿದ್ವಾಂಸರು ಇದನ್ನು ಪ್ರಕಟಿಸಿದರು. 1907ರಲ್ಲಿ ವೆಂಕಟನರಸು ಎಂಬುವರು ಇದನ್ನು ಮರುಮುದ್ರಿಸಿದರು.

              ಶ್ರೇಷ್ಠ ವಿದ್ವಾಂಸರಿಗೆ ಕೃತಿ ಅಶ್ಲೀಲ ಎನಿಸಿರಲಿಲ್ಲ. ಇದರಲ್ಲಿ ಸಮಾಜದ ನೈತಿಕ ಮೌಲ್ಯಗಳನ್ನು ಹಾಳು ಮಾಡಿ, ಸಮಾಜವನ್ನು ಅಧೋಗತಿಗೆ ತಳ್ಳಬಲ್ಲ ಅಂಶಗಳಿವೆ ಎಂದೂ ಅನ್ನಿಸಿರಲಿಲ್ಲ. ಎಲ್ಲರೂ ಅದನ್ನು ಒಳ್ಳೆಯ ಸಾಹಿತ್ಯ ಕೃತಿಯೆಂದು ಮನ್ನಿಸಿದ್ದರು. ನಿಜವಾಗಿಯೂ ಸಮಸ್ಯೆ ಬಂದದ್ದು ಇಪ್ಪತ್ತನೆಯ ಶತಮಾನದಲ್ಲಿ. ವಸಾಹತು ಆಡಳಿತ ಮತ್ತು ಕ್ರೈಸ್ತ ಮಿಷನರಿಗಳ ಪ್ರಭಾವಗಳಿಂದ ಹೆಣ್ತನ, ಸ್ತ್ರೀಲೈಂಗಿಕತೆ, ಅಶ್ಲೀಲತೆ, ನೈತಿಕತೆ, ಸಾಹಿತ್ಯ, ಸಂಗೀತ ವಿಚಾರಗಳ ಬಗ್ಗೆ ಭಾರತೀಯರ ಗ್ರಹಿಕೆ ಮತ್ತು ಚಿಂತನೆ ಬದಲಾಗಲು ಪ್ರಾರಂಭವಾಯಿತು. ಇವುಗಳನ್ನು ಕುರಿತ ವಸಾಹತು ಚಿಂತನೆ ಸಾಂಪ್ರದಾಯಿಕವೂ ಪ್ರತಿಗಾಮಿಯೂ ಆಗಿತ್ತು. ಹಾಗಿದ್ದಾಗ್ಯೂ ಭಾರತೀ ಯರು ಅವುಗಳನ್ನು ಅಳವಡಿಸಿಕೊಳ್ಳುವ ತೀವ್ರ ಉತ್ಸಾಹ ತೋರಿದರು. ಹೀಗಾಗಿ ಭಾರತದಲ್ಲಿ ಸಮಾಜ ಸುಧಾರಣೆಯ ಗಾಳಿ ಬಲವಾಗಿ ಬೀಸ ತೊಡಗಿತು. ಹೀಗೆ ಸುಧಾರಣೆಗೆ ಒಳಪಟ್ಟ ಆಚರಣೆ ಗಳಲ್ಲಿ ದೇವದಾಸಿ ಪದ್ದತಿಯೂ ಒಂದು. ದೇವ ದಾಸಿ ಪದ್ಧತಿ ರದ್ದತಿ ಚಳುವಳಿಯಲ್ಲಿ ಸಕ್ರಿಯ ರಾಗಿದ್ದ ತೆಲುಗು ಸಾಹಿತಿ ಮತ್ತು ಸಮಾಜ ಸುಧಾರಕ ಕುಂದಕೂರಿ ವೀರೇಶಲಿಂಗಂ ಪಂತುಲು ರಾಧಿಕಾ ಸಾಂತ್ವನಮು ಬಗ್ಗೆ ಕೆಟ್ಟದಾಗಿ ಟೀಕಿಸಿದ್ದರು. ಮುದ್ದುಪಳನಿ ಒಬ್ಬ ವೇಶ್ಯೆ; ಹಾಗಾಗಿ ಇಂತಹ ಅಶ್ಲೀಲ ಕೃತಿರಚನೆ ಅವಳಿಗೆ ಸಾಧ್ಯ ವಾಗಿದೆ ಎಂದು ಬರೆದರು.  

              ಇದು ನಾಗರತ್ನಮ್ಮನವರ ಕುತೂಹಲ ಕೆರಳಿಸಿತು. ವೆಂಕಟನರಸು ಆವೃತ್ತಿಯನ್ನು ಓದಿ ಅವರು ತುಂಬಾ ಪ್ರಭಾವಿತರಾದರು. ಆದರೆ ಅದರಲ್ಲಿದ್ದ ತಪ್ಪುಗಳು ಮತ್ತು ಮುದ್ದುಪಳನಿಯ ಮುನ್ನುಡಿ ಕೈಬಿಟ್ಟಿರುವುದು ಅವರ ಗಮನಕ್ಕೆ ಬಂತು. ಆಗ ಬಹಳ ಕಷ್ಟದಿಂದ ಮೂಲ ಹಸ್ತಪ್ರತಿ ಹುಡುಕಿ, ತಪ್ಪುಗಳನ್ನು ಸರಿಪಡಿಸಿ, ಬಿಟ್ಟುಹೋಗಿದ್ದ ಮುನ್ನುಡಿಯನ್ನು ಸೇರಿಸಿ, ಕೃತಿಯ ಇನ್ನೊಂದು ಆವೃತ್ತಿಯನ್ನು 1910 ಮಾರ್ಚಿ 30ರಂದು ಪ್ರಕಟಿಸಿದರು. ಅದನ್ನು ಮದ್ರಾಸಿನ ಹೆಸರಾಂತವಾವಿಲ್ಲ ರಾಮಸ್ವಾಮಿ ಶಾಸ್ತ್ರಿಗಳು ಮತ್ತು ಮಕ್ಕಳುಎನ್ನುವ ಪ್ರಕಾಶನ ಸಂಸ್ಥೆ ಪ್ರಕಟಿಸಿತು. ಕೃತಿಯ ಕರ್ತೃ ಒಬ್ಬ ಮಹಿಳೆ ಮತ್ತು ಒಬ್ಬ ಗೌರವಾನ್ವಿತ ದೇವದಾಸಿ ಎನ್ನುವುದು ಕೃತಿಯನ್ನು ಪ್ರಕಟಿಸು ವುದಕ್ಕೆ ಬಹುಮುಖ್ಯ ಪ್ರೇರಣೆ ಎನ್ನುವುದನ್ನು ತಮ್ಮ ಮುನ್ನುಡಿಯಲ್ಲಿ ನಾಗರತ್ನಮ್ಮ ಸ್ಪಷ್ಟಪಡಿಸಿ ದ್ದರು. ಪ್ರಕಟನೆಯಾದ ವರ್ಷ ಹಲವು ವಿದ್ವಾಂಸ ರು ಕೃತಿಯನ್ನು ಓದಿ ಅವರಿಗೆ ಮೆಚ್ಚುಗೆ ಸೂಚಿಸಿದರು.

              ಆದರೆ ಮುದ್ದುಪಳಿನಿ ಪ್ರಣಯ ಪ್ರಸಂಗಗಳನ್ನು ಅತ್ಯಂತ ರೋಚಕವಾಗಿ, ಅಶ್ಲೀಲವಾಗಿದೆ ಚಿತ್ರಿಸಿದ್ದಾಳೆ. ಹೆಂಗಸರು ಹೀಗೆ ಬರೆಯಬಾರದು ಎನ್ನುವುದು ವೀರೇಶಲಿಂಗಂ ಅವರ ಅಭಿಪ್ರಾಯವಾಗಿತ್ತು. ಅವರ ಟೀಕೆ ಯನ್ನು ನಾಗರತ್ನಮ್ಮ ತಮ್ಮ ಮುನ್ನುಡಿಯಲ್ಲಿ ಪ್ರಶ್ನಿಸಿದ್ದರು. ಇದು ಅಶ್ಲೀಲ ಎನ್ನುವುದಾದರೆ, ಪುರುಷರು ಬರೆದಿರುವ, ಇದಕ್ಕಿಂತಲೂ ಅಶ್ಲೀಲ ವಾದ ಕೃತಿಯನ್ನು ವೀರೇಶಲಿಂಗಂ ಅವರು ಸಂಪಾದಿಸಿ, ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಪಠ್ಯವಾಗಿ ಹೇಗೆ ನಿಗದಿಪಡಿಸಿದರು, ಎಂದೂ ನಾಗರತ್ನಮ್ಮ ಅವರನ್ನು ಪ್ರಶ್ನಿಸಿದ್ದರು. ಇನ್ನೂ ವಿಪರ್ಯಾಸವೆಂದರೆ, ವೀರೇಶಲಿಂಗಂ ಅವರ ಕೃತಿ ರಸಿಕಜನ ಮನೋರಂಜನಂ ಲೈಂಗಿಕವಾಗಿ ತುಂಬಾ ರೋಚಕವಾದ ಭಾಗಗಳನ್ನು ಒಳ ಗೊಂಡಿತ್ತು. ಸಂದರ್ಭದಲ್ಲಿಮಾನ ಮರ್ಯಾದೆ ಎನ್ನುವುದು ಕೇವಲ ಹೆಂಗಸರಿಗೆ ಮಾತ್ರವೇ, ಅದು ಗಂಡಸರಿಗೆ ಬೇಕಾಗಿಲ್ಲವೇ?” ಎಂದು ನಾಗರತ್ನಮ್ಮ ಪ್ರಶ್ನಿಸಿದ್ದರು. ನಿಷೇಧಿಸ ಬೇಕಿದ್ದ ಪುಸ್ತಗಳ ಪಟ್ಟಿಯಲ್ಲಿ ಪಂತುಲು ಅವರ ಪುಸ್ತಕವೂ ಇತ್ತು. ಆದರೆ ಪಟ್ಟಿ ಸಾರ್ವಜನಿಕವಾಗಿ ಪ್ರಕಟವಾದಾಗ ಪುಸ್ತಕದ ಹೆಸರು ಮಾತ್ರ ಇತ್ತು. ಲೇಖಕರÀ ಹೆಸರು ಮುಂತಾದ ವಿವರಗಳೇ ಇರಲಿಲ್ಲ. ಆದರೆ ರಾಧಿಕಾ ಸಾಂತ್ವನಮು ಮತ್ತು ನಾಗರತ್ನಮ್ಮನವರನ್ನು ಕುರಿತ ಪ್ರತಿಯೊಂದು ವಿವರವೂ ಪಟ್ಟಿಯಲ್ಲಿತ್ತು!

              ಕೃತಿಗೆ ಸಂಬಂಧಿಸಿದಂತೆ ಬಹು ದೊಡ್ಡ ಕಾನೂನು ಸಮರ ನಡೆಯಿತು. ಸಂದರ್ಭದಲ್ಲಿ ಅನೇಕ ಗಂಭೀರ ಸನಾತನ ಹಿಂದು ವಿದ್ವಾಂಸರು ನಾಗರತ್ನಮ್ಮನ ವಾದವನ್ನು ಬೆಂಬಲಿಸಿದರು. ನಾಗರತ್ನಮ್ಮ ಮತ್ತು ಅವರ ಬೆಂಬಲಿಗರು ಸಾಹಿತ್ಯ ಮತ್ತು ಸಮಾಜ ಕುರಿತು ಎಲ್ಲಾ ಕಾಲಕ್ಕೂ ಪ್ರಸ್ತುತವಾದ ಗಂಭೀರ ಪ್ರಶ್ನೆ ಗಳನ್ನು ಎತ್ತಿದರು. ಹೀಗೆ ಆಲೋಚಿಸಿದಲ್ಲಿ ಕೇವಲ ಭಾರತದ ಸಂದರ್ಭದಲ್ಲಿ ಮಾತ್ರವಲ್ಲದೆ, ಬೈಬಲ್ಲಿನಸಾಲೋಮನ್ಸ್ ಸಾಂಗ್ ಆಫ್ ಸಾಂಗ್ನಿಂದ ಹಿಡಿದು ಜಯದೇವನ ಗೀತಗೋವಿಂದ, ಒವಿಡ್ ಕವಿಯ ಮೆಟಮಾರ್ಫಸಿಸ್, ಕಾಂಗ್ರೀವ್ ಹಾಗೂ ಶೇಕ್ಸ್ಪಿಯರನ ನಾಟಕಗಳೂ ಸೇರಿದಂತೆ ಹಲವಾರು ಕೃತಿಗಳನ್ನು ಅಶ್ಲೀಲ ಕೃತಿಗಳ ಪಟ್ಟಿಯಲ್ಲಿ ಸೇರಿಸಬೇಕಾಗುತ್ತದೆ ಎನ್ನುವ ಅಂಶ ವನ್ನು ಎತ್ತಿತೋರಿಸಿದರು. ಹಾಗಿದ್ದಾಗ್ಯೂ ಕೂಡ ವಸಾಹತು ಸರ್ಕಾರ ಪುಸ್ತಕವನ್ನು ನಿಷೇಧಿಸಿತು. ಆದರೆ ಸ್ವಾತಂತ್ರ್ಯ ಬಂದ ಕೂಡಲೇ 1947ರಲ್ಲಿ ಮದ್ರಾಸಿನ ಮೊದಲ ಮುಖ್ಯಮಂತ್ರಿ ಟಿ. ಪ್ರಕಾಶಂ ನಿಷೇಧವನ್ನು ರದ್ದುಪಡಿಸಿದರು.

 ಹೀಗೊಂದು ತಿಥಿಯ ಕಥೆ

ನಾಗರತ್ನಮ್ಮನವರು ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿ ತಿರುವೈಯ್ಯಾರಿನಲ್ಲಿ ಪಾಳುಬಿದ್ದಿದ್ದ ತ್ಯಾಗ ರಾಜರ ಸಮಾಧಿಯನ್ನು ಪುನರ್ನಿರ್ಮಿಸಿದರು. ಹಾಗಿದ್ದಾಗ್ಯೂ ತ್ಯಾಗರಾಜರ ಆಲಯದೊಳಗೆ ಹೆಣ್ಣುಮಕ್ಕಳಿಗೆ ಸಂಗೀತಸೇವೆಗೆ ಪುರುಷರು ಅವಕಾಶ ಕೊಡಲಿಲ್ಲ. ನಾಗರತ್ನಮ್ಮ ತೀವ್ರವಾಗಿ ಹೋರಾಡಿ ಹೆಂಗಸರಿಗೆ ಅವಕಾಶ ಕಲ್ಪಿಸಿದರು. ಆದರೆ ಆಗ ಮೊದಲಿನಿಂದ ಆರಾಧನೆ ನಡೆಸುತ್ತಿದ್ದ ಹಿರಿಯರೊಬ್ಬರುಏನು ಮಾಡಿದರೇನು ಹೆಂಗಸರು ತ್ಯಾಗರಾಜರ ಶ್ರಾದ್ಧ ಮಾಡುವುದಕ್ಕೆ ಆಗುತ್ತದೆಯೇ?” ಎಂದು ತೀರಾ ವ್ಯಂಗ್ಯವಾಗಿ ಹಿಯಾಳಿಸಿದರು. ಅದೇಕೆ ಸಾಧ್ಯವಿಲ್ಲ ಎಂಬ ಛಲ ನಾಗರತ್ನಮ್ಮನವರಲ್ಲಿ ಮೂಡಿತುಬೇರೆಯವರು ಶ್ರಾದ್ಧವನ್ನು ಮಾಡಿದರೂ ಅದರ ಫಲವನ್ನು ಯಾರಿಗೆ ಧಾರೆ ಎರೆಯುತ್ತಾರೋ ಅವರೇ ಶ್ರಾದ್ಧ ಮಾಡಿದಂತೆ ಎಂದು ಶಾಸ್ತ್ರವೇತ್ತರು ನಾಗರತ್ನಮ್ಮನವರಿಗೆ ತಿಳಿಸಿದರು. ಆಗ ಅವರು ಬ್ರಾಹ್ಮಣರನ್ನು ಕರೆಸಿ ವಿಚಾರಿಸಿದರು. ಅದು ನಿಜಆದರೆ ದೇವದಾಸಿಯೊಬ್ಬಳು ಮಾಡಿದ ಅಡುಗೆಯನ್ನು ಬ್ರಾಹ್ಮಣರು ಊಟ ಮಾಡುವುದಿಲ್ಲ ಹಾಗಾಗಿ ಶ್ರಾದ್ಧ ಸಾಧ್ಯವಿಲ್ಲ ಎಂದು ಅವರಂದರು. ಆಗ ಅಡುಗೆಯನ್ನು ಬ್ರಾಹ್ಮಣರಿಂದಲೇ ಮಾಡಿಸುವುದಾಗಿಯೂ ಮತ್ತು ಶ್ರಾದ್ಧ ನಡೆಯುವಷ್ಟು ಹೊತ್ತು ತಾವು ಯಾರಿಗೂ ಕಾಣಿಸಿಕೊಳ್ಳುವುದಿಲ್ಲವೆಂದೂ ಆದರೆ ಎಲ್ಲವೂ ಮುಗಿದ ಮೇಲೆ ಶ್ರಾದ್ಧದ ಫಲವನ್ನು ತಮಗೆ ಧಾರೆ ಎರೆಯಬೇಕು ಎಂದು ನಾಗರತ್ನಮ್ಮ ಕೇಳಿಕೊಂಡರು. ಅವರ ಮಾತಿಗೆ ಬ್ರಾಹ್ಮಣರು ಒಪ್ಪಿದರು. ಶ್ರಾದ್ಧ ಮುಗಿದ ಮೇಲೆ ನಾಗರತ್ನಮ್ಮ ಅವರಿಗೆಲ್ಲಾ ಒಳ್ಳೆಯ ದಕ್ಷಿಣೆಯನ್ನು ನೀಡಿ ಗೌರವಿಸಿದರು. ಜಾತಿಧರ್ಮಗಳು ನಿರ್ಮಿಸುವ ಕಟ್ಟಳೆಗಳನ್ನು ನಾಗರತ್ನಮ್ಮ ತಿರಸ್ಕರಿಸಲಿಲ್ಲ. ಅವುಗಳನ್ನು ನಂಬಿ ಸ್ವೀಕರಿಸಿದರು. ಆದರೆ ಹಾಗೆ ಮಾಡುವಾಗಲೇ  ಅದರ ಪೊಳ್ಳುತನ ವನ್ನು ಬಯಲುಗೊಳಿಸಿದರು. ವ್ಯವಸ್ಥೆಯೊಳಗಿದ್ದೇ ವ್ಯವಸ್ಥೆಯನ್ನು ಪ್ರಶ್ನಿಸಿ, ತಿರುಗುಮುರುಗು ಮಾಡಿದರು. ತಮ್ಮ ಅಧೀನದಲ್ಲಿದ್ದ ತ್ಯಾಗರಾಜರ ಸಮಾಧಿಯಲ್ಲಿ ಹೆಂಗಸರು ಮತ್ತು ದೇವದಾಸಿ ಯರಿಗೆ ಸಂಗೀತಸೇವೆಯ ಅವಕಾಶ  ನಿರಾಕರಿಸು ವಂತಿಲ್ಲ ಎಂದು ಉಯಿಲು ಮಾಡಿದರು.

 ನಾನೂ ನಿಮ್ಮವಳೇ,

ಇಂತಿ

ದೇವದಾಸಿ

              ನಮ್ಮ ಸಮಾಜ, ಸಂಸ್ಕøತಿ, ಧವರ್i ಮತ್ತು ಪುರುಷಪ್ರಧಾನ ವ್ಯವಸ್ಥೆ ದೇವದಾಸಿ ಪದ್ಧತಿಯನ್ನು ಹುಟ್ಟುಹಾಕಿತು. ವ್ಯವಸ್ಥೆಯ ಭಾಗವಾಗಿ ರೂಪುಗೊಂಡ ದೇವದಾಸಿಯರು ಅತ್ಯಂತ ಸುಶಿಕ್ಷಿ ತರೂ, ಪ್ರತಿಭಾವಂತರೂ ಬಹುಭಾಷಾ ಪರಿಣತ ರೂ ಆಗಿದ್ದರು. ಸಂಗೀತನೃತ್ಯ ಕಲೆಗಳನ್ನು ಅತ್ಯಂತ ಜತನದಿಂದ ಕಾಪಿಟ್ಟು, ಕಾಲಕಾಲಕ್ಕೆ ಅದನ್ನು ಪರಿಷ್ಕರಿಸುತ್ತಿದ್ದರು. ಅವರನ್ನು ಸಾಮಾಜಿಕವಾಗಿ ಒಂದು ವಿಶಿಷ್ಟ ಗುಂಪೆಂದೇ ಪರಿಗಣಿಸಿದ್ದರು. ಅವರನ್ನು ನಿತ್ಯಸುಮಂಗಲಿಯರು ಎಂದು ಸಮಾಜ  ಗೌರವಿಸುತ್ತಿತ್ತು. ವಸಾಹತು ಸರ್ಕಾರ ಮತ್ತು ಪಾಶ್ಚಿಮಾತ್ಯ ಶಿಕ್ಷಣದಿಂದ ಪ್ರಭಾವಿತರಾದ ಜನ ಕಾನೂನು ಕ್ಷೇತ್ರವನ್ನು ಹೆಚ್ಚೆಚ್ಚು ಆಕ್ರಮಿಸಿ ಕೊಳ್ಳುವ ತನಕ ಸರ್ಕಾರ ಹಾಗೂ ನ್ಯಾಯಾಲಯ ದೇವದಾಸಿಯರನ್ನು ವೇಶ್ಯೆಯರೆಂದು ಪರಿಗಣಿಸಿ -ರಲಿಲ್ಲ. ಅವರ ಸಾಂಪ್ರದಾಯಿಕ ಹಕ್ಕುಗಳನ್ನು ಅದು ಮಾನ್ಯ ಮಾಡಿತ್ತುಆದರೆ ಕ್ರಮೇಣ ಪಾಶ್ಚಿಮಾತ್ಯ ಶಿಕ್ಷಣದ ಪ್ರಭಾವಕ್ಕೆ ಒಳಗಾಗಿದ್ದ ಸುಶಿಕ್ಷಿತ ಮೇಲ್ಜಾತಿ ಮತ್ತು ಮಧ್ಯಮ ವರ್ಗ ವಸಾಹತು ದೊರೆಗಳ ಅಭಿಪ್ರಾಯವನ್ನೇ ಧ್ವನಿಸಲಾರಂಭಿಸಿದವು. ಇವರೆಲ್ಲರಿಗೆ ಭಾರತೀಯ ಸಮಾಜ ಮತ್ತು ಸಂಸ್ಕೃತಿ ಶುದ್ಧ ಹಾಗೂ ಕಳಂಕರಹಿತ ಎಂದು ಪಾಶ್ಚಿಮಾತ್ಯರಿಗೆ ತೋರಿಸ ಬೇಕೆಂಬ ತೀವ್ರ ತವಕವಿತ್ತು. ಹಿನ್ನೆಲೆಯಲ್ಲಿ ಹುಟ್ಟಿಕೊಂಡ ನಾಚ್ ವಿರೋಧಿ ಚಳುವಳಿ ದೇಗುಲಗಳಿಗೆ ದೇವದಾಸಿಯರನ್ನು ಅರ್ಪಿಸಿಅವರಿಗೆ ಜಮೀನು, ಮಾಶಾಸನ ನೀಡುವುದನ್ನು ವಿರೋಧಿಸಿತು. ದೇವಾಲಯದಲ್ಲಿ ಹಾಗೂ ಸಾರ್ವಜನಿಕವಾಗಿ ಅವರ ಸಂಗೀತ ನೃತ್ಯವನ್ನು ನಿಷೇಧಿಸಬೇಕೆಂದು ಒತ್ತಾಯಿಸಿತು. ಇದರಿಂದ ಅವರು ಆರ್ಥಿಕ ಸುಭದ್ರತೆ ಕಳೆದುಕೊಂಡರು. ಅವರ ಬದುಕು ತೀರಾ ಅತಂತ್ರವಾಯಿತು. ಬದುಕಲು ಹೊಸ ದಾರಿ ಹುಡುಕಿಕೊಳ್ಳದಿದ್ದರೆ ಸಮಾಜ ಪಟ್ಟಿಹಚ್ಚಿದ್ದಂತೆ ಅವರು ಸೂಳೆಯರೇ ಆಗಬೇಕಾಗುತ್ತಿತ್ತು. ಸಂದರ್ಭದಲ್ಲಿ ನಾಗರತ್ನಮ್ಮ ಎತ್ತುವ ಪ್ರಶ್ನೆಗಳು ಮತ್ತು ಮುಂದಿಡುವ ಸಲಹೆಗಳು ಇಂದಿಗೂ ಪ್ರಸ್ತುತ. ಮತ್ತು ಚಿಂತನಾರ್ಹ.

1.ವೇಶ್ಯಾವೃತ್ತಿಯನ್ನು ಒಂದು ಸಮಸ್ಯೆ ಎಂದು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದರೆ, ಆಗ ಸರ್ಕಾರ ಸಾರ್ವಜನಿಕ ನೈತಿಕತೆಯನ್ನು ಉತ್ತಮ ಪಡಿಸುವ ಕಡೆ ಗಮನಹರಿಸಬೇಕು. ದೇವದಾಸಿ ಪದ್ಧತಿಯನ್ನು ನಿಷೇಧಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ದೇವದಾಸಿಯರಲ್ಲೂ ಕೆಲವರು ದಾರಿತಪ್ಪಿರುವುದು ನಿಜ. ಆದರೆ, ಕೊಳೆತ ಸೇಬಿನಹಣ್ಣನ್ನು ಪೆಟ್ಟಿಗೆಯಿಂದ ತೆಗೆದು ಹೊರಕ್ಕೆ ಎಸೆಯಬೇಕೇ ಹೊರತು ಸೇಬಿನಹಣ್ಣೇ ಬೇಡ ಎನ್ನುವುದು ಸಮಸ್ಯೆಗೆ ಪರಿಹಾರವಲ್ಲ. ದಾರಿ ತಪ್ಪಿರುವವರನ್ನು ಸರ್ಕಾರ ಶಿಕ್ಷಿಸಬೇಕೇ ಹೊರತು ಒಂದು ಕಲಾಸಂರಕ್ಷಕರ ಸಂಪ್ರದಾಯವನ್ನೇ ನಿಷೇಧಿಸುವುದು ಸರಿಯಲ್ಲ.

2. ದೇಗುಲಗಳು ಹಿಂದಿನಿಂದ ದೇವದಾಸಿಯರಿಗೆ ನೀಡುತ್ತಿರುವ ಆರ್ಥಿಕ ಸಹಾಯ ಹಿಂದಕ್ಕೆ ತೆಗೆದುಕೊಳ್ಳುವುದು ಅವರನ್ನು ಪರೋಕ್ಷವಾಗಿ ವೇಶ್ಯಾವೃತ್ತಿಗೆ ತಳ್ಳುತ್ತದೆ. ಇದು ಸರ್ಕಾರದ ಮೂಲ ಉದ್ದೇಶವನ್ನೇ ತಿರುಗುಮುರುಗು ಮಾಡುತ್ತದೆ.

ಒಂದು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲೇ ಬೇಕಾದ್ದು ಸರ್ಕಾರದ ಹೊಣೆ.

              ಹೀಗೆ ದೇವದಾಸಿಯರು ವ್ಯವಸ್ಥೆಯ ಮಕ್ಕಳು. ಶೂನ್ಯದಿಂದ ಉದ್ಭವವಾದವರಲ್ಲ. ಅವರ ಹಿಂದೆ ಸಮಾಜದ ಎಲ್ಲರ ಪಾತ್ರವೂ ಇದೆ ಎಂದು ಸಮಾಜದ ಹೊಣೆಗಾರಿಕೆಯನ್ನು ನೆನಪಿಸಿ, ಸಮಾಜ ತನ್ನನ್ನು ಪ್ರಶ್ನಿಸಿಕೊಳ್ಳುವಂತೆ ಮಾಡಿದ ನಾಗರತ್ನಮ್ಮ ಅಂತಿಂಥ ಹೆಣ್ಣಲ್ಲ.

  

ಪುಸ್ತಕ ಪರಿಚಯ

ಗಟ್ಟಿದನಿಯ ದಿಟ್ಟ ಕಲಾವಿದೆ ಬೆಂಗಳೂರು ನಾಗರತ್ನಮ್ಮ  - ಡಾ ಎನ್ ಜಗದೀಶ್ ಕೊಪ್ಪ

ಬೆಂಗಳೂರು ನಾಗರತ್ನಮ್ಮ ಸಂಗೀತ, ಸಾಹಿತ್ಯ ಮತ್ತು ಮಹಿಳಾಲೋಕಗಳಿಗೆ ಹಲವು ರೀತಿಗಳಲ್ಲಿ ತುಂಬಾ ಮುಖ್ಯವಾಗುವಂತಹ ಒಬ್ಬ ವ್ಯಕ್ತಿ. ಮೂರು ಕ್ಷೇತ್ರಗಳಿಗೆ ಸಂಬಂಧಿಸಿಂತೆ ಅವರು ಬಹುಮುಖ್ಯವಾದ ಮತ್ತು ಎಲ್ಲ ಕಾಲಕ್ಕೂ ಪ್ರಸ್ತುತವಾಗುವ ಪ್ರಶ್ನೆಗಳನ್ನು ಎತ್ತುತ್ತಾರೆ ಮತ್ತು ಮೂಲಕ ಎಲ್ಲರ ಆತ್ಮಸಾಕ್ಷಿಯನ್ನೂ ಸ್ಪರ್ಶಿ ಸುತ್ತಾರೆ. ಸಾಹಿತ್ಯ ಮತ್ತು ಸಂಗೀತ ಲೋಕಗಳಲ್ಲಿನ ಜಾತಿ ಲಿಂಗ ವರ್ಗ ತಾರತಮ್ಯಗಳನ್ನು ಸಂಪ್ರದಾಯದ ಒಳಗಿದ್ದೇ ಪ್ರಶ್ನಿಸುತ್ತಾರೆ ಮತ್ತು ಸ್ವತಃ ತಮ್ಮ ದಿಟ್ಟ ಹೋರಾಟದ ಮೂಲಕ ಒಂದಿಷ್ಟು ಬದಲಾವಣೆಗಳನ್ನು ತರುತ್ತಾರೆ. ಇಂದು ಜಗತ್ವಿಖ್ಯಾತವಾಗಿರುವ ತ್ಯಾಗರಾಜರ ಆರಾಧನೆ ತಾಣ ತಿರುವಯ್ಯಾರಿನಲ್ಲಿ ತನ್ನ ಸರ್ವಸ್ವ ವನ್ನು ತ್ಯಾಗಮಾಡಿ ಸಂತ ತ್ಯಾಗರಾಜರಿಗೆ ದೇಗುಲವನ್ನು ಕಟ್ಟಿಸಿದವರು ಇವರು. ಇವರನ್ನು ಕುರಿತು ಶ್ರೀ ವಿ ಶ್ರೀರಾಂ ಅವರುದೇವದಾಸಿ ಅಂಡ್ ಸೇಂಟ್ಎನ್ನುವ ಕೃತಿಯನ್ನು ಇಂಗ್ಲಿಷಿನಲ್ಲಿ ಹೊರತಂದರು.

ನಂತರದಲ್ಲಿ ಈಗ ಕನ್ನಡದಲ್ಲಿ ಅವರನ್ನು ಕುರಿತು ಎರಡು ಕೃತಿಗಳು ಪ್ರಕಟವಾಗಿವೆ. ಅವರ ಬದುಕನ್ನು ಕುರಿತು ಡಾ ಎನ್ ಜಗದೀಶ್ ಕೊಪ್ಪ ಅವರು ಬರೆದಿರುವಗಟ್ಟಿದನಿಯ ದಿಟ್ಟ ಕಲಾವಿದೆ ಬೆಂಗಳೂರು ನಾಗರತ್ನಮ್ಮ

ಡಾ ಕೊಪ್ಪ ಅವರು ಕ್ಷೇತ್ರ ಸಮೀಕ್ಷೆ ನಡೆಸಿ, ಹಲವರನ್ನು ಭೇಟಿಯಾಗಿ ನಾಗರತ್ನಮ್ಮನವರನ್ನು ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಜೊತೆಗೆ ಹಲವು ಗ್ರಂಥಗಳು, ಡಿವಿಜಿ, ಮೈಸೂರು ವಾಸುದೇವಾಚಾರ್ಯರು, ಪುಸ್ತಕಮನೆ ಹರಿಹರಪ್ರಿಯ ಮುಂತಾದವರ ಲೇಖನಗಳು, ಇಂಗ್ಲಿಷ್ ಹಾಗೂ ತೆಲುಗು ಪತ್ರಿಕೆಗಳು ಮುಂತಾದವನ್ನು ಪರಾಮರ್ಶಿಸಿ ವಿಚಾರಗಳನ್ನು ಕಲೆಹಾಕಿದ್ದಾರೆ. ಸುಮಾರು ಹನ್ನೆರಡು ಅಧ್ಯಾಯ ಗಳಿರುವ ಕೃತಿ ನಾಗರತ್ನಮ್ಮನವರ ಹೋರಾಟದ ಬದುಕಿಗೆ ಒತ್ತುಕೊಟ್ಟಿದೆ. ಕೃತಿಯಲ್ಲಿ ಅವರ ವೈಯಕ್ತಿಕ ಬದುಕಿನ ವಿವರಗಳು ಸಾಕಷ್ಟು ಇವೆ. ಅವರು ಬೇರೆ ಬೇರೆ ನೆಲೆಯಲ್ಲಿ ನಡೆಸಿದ ಹೋರಾಟಗಳ ಬಗ್ಗೆ ತುಂಬಾ ವಿಸ್ತೃತವಾಗಿದೆ. ಮೊದಲ ನಾಲ್ಕು ಅಧ್ಯಾಯಗಳು ನಂಜನ ಗೂಡಿನ ನಾಗರತ್ನ ಮದ್ರಾಸಿನಲ್ಲಿ ರಾಜಾಜಿ ಯವರು ಗೌರವಿಸುವಂತಹ ಬೆಂಗಳೂರು ನಾಗರತ್ನಮ್ಮಾಳ್ ಆಗಲು ತುಳಿದ ಕಲ್ಲುಹಾದಿಯ ಬಿರುಬಿಸಿಲಿನ ಪಯಣವನ್ನು ಕಟ್ಟಿಕೊಡುತ್ತದೆ. ನಂತರದ ಅಧ್ಯಾಯಗಳು ನಾಗರತ್ನಮ್ಮನವರ ಬದುಕಿನ ಮೂರು ದೊಡ್ಡ ಹೋರಾಟಗಳನ್ನು ಕೇಂದ್ರವಾಗಿ ಇಟ್ಟುಕೊಂಡಿವೆ. ಮೊದಲನೆಯದು ತೆಲುಗು ಕವಯತ್ರಿ ಮುದ್ದುಪಳನಿಯ ರಾಧಿಕಾ ಸಾಂತ್ವನಮು ಕೃತಿ ಮತ್ತು ಅದರ ಮರುಪ್ರಕಟನೆಗೆ ಸಂಬಂಧಿಸಿದಂತೆ ನಾಗರತ್ನಮ್ಮನವರು ನಡೆಸಿದ ಹೋರಾಟ. ಸಂದರ್ಭದಲ್ಲಿ ಶೀಲ ಆಶ್ಲೀಲ ಎನ್ನುವುದಕ್ಕೆ ಸಂಬಂಧಿಸಿದಂತೆ ಅವರು ಎತ್ತುವ ಬಹುಮುಖ್ಯವಾದ ಮತ್ತು ಸದಾ ಪ್ರಸ್ತುತವಾಗುವ ಪ್ರಶ್ನೆಗಳ ಬಗ್ಗೆ ವಿಸ್ತೃತವಾದ ಮಾಹಿತಿ ಇದೆ.

ಎರಡನೆಯದು ತಿರುವೈಯ್ಯಾರಿನಲ್ಲಿ ಸಂತ ತ್ಯಾಗರಾಜರ ಸಮಾಧಿಯನ್ನು ಹುಡುಕಿ, ಅದನ್ನು ಪುನರ್ನಿರ್ಮಿಸುವ ಸಂದರ್ಭ. ಆಗ ಅವರು ಎದುರಿಸಿದ ಜಾತಿ ಮತ್ತು ಲಿಂಗದ ಸಮಸ್ಯೆಗಳು, ಗುಂಪುಗಾರಿಕೆಯ ಸಮಸ್ಯೆಗಳು, ರಾಜಕೀಯ ಸಮಸ್ಯೆಗಳು, ಆರ್ಥಿಕ ಸಮಸ್ಯೆಗಳ ವಿವರಗಳನ್ನು ಲೇಖಕರು ನೀಡುತ್ತಾರೆ. ಅವುಗಳನ್ನೆಲ್ಲಾ ಗೆದ್ದು ಸ್ವತಃ ತಾನೇ ಸಂತಳಾಗುವ ನಾಗರತ್ನಮ್ಮನವರನ್ನು ತ್ಯಾಗರಾಜರ ಸಮಾಧಿಯ ಪಕ್ಕದಲ್ಲಿಯೇ ಸಮಾಧಿ ಮಾಡುವ ವಿವರಗಳಿವೆ. ಮೂರನೆಯದಾಗಿ  ನಾಚ್ವಿರೋಧಿ ಚಳುವಳಿಯಲ್ಲಿಯೂ ನಾಗರತ್ನ ಮ್ಮನವರು ಸಕ್ರಿಯವಾದ ಮುಂದಾಳತ್ವ ವಹಿಸಿದ್ದ ವಿವರಗಳನ್ನು ಕೃತಿ ಒಳಗೊಂಡಿದೆ

 ‘ಕಪಿಲೆ ಹರಿದಳು ಕಡಲಿಗೆ’  -  ಪ್ರೊ ಮಲೆಯೂರು ಗುರುಸ್ವಾಮಿ

 ಪ್ರೊ ಮಲೆಯೂರು ಗುರುಸ್ವಾಮಿಯವರು ರಚಿಸಿರುವ ಕಾದಂಬರಿಕಪಿಲೆ ಹರಿದಳು ಕಡಲಿಗೆನಾಗರತ್ನಮ್ಮನವರ ಜೀವನವನ್ನು ಆಧರಿಸಿದೆಹಲವು ವರ್ಷಗಳ ಕಾಲ ನಂಜನಗೂಡಿನ ಜೆಎಸ್ಎಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ ರಾಗಿದ್ದ ಪ್ರೊ ಮಲೆಯೂರು ಗುರುಸ್ವಾಮಿ ಯವರು ಕ್ಷೇತ್ರಸಮೀಕ್ಷೆಗೆ ಮತ್ತು ಕ್ಷೇತ್ರಗಳಿಗೆ ಸಂಬಂಧಿಸಿದ ಮಾಹಿತಿಗಳಿಗೆ ಹೆಸರಾದವರು. ನಂಜನಗೂಡಿನ ಬಗ್ಗೆ ಅವರಿಗೆ ಅಪಾರವಾದ ಪ್ರೀತಿ.  “ನಂಜನಗೂಡಿನ ಬಗ್ಗೆ ಎಲ್ಲಿಯಾದರೂ ಒಂದು ಸಣ್ಣ ಸಂಗತಿ ನನ್ನ ಕಿವಿಗೆ ಬಿದ್ದರೂ ನನ್ನ ಸುಪ್ತಪ್ರಜ್ಞೆ ಜಾಗ್ರತಗೊಂಡು ವಿಷಯದ ಬೆನ್ನು ಹತ್ತಿ ಹೋಗುತ್ತದೆ. ಇಂತಹ ನನ್ನ ಕುತೂಹಲವೇ ಕಾದಂಬರಿಗೆ ಪ್ರೇರಣೆ ಯಾಗಿದೆ,” ಎಂದು ಅವರು ಕೃತಿಯ ಮುನ್ನುಡಿ ಯಲ್ಲಿ ಕೇಳಿಕೊಂಡಿದ್ದಾರೆ. ಇಲ್ಲಿನ ಹೆಣ್ಣುಮಗ ಳೊಬ್ಬಳು ತಮಿಳುನಾಡಿನ ಮತ್ತು ದೇಶದ ಇತಿಹಾಸದಲ್ಲಿಯೇ ಅಳಿಸಲಾಗದ ಘಟನೆಗಳಿಗೆ ಕಾರಣವಾದದ್ದು ಅವರ ಸೃಜನಶೀಲ ಮನಸ್ಸನ್ನು ಆವರಿಸಿದಾಗ ರೂಪುಗೊಂಡ ಕಾದಂಬರಿಯೇ ಕಪಿಲೆ ಹರಿದಳು ಕಡಲಿಗೆ. ತಾವು ಸಂಗ್ರಹಿಸಿದ ಮಾಹಿತಿಗಳೊಂದಿಗೆ ವಿ ಶ್ರೀರಾಮ್ ಅವರದೇವದಾಸಿ ಅಂಡ್ ಸೇಂಟ್,’ ಡಾ ಜಗದೀಶ್ ಕೊಪ್ಪ ಅವರಗಟ್ಟಿದನಿಯ ದಿಟ್ಟ ಕಲಾವಿದೆ ಬೆಂಗಳೂರು ನಾಗರತ್ನಮ್ಮ’  ಇವುಗಳಲ್ಲದೆ ಡಿವಿಜಿ ಕೃತಿಶ್ರೇಣಿ, ಮೈಸೂರು ವಾಸುದೇವಾಚಾರ್ಯರನಾ ಕಂಡ ಕಲಾವಿದರು,’ ಎಚ್ ಎಲ್ ನಾಗೇ ಗೌಡರಭೂಮಿಗೆ ಬಂದ ಗಂಧರ್ವ,’ ಎಸ್ ಕೆ ರಾಮಚಂದ್ರರಾಯರನಮ್ಮ ಸಂಗೀತ ಮತ್ತು ವಾಗ್ಗೇಯಕಾರರು,’ ಮುಂತಾದವುಗಳಿಂದಲೂ ಶ್ರೀಯುತರು ಮಾಹಿತಿ ಸಂಗ್ರಹಿಸಿದ್ದಾರೆ.

ಹಲವು ಐತಿಹಾಸಿಕ ಘಟನೆಗಳಿಗೆ ತಮ್ಮ ಕಲ್ಪನಾವಿಲಾಸದ ಉಡುಗೆ ಉಡಿಸಿ ಅದನ್ನು ರಮ್ಯವಾಗಿ, ಭಾವುಕವಾಗಿ ವಿವರವಾಗಿ ಚಿತ್ರಿಸಿದ್ದಾರೆ. ದೇವದಾಸಿಯರನ್ನು ಒಟ್ಟು ಸಮಾಜ ನಡೆಸಿಕೊಳ್ಳುತ್ತಿದ್ದ ರೀತಿ, ಮೈಸೂರು ಸಂಸ್ಥಾನದಲ್ಲಿ ತಾಫೆ ಪದ್ದತಿ ರದ್ದಾದದ್ದು, ನಾಗರತ್ನಮ್ಮನವರಿಗೆ ಬೆಂಗಳೂರಿನಲ್ಲಿ ಆಶ್ರಯ ನೀಡಿದ ಜಸ್ಟಿಸ್ ನರಹರಿರಾಯರು ಮತ್ತು ನಾಗರತ್ನಮ್ಮನವÀ ನಡುವಿನ ಸಂಬಂಧದ ಸೂಕ್ಷ್ಮಗಳು, ನಾಗರತ್ನಮ್ಮ ಮತ್ತು ಭೈರವಿ ಕೆಂಪೇಗೌಡರ ಗುರುಶಿಷ್ಯ ಸಂಬಂಧ, ನಾಚ್ವಿರೋಧಿ ಚಳುವಳಿಯಲ್ಲಿ  ನಾಗರತ್ನಮ್ಮ ನೇತೃತ್ವ ವಹಿಸಿದ್ದು, ಸಂತ ತ್ಯಾಗರಾಜರ ದೇಗುಲ ನಿರ್ಮಾಣ ಮತ್ತು ಆರಾಧನೆಯ ಸನ್ನಿವೇಶಗಳು ಮುಂತಾದ ಐತಿಹಾಸಿಕ ಘಟನೆಗಳನ್ನು ತಮ್ಮ ಸೃಜನ ಶೀಲತೆಯ ಕುಂಚದಿಂದ ಸ್ಪರ್ಶಿಸಿ, ಓದುಗರಿಗೆ ನೀಡಿದ್ದಾರೆ. ಕಾದಂಬರಿಯ ವಿಶೇಷವೇನೆಂದರೆ, ಹಲವು ನಿಜಜೀವನದ ಘಟನೆಗಳು ಹೆಸರುಗಳು, ಸನ್ನಿವೇಶ, ಸ್ಥಳ ಇದ್ಯಾವುದೂ ಬದಲಾಗದೆ ಕಾದಂಬರಿಯಲ್ಲಿ ಹಾಗೆಯೇ ಬರುತ್ತದೆ. ಉದಾಹರಣೆಗೆ ಕಛೇರಿಯೊಂದರ ನಂತರ ಡಿವಿಜಿಯವರು ಮಾತನಾಡುವ ಸಂದರ್ಭ. ಹಾಗಾಗಿ ಕಾದಂಬರಿಯಲ್ಲಿ ಕಲ್ಪನೆ ಮತ್ತು ಇತಿಹಾಸ ಒಟ್ಟೊಟ್ಟಿಗೆ ಇದೆ. ನಾಗರತ್ನಮ್ಮನವರ ವ್ಯಕ್ತಿತ್ವದ ವಿಭಿನ್ನ ಆಯಾಮಗಳನ್ನು ಕಾದಂಬರಿ ಅನಾವರಣಗೊಳಿಸುತ್ತದೆ. ಸಂತ ತ್ಯಾಗರಾಜರ ದೇಗುಲ ನಿರ್ಮಾಣದಲ್ಲಿ ತೊಡಗಿಕೊಳ್ಳುತ್ತಾ ಸ್ವತಃ ತಾವೇ ಸಂತರಾಗುವ ಪ್ರಕ್ರಿಯೆ ಯೊಂದಿಗೆ ಕಾದಂಬರಿ ಮುಗಿಯುತ್ತದೆ.

 ಗಟ್ಟಿದನಿಯ ದಿಟ್ಟ ಕಲಾವಿದೆ

ಅಧಿಕೃತ ಮಾರಾಟಗಾರರು

ಅಕ್ಷರ ಪ್ರಕಾಶನ ಪುಸ್ತಕ ಮಳಿಗೆ

83/, 15ನೇ ಮುಖ್ಯ ರಸ್ತೆ,

ವಿಜಯನಗರ, ಬೆಂಗಳೂರು

ಕಪಿಲೆ ಹರಿದಳು ಕಡಲಿಗೆ

ಶ್ರೀ ರಾಜೇಂದ್ರ ಪ್ರಿಂಟರಸ್ ಅಂಡ್ ಪಬ್ಲಿಷರ್ಸ್

12/1 ಈವನಿಂಗ್ ಬಜಾರ್ ಹಿಂಬಾಗ

ಶಿವರಾಂಪೇಟೆ, ಮೈಸೂರು

ದೂರವಾಣಿ: 2476019

 

ಮರೆಯಲಾಗದ  ಕ್ಷಣಗಳು

ಮೂಲ: ಲೈಫ್ ಇನ್ ತ್ರಿ ಆಕ್ಟೇವ್ಸ್: ದೀಪಾ ಗಣೇಶ್

ಬಿಭಾಸ್ ತಂದ ಪೇಚು

 ಆಲ್ ಇಂಡಿಯಾ ರೇಡಿಯೋದ ಆರಂಭದ ದಿನಗಳು. ಗಂಗೂಬಾಯಿಯವರು ಒಂದು ಧ್ವನಿಮುದ್ರಣವನ್ನು ಆಗಷ್ಟೇ ಮುಗಿಸಿದ್ದರು. ಮತ್ತೆ ಎರಡನೆಯ ಮುದ್ರಣಕ್ಕೆ ಕರಾರುಪತ್ರ ಬಂತು. ಸಮಯ ಇರಲಿಲ್ಲ. ತುಂಬಾ ಗಾಬರಿಯಿಂದ ಅವರು ಬೆಳಗಿನ ರಾಗ ಬಿಭಾಸ್ ಆರಿಸಿಕೊಂಡರು. ಅದನ್ನವರು ಗುರುಮುಖೇನ ಕಲಿತಿರಲಿಲ್ಲ. ಸ್ವತಃ ತಾವೇ ಅಭ್ಯಾಸ ಮಾಡಿದ್ದರು. ಗುರುಗಳು ಕಛೇರಿಗೆಂದು ಬೇರೆ ಊರಿಗೆ ಹೋಗಿದ್ದರಿಂದ ಅದನ್ನು ಗುರುಗಳ ಮುಂದೆ ಹಾಡಿ ತೋರಿಸು ವುದಕ್ಕೂ ಸಾಧ್ಯವಾಗಿರಲಿಲ್ಲ. ಅವರ ಜೊತೆ ಸಮಾಲೋಚನೆ ಮಾಡಲೂ ಸಾಧ್ಯವಾಗಿರಲಿಲ್ಲ. ಹಾಗಾಗಿ ತುಂಬಾ ಹೆದರಿದ್ದರು. ಆದರೆ ಅದು ಪ್ರಸಾರ ಆಗುವಾಗ ಹೇಗೂ ಗುರುಗಳು ಊರಲ್ಲಿ ಇರುವುದಿಲ್ಲ. ಅವರು ಕೇಳುವುದಿಲ್ಲ ಎಂದು ಸಮಾಧಾನಿಸಿಕೊಂಡರು. ಒಂದುವೇಳೆ ಪ್ರಸಾರದ ಹೊತ್ತಿಗೆ ಅವರು ಮರಳಿ ಬಂದಿದ್ದರೂ  ಕುಂದಗೋಳದಲ್ಲಿ ಕರೆಂಟ್ ಇರುವುದಿಲ್ಲ. ಹಾಗಾಗಿ ಅವರು ಕೇಳುವುದು ಸಾಧ್ಯವೇ ಇಲ್ಲ ಎಂದು ನೆಮ್ಮದಿ ಮಾಡಿಕೊಂಡರು.

ಗಂಗೂಬಾಯಿ ಧ್ವನಿಮುದ್ರಣ ಮುಗಿಸಿ ಹುಬ್ಬಳ್ಳಿಯ ರೈಲು ಹಿಡಿಯಲು ನಿಲ್ದಾಣಕ್ಕೆ ಬಂದರು. ಬೋಗಿಯಲ್ಲಿ ಕಾಲಿಟ್ಟವರು ಅಲ್ಲೇ ಕಲ್ಲಾಗಿ ನಿಂತುಬಿಟ್ಟರು. ಅವರ ಹಿಂದೆ ಸಾಮಾನು ಹೊತ್ತು ನಿಂತಿದ್ದ ರಾಮಣ್ಣ ತಾಳ್ಮೆಗೆಟ್ಟು, “ ಮುಂದಕ್ಕೆ ಹೋಗ ಗಂಗೂ,” ಎಂದು ಸಿಡುಕಿದರು. ಆದರೆ ಅವರಿಗೆ ಅದರ ಪರಿವೆಯೇ ಇರಲಿಲ್ಲ. ಕೊನೆಗೆ ರಾಮಣ್ಣ ಅಕ್ಷರಶಃ ಅವರನ್ನು ಪಕ್ಕಕ್ಕೆ ತಳ್ಳಿಕೊಂಡು ಒಳಗೆ ಹತ್ತಿದರು. ಗಂಗೂನ ದೃಷ್ಟಿ ನೆಟ್ಟಿದ್ದ ದಿಕ್ಕಿನಲ್ಲಿ ನೋಡಿದರೆ, ಅದೇ ಬೋಗಿಯಲ್ಲಿ ಸರಿಯಾಗಿ ಇವರ ಎದುರಿಗೆ ಗುರು ಸವಾಯಿ ಗಂಧರ್ವ ಕುಳಿತಿದ್ದರು. ಅವರು ಅಲ್ಲಿರಬಹುದು ಎಂದು ಇವರು ನಿರೀಕ್ಷಿಸಿರಲಿಲ್ಲ. ಅವರಿಗೆ ನಿಂತ ನೆಲ ಬಿರಿದಿತ್ತು. ರಾಮಣ್ಣ, ಗಂಗೂ ಇಬ್ಬರಿಗೂ ಮಾತೇ ಹೊರಡಲಿಲ್ಲ. ಒಂದೆರೆಡು ಕ್ಷಣಗಳಲ್ಲಿ ಸಾವರಿಸಿಕೊಂಡು, ಕುರಿಮರಿಯಂತೆ ನಡೆದು, ಗುರುಗಳ ಪಾದಕ್ಕೆರಗಿ, ಗಂಗೂ ತಮ್ಮ ಸೀಟಿಗೆ ವಾಪಸ್ಸಾಗಲು ಹೊರಟರು. ಗುರುಗಳು, “ಗಂಗೂ,” ಎಂದು ಕರೆದು ಅವರನ್ನು ತಮ್ಮ ಪಕ್ಕದಲ್ಲಿ ಕೂರಲು ಹೇಳಿದರು. ಗಂಗೂಬಾಯಿಯ ಕಾಲುಗಳು ನಡುಗುತ್ತಿದ್ದವು. ಗುರುಗಳ ಪಕ್ಕ ಕುಳಿತರು. “ಎಲ್ಲಿಂದ ಬರುತ್ತಿದ್ದೀರಿ ಗುರುಗಳೇಎಂದು ಕೇಳಿದರು. ಅವರು ತುಂಬಾ ಸಹಜವಾಗಿ, “ನನಗೆ ಬಾಂಬೆಯಲ್ಲಿ ಕಛೇರಿಯಿತ್ತು,” ಎಂದರು. ಅವರ ಪಕ್ಕದಲ್ಲಿ ನಮ್ರತೆಯಿಂದ ಗಂಗೂಬಾಯಿ ಕುಳಿತಾಗ, ಅವರು ಕಿಟಿಕಿಯಿಂದಾಚೆ ನೋಡು ತ್ತಿದ್ದರು. ರೈಲು ಹೊರಟಿತು. “ಸರಿ . . . .  . ನೀನೆಲ್ಲಿಂದ ಬರುತ್ತಿದ್ದೀಯೆ,” ಎಂದರು. ಎಷ್ಟೇ ಪ್ರಯತ್ನಿಸಿದರೂ ಇವರಿಗೆ ಮಾತೇ ಹೊರಡಲಿಲ್ಲ. ತಮ್ಮ ಪಕ್ಕದಲ್ಲಿ ಸಣ್ಣ ಗುಬ್ಬಚ್ಚಿಯಂತೆ ಮುದುರಿ ಕುಳಿತಿದ್ದ ತಮ್ಮ ಪ್ರಿಯಶಿಷ್ಯೆಯ ಕಡೆ ತಿರುಗಿ, “ರೇಡಿಯೋದಲ್ಲಿ ನೀನಿವತ್ತು ಹಾಡಿದ ರಾಗ ಯಾವುದು,” ಎಂದು ತಣ್ಣಗೆ ಕೇಳಿದರು. ವಿಷಯ ಚರ್ಚೆಗೆ ಬಾರದಿರಲಿ ಎಂದು ಗಂಗೂ ದೇವರನ್ನು ಬೇಡುತ್ತಾ ಕುಳಿತಿದ್ದರು. ಗುರುಗಳು ಅಸಹಜ ಎನಿಸುವಂತಹ ಶಾಂತ ಧ್ವನಿಯಲ್ಲಿ ಆಡಿದ ಮಾತುಗಳನ್ನು ಕೇಳಿದ ಗಂಗೂಗೆ ಏನೋ ಪ್ರಮಾದವಾಗಿದೆ ಎಂದು ತಕ್ಷಣ ಅರಿವಾಯಿತು.

ಅದು, ಅದು . . . . .  ಅದು . . . .”

ಯಾವುದು?”

ತುಂಬಾ ಒದ್ದಾಡುತ್ತಾ, ಗಂಟಲಿನಲ್ಲಿ ಏನೋ ಸಿಕ್ಕಿ ಹಾಕಿಕೊಂಡವರಂತೆ ಚಡಪಡಿಸುತ್ತಾ, “ಅದು ಬಿಭಾಸ್ ಗುರುಗಳೇ,” ಎಂದರು.

, ಹಾಗಾದರೆ ನೀನದನ್ನು ಬಿಭಾಸ್ ಎನ್ನುತ್ತೀಯೋ? ಯಾವ ಘರಾನೆ ಅದನ್ನು ರೀತಿಯಲ್ಲಿ ಹಾಡುತ್ತದೆ? ನಮ್ಮ ಘರಾನೆಯಲ್ಲಿ ನಾವು ಕೋಮಲ ದೈವತವನ್ನು ಬಳಸುತ್ತೇವೆಯೇ ಹೊರತು ನೀನು ಬಳಸಿದಂತೆ ತೀವ್ರ ದೈವತ ವನ್ನಲ್ಲ.” ಮತ್ತೆ ಮೌನ.

ನೀನು ಹಾಡಿದ ಮೇಘ ಮಲ್ಹಾರಿನಲ್ಲಿಯೂ ಅನೇಕ ತಪ್ಪುಗಳಿದ್ದವು.” ಇನ್ನೇನು ಗಂಗೂಬಾಯಿ ಜೋರಾಗಿ ಅಳುವುದರಲ್ಲಿದ್ದರು. “ಸಾರ್ವಜನಿಕ ವಾಗಿ ಹಾಡುವ ಮೊದಲು ನನ್ನನ್ನೊಮ್ಮೆ ಕೇಳಲು ಆಗುತ್ತಿರಲಿಲ್ಲವೇ? ದೇಶದ ಉದ್ದಗಲಕ್ಕೂ ಜನ ರೇಡಿಯೋ ಕೇಳುತ್ತಾರೆ ಮತ್ತು ನೀನು ಮಾಡಿರುವ ತಪ್ಪುಗಳಿಗೆಲ್ಲಾ ನನ್ನನ್ನೇ ಹೊಣೆಗಾರ Àಮಾಡುತ್ತಾರೆ,” ಎಂದು ಕೂಗಾಡಿದರು. ತಾನು ತಪ್ಪು ಮಾಡಿದ್ದೇನೆಂದು ಗಂಗೂಬಾಯಿ ತುಂಬಾ ದುಃಖದಲ್ಲಿದ್ದರು. ಆದರೆ ಬೋಗಿಯಲ್ಲಿದ್ದ ಸಹಪ್ರಯಾಣಿಕರು ರಾದ್ಧಾಂತವನ್ನು ನೋಡಿ ಏನಂತ ಅಂದುಕೊಂಡಿರಬಹುದು ಎಂಬುದೂ ಅವರನ್ನು ಕಸಿವಿಸಿಗೊಳಿಸಿತ್ತು.

ಇಂತಹ ದಾರುಣ ಸಂಕಟಕ್ಕೆ ನನ್ನನ್ನು ಸಿಕ್ಕಿಸ ಬೇಡ ಗಂಗೂ,” ಎಂದವರು ಜೋರಾಗಿ ಕೂಗಾಡಿದರು. ಸವಾಯಿ ಗಂಧರ್ವರು ತುಂಬಾ ಕೋಪದಲ್ಲಿದ್ದರು.

ಸ್ವಲ್ಪ ಹೊತ್ತು ಮಾತಿರಲೇ ಇಲ್ಲ. ಬಿರುಗಾಳಿಯ ನಂತರದ ಪ್ರಶಾಂತತೆ ಇತ್ತು. ತನ್ನನ್ನು ಯಾರೋ ಸೀಟಿಗೆ ಅಂಟಿಸಿಬಿಟ್ಟಿದ್ದಾರೆ ಎಂದು ಗಂಗೂಗೆ ಅನ್ನಿಸಿತ್ತು. ರಾಮಣ್ಣನವರ ಪಕ್ಕದಲ್ಲಿದ್ದ ತನ್ನ ಸೀಟಿಗೆ ಎದ್ದು ಹೋಗಲು ಅವರಿಗೆ ಧೈರ್ಯವಾಗಲಿಲ್ಲ. ಕೆಲವು ಕ್ಷಣಗಳ ನಂತರ, “ನಿನ್ನ ತಾನ್ಪುರ ಎಲ್ಲಿ? ತೆಗೆದುಕೊಂಡು ಬಾ,” ಎಂದು ಆಜ್ಞಾಪಿಸಿದರು. ತಾನ್ಪುರವನ್ನು ಶ್ರುತಿಮಾಡಿ, ಸರಿಯಾಗಿ ಕುಳಿತು ಬಿಭಾಸ್ ಹಾಡಲು ಪ್ರಾರಂಭಿಸಿದರು. ಸಹ ಪ್ರಯಾಣಿಕರಿಗೆ ಸಾಕಷ್ಟು ತಮಾಷೆಯೆನಿಸಿತು. ತಮ್ಮ ಮುಂದೆ ನಡೆಯುತ್ತಿದ್ದ ಘಟನೆಗಳು ಅವರಿಗೆ ವಿನೋದಮಯವಾಗಿತ್ತು. ಗಂಗೂ ತುಂಬಾ ಕಸಿವಿಸಿಗೊಂಡಿದ್ದರು. ಆದರೆ ಸವಾಯಿ ಗಂಧರ್ವ ತುಂಬಾ ಗಂಭೀರವಾಗಿ ಬಿಭಾಸದಲ್ಲಿ ಮುಳುಗಿಹೋಗಿದ್ದರು. ಅವರಿಗೆ ತಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬ ಪರಿವೆಯೇ ಇರಲಿಲ್ಲ. ಕ್ರಮೇಣ ಗಂಗೂಬಾಯಿಯೂ ಹಾಡಲು ಪ್ರಾರಂಭಿಸಿದರು. ಮುಂದಿನ ಒಂದರೆಡು ಕ್ಷಣ ಗಳಲ್ಲಿ ಅವರಿಬ್ಬರಿಗೂ ಲೋಕಕ್ಕೂ ಸಂಬಂಧ ಇಲ್ಲವಾಯಿತು. ರಾಮಣ್ಣ ಸದ್ದಿಲ್ಲದೇ ಬಂದು ಅವರ ಪಕ್ಕದಲ್ಲಿ ಕುಳಿತರು. ಸ್ವಲ್ಪ ಹೊತ್ತಿನಲ್ಲಿ ಸಹಪ್ರಯಾಣಿಕರಲ್ಲೂ ತಮಾಷೆಯ ಧೋರಣೆ ಮರೆಯಾಯಿತು. ಬಾಂಬೆಯಿಂದ ಕುಂದಗೋಳ ಅವರಿಬ್ಬರ ಪಾಲಿಗೆಬಿಭಾಸದೊಳಗಿನ ಪ್ರಯಾಣವಾಗಿತ್ತು. ಅವರು ಅದರ ಶೋಧನೆ ಯಲ್ಲಿದ್ದರು. ಹುಬ್ಬಳ್ಳಿ ರೈಲುನಿಲ್ದಾಣದ ಪರಿಚಿತ ಸದ್ದುಗದ್ದಲಗಳು ಕಿವಿಯ ಮೇಲೆ ಬಿದ್ದಾಗ, ನಡೆದದ್ದೆಲ್ಲವೂ ಹಗಲುಗನಸೇನೋ ಎಂದು ಗಂಗೂಬಾಯಿ ಅಂದುಕೊಳ್ಳುತ್ತಿದ್ದರು.

 

 ಅನುಭಾವಿಗಳು ಕಂಡ ನವವಿಧ ಭಕ್ತಿಕೀರ್ತನ 

ಡಾ|| ಸುಕನ್ಯಾ ಪ್ರಭಾಕರ್

 

ಭಗವಂತನ ಅನಂತಗುಣಗಳನ್ನು ಕೇಳುವುದುಶ್ರವಣ ಭಕ್ತಿಯಾದರೆ, ಅದನ್ನು ಹೇಳುವುದು, ಹಾಡುವುದು, ಕೀರ್ತಿಸುವುದು, ಸ್ತುತಿಸುವುದುಕೀರ್ತನಭಕ್ತಿ.” ಪರಮಾತ್ಮಗಾನಲೋಲ’ ‘ಸಾಮಗಾನಪ್ರಿಯಎಂದೆಲ್ಲಾ ಪ್ರಸಿದ್ಧ. ಹಾಗಾಗಿಯೇ ಭಗವಂತನು, “ಮದ್ಭಕ್ತಾ ಯತ್ರ ಗಾಯಂತಿ ತತ್ರ ತಿಷ್ಠಾಮಿಎಂದು ಹೇಳಿರುವುದು. ಇದನ್ನು ಶ್ರೀಪಾದರಾಜರು,

|| ಧ್ಯಾನವು ಕೃತಯುಗದಿ |

|| ಯಜನ ಯಜ್ಞವು ತ್ರೇತಾಯುಗದಿ |

|| ದಾನವಾಂತಕನ ದೇವತಾರ್ಚನೆ         ದ್ವಾಪರಯುಗದಿ |

|| ಕಲಿಯುಗದಿ ಗಾನದಲಿ ಕೇಶವ ಎಂದೊಡೆ ಕೈಗೂಡುವನು, ರಂಗವಿಠಲ||

ಎಂದು ಗಾನದ, ಕೀರ್ತನದ ಪ್ರಾಮುಖ್ಯವನ್ನು ಎತ್ತಿಹಿಡಿಯುತ್ತಾರೆ.

ಕೀರ್ತನಎಂದಾಗಲೇ ಅದು ಹಾಡುವುದು ಎನ್ನುವುದರ ಪರ್ಯಾಯಪದ ಎಂಬುದು ಸ್ಪಷ್ಟ. ಶ್ರೀ ಸ್ವಾತಿ ತಿರುನಾಳ ಮಹಾರಾಜರುತಾವಕ ನಾಮಾನಿ ಶುಭದಾನಿ ಪ್ರಜಪಾನಿ’ (ಕೇದಾರಗೌಳ, ರೂಪಕ) ಎಂಬ ಕೃತಿಯಲ್ಲಿ  ‘ನಿನ್ನ ನಾಮಗಳು ಶುಭವಾಗಿರುವುದಲ್ಲದೆ ಸ್ತುತಿಸಲು, ಜಪಿಸಲು ಯೋಗ್ಯವಾಗಿದೆಎಂದು ಹೇಳುತ್ತಾರೆ. ನಾಮಗಳನ್ನು ಸ್ತುತಿಸಿ ಉನ್ನತಿಯನ್ನು ಸಾಧಿಸಿದ ವಾಲ್ಮೀಕಿ, ಅಜಾಮಿಳ, ಎಲ್ಲರ ಉಲ್ಲೇಖವನ್ನೂ ನೀಡುತ್ತಾರೆ.

ವ್ಯಾಸರಾಯರು ತಮ್ಮ ಶಿಷ್ಯ ಪುರಂದರನನ್ನು ಪ್ರಶಂಸಿಸುತ್ತಾ, “ಗೀತ-ನರ್ತನದಿಂದ ಕೃಷ್ಣನ್ನ ಪೂಜಿಸುವ ಪೂತಾತ್ಮ ಪುರಂದರದಾಸರಿವ-ರಯ್ಯಾಎಂದು, ಗೀತನರ್ತನಗಳ ಪ್ರಾಮುಖ್ಯ ವನ್ನು ಎತ್ತಿ ತೋರಿಸುತ್ತಾರೆ. ಗುರು ಹೀಗೆ ಹೇಳಿದರೆ, ಶಿಷ್ಯ ಪುರಂದರದಾಸರು ಮತ್ತೊಂದು ರೀತಿಯಲ್ಲಿ ಹೇಳುತ್ತಾರೆ- ‘ತಂಬೂರಿ ಮೀಟಿದವ, ಭವಾಬ್ಧಿ ದಾಟಿದವ, ಗಾಯನ ಮಾಡಿದವ ವೈಕುಂಠಕೆ ಓಡಿದವಎಂದಿದ್ದಲ್ಲದೆ, ‘ಕೇಳನೋ ಹರಿ, ತಾಳನೋ | ತಾಳ-ಮೇಳಗಳಿದ್ದು ಪ್ರೇಮ ವಿಲ್ಲದ ಗಾನಎಂದು ಹಾಡುವಿಕೆಗೆ ಬೇಕಾದ ಮೂಲ ಸಾಮಗ್ರಿಯನ್ನು ಹೇಳುತ್ತಾರೆ. ಮತ್ತೆ ಗುರು ವ್ಯಾಸರಾಯರು ಮುಂದುವರಿಸುತ್ತಾ. . . ಕೃಷ್ಣನ ಮುರಳೀ ನಾದದ ಪರಿಣಾಮವನ್ನು ಕುರಿತು-

||ನಾದದಿ ತುಂಬಿತು ಗೋವರ್ಧನ ಗಿರಿ |

||ಮೇವ ಮರೆತವು ಗೋವುಗಳೆಲ್ಲ |

||ಸಾವಧಾನದಿಂದ ಹರಿದಳು, ಯಮುನೆ||

ಎಂದೆಲ್ಲ ಹೇಳುತ್ತಾರೆ. ಶ್ರೀಪಾದರಾಜರು, ‘ನಾಲಗೆಗೆ ಭೂಷಣ, ನಾರಾಯಣ ನಾಮಎಂದು ಹಾಡಿದರೆ, ಕನಕದಾಸರು, ‘ಸತ್ಯವಾದ ನಾಮಗಳನ್ನು ನಿತ್ಯದಲ್ಲಿ ಪಠಿಸುವರಿಗೆ ಅರ್ತಿ ಯಿಂದ ಸಲಹುತಿರುವ ಕರ್ತೃ ಕೇಶವಎಂದು ಹಾಡುತ್ತಾರೆ. ಶ್ರೀಪ್ರಸನ್ನ ವೆಂಕಟದಾಸರು,

|| ಶ್ರೀವಿಷ್ಣು ಮಹಿಮೆ ಸಂಕೀರ್ತನೆ ಸರ್ವದಾ ವಿಸ್ಮøತಿಯ ನೀಗಿ ಮಾಡಿ ವೈಷ್ಣವರು ಪುಣ್ಯ ಶ್ಲೋಕದ ವಾರ್ತೆ ಕೀರ್ತನೆಯ ಪಠಣೆ, ಚಿನ್ಮಯಾ ಚ್ಯುತನ ಚಾರಿತ್ರ್ಯ ವಿಸ್ತರವ ವರ್ಣ ವರ್ಣಗಳಿಂದೆ ಪಾಡಿ ನಲಿಯುತ ||

ಎಂದು ಹೇಳುವುದಲ್ಲದೆ

||ಕಲಿಕಾಲದಲಿ ಕೇಶವಗೆ ಪ್ರಿಯ ಕೀರ್ತನೆ |

||ಲಲಿತ ಸಾಧನವೆನಿಪುದೀ ಕೀರ್ತನೆ,  |

||ಬಲು ಶ್ರುತಿ ಮಥಿತಾರ್ಥಸಾರವೇ ಕೀರ್ತನೆ|

||ಹುಲುಮಾನವರಿಗೆ ದೂರವು ಕೀರ್ತನೆ ||

ಎಂದು ಘಂಟಾಘೋಷವಾಗಿ ಸಾರಿದ್ದಾರೆ.

ಇನ್ನು ತ್ಯಾಗರಾಜರಂತೂ ಎಣೆಯಿಲ್ಲದಷ್ಟು ಕೃತಿಗಳಲ್ಲಿ ಕೀರ್ತನಭಕ್ತಿಯನ್ನು ಬಣ್ಣಿಸಿದ್ದಾರೆ. ‘ಎಂದರೋ ಮಹಾನುಭಾವುಲುಶ್ರೀರಾಗದ ಪಂಚರತ್ನ ಕೃತಿಯಲ್ಲಿ

||ನೆರಿಂಗಿ ಸಂತತಂಬುನನು ಗುಣ ಭಜನಾ ನಂದ ಕೀರ್ತನಮು ಸೇಯುವಾರು ||

ಅಂದರೆ, ಸತತವಾಗಿ ಶ್ರೀ ರಾಮನ ಗುಣ ಭಜನೆ ಮಾಡುವವರು ಮಹಾನುಭಾವರು ಎಂದು ಹೇಳುತ್ತಾರೆ. ಶ್ರೀರಾಮನ ಜಪದ ವೇಳೆ ಯಲ್ಲಿ ಇಡೀ ಜಗತ್ತೇ ದೈವಮಯವಾಗಿ ಇರುತ್ತ್ತದೆ ಎನ್ನುವ ಭಾವವನ್ನು ಹೀಗೆ ವ್ಯಕ್ತಪಡಿಸುತ್ತಾರೆ, “ನೀ ಜಪಮುಲ ವೇಳ ಜಗಮುಲು ನೀವೇಇಂತಾ ಕನ್ನಾನಂದ ಮೇಮಿ (ಬಿಲಹರಿ-ರೂಪಕ) ಕೃತಿಯಲ್ಲಿ,

ನೀ ಭಜನಗಾನ ರಸಿಕುಡು ನೇನೆಂದು ಗಾನರಾ (ನಾಯಕಿ-ಆದಿತಾಳ) - ನಿನ್ನ ನಾಮ ಭಜನೆಯಿಂದ ಆನಂದ ಹೊಂದದ ರಸಿಕನನ್ನು ನಾನು ನೋಡಿಯೇ ಇಲ್ಲ- ಎಂದು ದೃಢವಾಗಿ ಹೇಳುತ್ತಾರೆ. ಯಾರ ಭಯವೂ ಇಲ್ಲದೆ ತುಂಬುರುವಿನಂತೆ ತಂಬೂರಿ ಹಿಡಿದು ದೈವ ಸನ್ನಿಧಿಯಲ್ಲಿ ನರ್ತಿಸುತ್ತಾ, ಕೀರ್ತಿಸುತ್ತಾ ಮೈ ಮರೆಯುವವನೇ ಧನ್ಯ ಎಂದುಅತಡೇ ಧನ್ಯುಡುರಾ” (ಕಾಪಿ-ಮಿಶ್ರಛಾಪು) ಎನ್ನುವ ಕೃತಿಯಲ್ಲಿ ಬಣ್ಣಿಸುತ್ತಾರೆ. “ರಾಮಚಂದ್ರ ನೀ ನಾಮಮಂದು ನಿಜಪ್ರೇಮಲೇನಿ ಬದುಕೇಮಿ (ವರಾಳಿ-ಪಾಹಿಪರಮಾತ್ಮನ್) ಎಂದು ವ್ಯಥೆ ಪಡುತ್ತಾರೆ. ‘ನಿನ್ನೇ ಭಜನ’ (ನಾಟ), ‘ಭಜನ ಸೇಯರಾದಾ’ (ಅಠಾಣ), ‘ಉಪಚಾರಮು (ಭೈರವಿ), ‘ಏಲಾವತಾರ’ (ಮುಖಾರಿ), ‘ಪರಲೋಕ ಸಾಧನಮೇ’ (ಮಂದಾರಿ), ‘ರಾಮ ನಾಮಮು (ಅಠಾಣ), ‘ತೀರುನಾ’ (ಅಸಾವೇರಿ), ‘ಸುಗುಣಮುಲೇ’ (ಚಕ್ರವಾಕ), ‘ಪರುಲನು ವೇಡನು’ (ನಾಗಸ್ವರಾವಳಿ), ‘ಪಕ್ಕಲ ನಿಲಬಡಿ’ (ಖರಹರಪ್ರಿಯ), ‘ಕ್ಷೀಣ ಮೈ’ (ಮುಖಾರಿ), ‘ತೆಲಿಸಿರಾಮ’ (ಪೂರ್ಣಚಂದ್ರಿಕೆ) - ಹೀಗೆ ಹೇಳುತ್ತಾ ಹೋದರೆ ಅಸಂಖ್ಯ ಕೃತಿಗಳನ್ನು ಉದಾಹರಿಸಬಹುದು. ವಾಸುದೇವಾಚಾರ್ಯರ ಕೃತಿಭಜನ ಸೇಯರಾದ ಮನಸಾ ಶ್ರೀರಾಮು ನಿ’ (ಧರ್ಮವತಿ- ರೂಪಕ). ಹಾಗೆಯೇ ಎಲ್ಲಾ ಕೃತಿಗಳಲ್ಲಿಯೂ ನಾಮ ಸಂಕೀರ್ತನೆಯ, ಭಜನೆಯ ಮಹತ್ವವನ್ನು ತಿಳಿಯಬಹುದು.

ಭಕ್ತಿ ಭಂಡಾರಿ ಬಸವಣ್ಣನವರು- ‘ಆಡಿ ಕಾಲು ದಣಿಯವು, ನೋಡಿ ಕಣ್ಣ ದಣಿಯವು, ಹಾಡಿ ನಾಲಿಗೆ ದಣಿಯವು,’ ‘ಬತ್ತೀಸ ರಾಗವ ಹಾಡಯ್ಯ,’ ‘ವಚನದಲ್ಲಿ ನಾಮಾಮೃತ ತುಂಬಿ’ ‘ಕೂಡಲ ಸಂಗಮ ದೇವಾ ನಿನಗೆ ಕೇಡಿಲ್ಲವಾಗಿ ಆನೊಲಿ ದಂತೆ ಹಾಡುವೆ’ (ಹಂಸಾನಂದಿ) ಎಂದು ತಮ್ಮ ಕೀರ್ತನ ಭಕ್ತಿಯನ್ನು ಕಾಣಿಸುತ್ತಾರೆ.

ಮತ್ತೊಮ್ಮೆ ಪುರಂದರದಾಸರತ್ತ ಕಣ್ಣು ಹಾಯಿಸಿದರೆ, ಪರಮಾತ್ಮನನ್ನುನೋಡುವುದೇ ಕಣ್ಣು, ಕೇಳುವುದೇ ಕಿವಿ, ಪಾಡುವುದೇ ವದನಎಂದು ಖಚಿತವಾಗಿ ಹೇಳುತ್ತಾರೆ.

ಭಕ್ತೆ ಮೀರಾಲೋಕಣಾ ಸೀಝಾಂ ಮನ ಪತಿಜ್ಯಾಂ ಮುಖಡಾ ಸಬದ ಸುಣಾಜ್ಯೋಜೀ’ (ಮಾಂಡ್)- ನೀನೇ ಸ್ವತಃ ಬಂದು ನನಗೆ ಅನಾಹತನಾದವನ್ನು ಕೇಳಿಸು ಎಂದು ಮೊರೆ ಯಿಡುತ್ತಾಳೆ.

ಕರ್ಣ ಗೀತಂಗಳ ಕೇಳಲಿ’- ‘ಶ್ರೀಶನ ಭಜನೆ ಮಾಡದ ಆಯುಷ್ಯ ವ್ಯರ್ಥಎಂದು ಶ್ರೀ ಗೋಪಾಲದಾಸರು ಒಂದೇ ಮಾತಿನಲ್ಲಿ ಇಡೀ ಮಾನವನ ಜೀವಿತದ ಸಾರ್ಥಕ್ಯವನ್ನು ಸಾರಿ ಹೇಳುತ್ತಾರೆ.

ತ್ರಿಮೂರ್ತಿಗಳಲ್ಲೊಬ್ಬರಾದ ಶ್ಯಾಮಾಶಾಸ್ತ್ರಿಗಳು ದೇವಿಯ ಅನನ್ಯ ಭಕ್ತರು. ದೇವಿಯನ್ನುಗಾನ ವಿನೋದಿನಿ’ (ಧನ್ಯಾಸಿ-ಮಿಶ್ರಛಾಪು) ಎಂದೇ ಬಣ್ಣಿಸುತ್ತಾರೆ. ಶ್ರೀ ಮುತ್ತುಸ್ವಾಮಿ ದೀಕ್ಷಿತರುಗೀತವಾದ್ಯ ವಿನೋದಿನಿ (ಲಲಿತ-ರೂಪಕ) ಎಂದು ಗಾನ, ಕೀರ್ತನ ಭಕ್ತಿಯನ್ನು ಎತ್ತಿ ಹಿಡಿ ಯುತ್ತಾರೆ. ಹೀಗೆ ಅನುಭಾವಿಗಳು ಒಂದೊಂದು ವಿಧದ ಭಕ್ತಿಗೂ ಅಸಂಖ್ಯಾತ ರಚನೆಗಳ ಭಂಡಾರ ವನ್ನೇ ನೀಡಿದ್ದಾರೆ. ಕೇವಲ ಸಾಂಕೇತಿಕವಾಗಿ ಮಾತ್ರ್ರ ಇಲ್ಲಿ ರಚನೆಗಳನ್ನು ಆಯ್ದುಕೊಳ್ಳಲಾಗಿದೆ, ಎನ್ನುವುದು ಗಮನಾರ್ಹ

(ಮುಂದುವರಿಯುತ್ತದೆ- ಸ್ಮರಣಭಕ್ತಿ)

ಚಿಂತನೆ

ನನ್ನ ಸಿನಿಮಾದಲ್ಲಿ ಸಂಗೀತ

ಸತ್ಯಜಿತ್ ರೇ

ಅನುವಾದ: ಟಿ ಎಸ್ ವೇಣುಗೋಪಾಲ್

[ಸತ್ಯಜಿತ್ ರೇ ಅವರಿಗೆ ಹಲವಾರು ಕ್ಷೇತ್ರಗಳಲ್ಲಿ ಪ್ರತಿಭೆ ಇತ್ತು. ಸಂಗೀತ ಕೂಡ ಅವರು ತುಂಬಾ ಇಷ್ಟಪಡುತ್ತಿದ್ದ ಒಂದು ಕ್ಷೇತ್ರ. ಅವರ ಸಂಗೀತ ವನ್ನು ಕುರಿತಂತೆ ಜಗತ್ತಿನ ಪ್ರಖ್ಯಾತ ಡಾಕ್ಯು ಮೆಂಟರಿ ಸಿನಿಮಾ ನಿರ್ದೇಶಕ ಪಿಯರೆ ಅಂಡ್ರೆ ಬೌಟಾಂಗ್ ಸಂದರ್ಶನ ಮಾಡಿದ್ದಾರೆ. ಒಂದು ಡಾಕ್ಯುಮೆಂಟರಿ ಸಿನಿಮಾ ಕೂಡ ಬಂದಿದೆ. ಹೀಗೆ ಹಲವು ಕಡೆಯಿಂದ ಅವರ ನಿಲುವನ್ನು ಸಂಗ್ರಹಿಸಿ ಅವರ ಮಾತುಗಳಲ್ಲೇ ಇಲ್ಲಿ ಕೊಡಲಾಗಿದೆ. ಸಂಗೀತದಲ್ಲಿ ಆಸಕ್ತಿ ಇರುವವರಿಗೆ ಇನ್ನಿತರ ಕಲಾಮಾಧ್ಯಮಗಳಲ್ಲಿ ಸಂಗೀತ ಹೇಗೆ ಬಳಕೆ ಯಾಗುತ್ತದೆ ಎಂಬುದರ ಅರಿವು ಇರಬೇಕು ಎನ್ನುವ ನಂಬಿಕೆಯಿಂದ ಲೇಖನವನ್ನು ಪ್ರಕಟಿಸುತ್ತಿದ್ದೇವೆ. ಎಂದಿನಂತೆ ನಿಮ್ಮ ಅನಿಸಿಕೆಗೆ ಸ್ವಾಗತ.]

 ಬಾಲ್ಯದ ಸಂಗೀತ ಪ್ರಭಾವಗಳು

ನಾನು ಸಂಗೀತದ ಕುಟುಂಬದಲ್ಲಿ ಜನಿಸಿದೆ. ನನ್ನ ತಾತ ಉಪೇಂದ್ರ ಕಿಶೋರ್ ಸಂಯೋಜಕ ರಾಗಿದ್ದರು. ಅವರು ವಯೋಲಿನ್, ಕೊಳಲು ಪಖಾವಜ್ಗಳನ್ನು ನುಡಿಸುತ್ತಿದ್ದರು. ನಮ್ಮ ಅಮ್ಮನ ತಾತ ಕಾಳೀನಾರಾಯಣ ಗುಪ್ತೋ ಅದ್ಭುತವಾದ ಕಂಪೋಸರ್ ಆಗಿದ್ದರು. ನಮ್ಮ ಅಮ್ಮನ ಮನೆಯವರಿಗೆ ಸಂಗೀತ ರಕ್ತದಲ್ಲೇ ಇತ್ತು. ನಮ್ಮ ಅಮ್ಮ, ಅವರ ಅಜ್ಜಿ, ಎಲ್ಲರೂ ಹಾಡುತ್ತಿದ್ದರು. ನಾನು ಸಂಗೀತದ ವಾತಾವರಣದಲ್ಲೇ ಬೆಳೆದೆ. ಹುಟ್ಟಿನಿಂದ ರಬೀಂದ್ರ ಸಂಗೀತ, ಬ್ರಹ್ಮೋ ಸಂಗೀತ ಇವುಗಳನ್ನು ಕೇಳಿಕೊಂಡೇ ಬೆಳೆದೆ. ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ನನಗೆ ತುಂಬಾ ಚಿಕ್ಕ ವಯಸ್ಸಿನಿಂದಲೇ ಪರಿಚಿತ. ನಮ್ಮ ಮನೆಯಲ್ಲಿ ಕೆಲವು ಧ್ವನಿಮುದ್ರಣಗಳಿದ್ದವು. ಅವು ಎಲ್ಲಿಂದ ಬಂತು ಅನ್ನುವುದು ನನಗೆ ಗೊತ್ತಿಲ್ಲ. ನಾನು ಚಿಕ್ಕವನಿದ್ದಾಗಲೇ ಬಿಥೋವನ್ ಮತ್ತಿತರ ಕೆಲವು ಪಾಶ್ಚಾತ್ಯ ಸಂಗೀತಗಾರರ ಕೃತಿಗಳನ್ನು ಕೇಳಿದ್ದೆ. ನನಗೆ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಿದ್ದ ಗ್ರಾಮೋಫೋನ್ ತಟ್ಟೆಗಳೆಲ್ಲಾ ಬಹುತೇಕ ಪಾಶ್ಚಾತ್ಯ ಸಂಗಿತಗಾರರದ್ದೇ ಆಗಿತ್ತು. ಹಾಗಾಗಿ ಪಾಶ್ಚಾತ್ಯ ಸಂಗೀತ ನನಗೆ ಎಂದೂ ಅಪರಿಚಿತ ಆಗಿರಲಿಲ್ಲ. ನಾನು ಬಂಗಾಳಿ ಸಂಗೀತದ ಜೊತೆಜೊತೆಗೆ ಒಂದಲ್ಲ ಒಂದು ಬಗೆಯ ಪಾಶ್ವಾತ್ಯ ಸಂಗೀತವನ್ನೂ ಕೇಳುತ್ತಿದ್ದೆ. ನನ್ನ ಶಾಲೆಯ ಕೊನೆಯ ದಿನಗಳಲ್ಲಿ ಸಂಗೀತ ಕೇಳುವುದು ನನ್ನ ಗಂಭೀರ ಆಸಕ್ತಿಯಾಗಿಬಿಟ್ಟಿತು. ಆಗ ನನಗೆ 13-14 ವರ್ಷ ಇರಬಹುದು. ನನಗೊಬ್ಬ ಸ್ನೇಹಿತನಿದ್ದ. ಅವನು ಸಾಕಷ್ಟು ಅನುಕೂಲಸ್ಥ ಕುಟುಂಬ ದವನು. ಅವನಿಗೂ ಪಾಶ್ಚಾತ್ಯ ಸಂಗೀತದಲ್ಲಿ ಆಸಕ್ತಿಯಿತ್ತು. ಧ್ವನಿಮುದ್ರಣಗಳನ್ನು ಕೊಂಡು ಕೊಳ್ಳುತ್ತಿದ್ದ. ಬಿಥೋವನ್, ಮೊಜಾರ್ಟ್, ಬಾಕ್ ಅವರೆಲ್ಲರ ಸಂಗೀತವನ್ನು ನಾನು ಕೇಳಿದ್ದು ಅವನ ಮನೆಯಲ್ಲಿ. ಹಾಗಾಗಿ ಸಂಗೀತಕ್ಕೆ ನಾನು ಬಹಳ ಚಿಕ್ಕವಯಸ್ಸಿನಲ್ಲೇ ತೆರೆದುಕೊಂಡೆ. ಬೇರೆ ಮಕ್ಕಳು ಪದ್ಯಗಳನ್ನು ಓದಿ ಬರೆದು ಮಾಡುತ್ತಿದ್ದಾಗ ನಾನು ಸಂಗೀತ ಕೇಳಲು ಪ್ರಾರಂಭಿಸಿದೆ. ಲೈಬ್ರರಿಯಲ್ಲಿ ಸಂಯೋಜಕರ ಬಗ್ಗೆ, ಅವರ ಕೃತಿಗಳ ಬಗ್ಗೆ ಓದುತ್ತಿದ್ದೆ. ಪುಸ್ತಕಗಳನ್ನು ಕೊಂಡುಕೊಳ್ಳುವುದು ನನಗಾಗ ಸಾಧ್ಯವಿರಲಿಲ್ಲ.

 ನಾನು ಅಪು ತ್ರಿವಳಿ ಚಿತ್ರದ ಸಂದರ್ಭದಲ್ಲಿ ರವಿಶಂಕರ್ ಅವರ ಜೊತೆಯಲ್ಲಿ ಕೆಲಸಮಾಡಿದೆ. ಆಮೇಲೆ ಜಲಸಾ ಘರ್ನಲ್ಲಿ ವಿಲಾಯತ್ ಖಾನ್ ಜೊತೆದೇವಿ ಸಿನಿಮಾದಲ್ಲಿ ಅಲಿ ಅಕ್ಬರ್ಖಾನ್ ಸಾಹೇಬರ ಜೊತೆಯಲ್ಲಿ ಕೆಲಸ ಮಾಡಿದ್ದೇನೆ. ಅವರೆಲ್ಲಾ ಬಿಡುವಿಲ್ಲದಂತಹ ಅಂತರರಾಷ್ಟ್ರೀಯ ಕಂಪೋಸರ್ಗಳು ಆಗಿಬಿಟ್ಟರು. ನನಗೆ ಬೇಕಾದಾಗ ಅವರು ಸಿಗುತ್ತಿರಲಿಲ್ಲ. ಸಮಯದಲ್ಲಿ ನನಗೆ ನನ್ನದೇ ಆದ ಸಂಗೀತಾತ್ಮಕ ಚಿಂತನೆಗಳು ಬರುತ್ತಿತ್ತು. ವೃತ್ತಿಪರ ಸಂಯೋಜಕರಿಗೆ ಹೀಗೆ ಮಾಡಿ ಎಂದು ಹೇಳುವುದು ನನಗೆ ಸಾಧ್ಯ ಇರಲಿಲ್ಲ. ಹಾಗಾಗಿ ತೀನ್ ಕನ್ಯಾ ಸಿನಿಮಾದಲ್ಲಿ ನಾನೇ ಸಂಗೀತ ಸಂಯೋಜನೆಗೆ ಕೈಹಾಕಿದೆ. ಪ್ರಾರಂಭದಲ್ಲಿ ತುಂಬಾ ಕಷ್ಟವಾಯಿತು. ಕ್ರಮೇಣ ಅದರಲ್ಲಿ ಒಂದಿಷ್ಟು ಪರಿಣತಿ ಸಾಧ್ಯವಾಯಿತು.

ಒಬ್ಬ ನಿರ್ದೇಶಕನಿಗೆ ಸಿನಿಮಾದಲ್ಲಿ ಸಂಗೀತ ಎಲ್ಲಿ ಬೇಕು ಎಂಬುದು ತಿಳಿದಿರಬೇಕು. ಅದಕ್ಕೆ ನಿರ್ದೇಶಕರಿಗೆ ಸಂಗೀತದ ಬಗ್ಗೆ ತಿಳಿವಳಿಕೆ ಇರ ಬೇಕು. ಆದರೆ ಇಂತಹ ಆದರ್ಶ ಸ್ಥಿತಿ ಯಾವಾಗ ಲೂ ಸಾಧ್ಯವಿಲ್ಲ. ಕೆಲವು ನಿರ್ದೇಶಕರಿಗೆ ಸಂಗೀತದ ಬಗ್ಗೆ ತಿಳಿವಳಿಕೆ ಇರುವುದಿಲ್ಲ. ಅಂತಹ ಸಂದರ್ಭ ದಲ್ಲಿ ಅವರು ಸಂಪೂರ್ಣವಾಗಿ ವೃತ್ತಿಪರ ಸಂಯೋಜಕರನ್ನೇ ಅವಲಂಬಿಸಬೇಕಾಗುತ್ತದೆ. ವೃತ್ತಿಪರ ಸಂಯೋಜಕ ಸಮರ್ಥನಾಗಿರÀಬೇಕು. ನನಗೆ ಸಂಗೀತ ತಿಳಿದಿರುವುದರಿಂದ ಹಾಗೂ ನನ್ನ ಮೊದಲ ಒಲವು ಸಂಗೀತವೇ ಆಗಿದ್ದರಿಂದ ಸಂಗೀತವನ್ನು ಎಲ್ಲಿ ಬಳಸಬೇಕು ಎಂಬುದರ ಬಗ್ಗೆ ನನ್ನದೇ ಆದ ನಿರ್ದಿಷ್ಟವಾದ ಚಿಂತನೆಗಳಿವೆ.

ಸಿನಿಮಾಕ್ಕೆ ಧ್ವನಿ ಬಂದ ಪ್ರಾರಂಭದಲ್ಲ್ಲಿ ಸಂಗೀತವನ್ನು ಬಳಸುತ್ತಿರಲಿಲ್ಲ. ನೀವು 1930 ಆರಂಭದ ಸಿನಿಮಾಗಳನ್ನು ನೋಡಿದರೆ ಅಲ್ಲಿ ಸಂಗೀತ ಇರಲಿಲ್ಲ. ಕ್ರಮೇಣ ಹಿನ್ನೆಲೆ ಸಂಗೀತ ಪ್ರಾರಂಭವಾಯಿತು. ವೃತ್ತಿಪರ ಸಂಯೋಜಕರು ಹುಟ್ಟಿಕೊಂಡರು. ಸಿನಿಮಾ ಸಂಪೂರ್ಣವಾಗಿ ಸಂಗೀತದಲ್ಲೇ ಮುಳುಗಿ ಹೋಗಿದ್ದ ಒಂದು ಹಂತವೂ ಇತ್ತು. ನಂತರ ಒಂದು ಸಮತೋಲನ ಸಾಧ್ಯವಾಯಿತು. ಆವಶ್ಯಕ ಎನಿಸಿದಾಗಷ್ಟೇ ಸಂಗೀತವನ್ನು ಬಳಸಲಾಯಿತು. ಆದರೂ ಒಂದು ರೀತಿಯ ಸಂಪ್ರದಾಯ ಪ್ರಾರಂಭವಾಯಿತು. ದುಃಖದ ಸಂದರ್ಭದಲ್ಲಿ ಒಂದು ರೀತಿಯ ಸಂಗೀತ, ಸಂತೋಷದ ಹೊತ್ತಿನಲ್ಲಿ ಒಂದು ರೀತಿಯ ಸಂಗೀತ, ಸಸ್ಪೆನ್ಸ್ ಇದ್ದಾಗ ಇನ್ನೊಂದು ರೀತಿಯ ಸಂಗೀತ ಬಳಸುವುದು ಸಿದ್ಧಸೂತ್ರ ಆಗಿಬಿಟ್ಟಿತು. ಕೆಲವೊಮ್ಮೆ ನಿರ್ದೇಶಕರು ಸೋಮಾರಿಗಳಾಗಿ ಸೂತ್ರಕ್ಕೆ ಕಟ್ಟುಬಿದ್ದರು. ಹೊಸದಾಗಿ ಯೋಚಿಸುವುದನ್ನೇ ಬಿಟ್ಟರು. ನಿರ್ದೇಶಕರು ಹಳಸಲಾದ ಸಂಪ್ರದಾಯಗಳನ್ನು ಕೈಬಿಟ್ಟು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರಬೇಕು.

ನಾನು ಸಂಗೀತವನ್ನು ಕಡಿಮೆ ಬಳಸುತ್ತೇನೆ. ಪಶ್ಚಿಮದಲ್ಲಿ ಬರ್ಗ್ಮನ್ ಅಂತಹ ಕೆಲವು ನಿರ್ದೇಶಕರು ಸಿನಿಮಾದಲ್ಲಿ ಸಂಗೀತವನ್ನು  ಬಹುತೇಕ ಬಳಸುವುದೇ ಇಲ್ಲ. ನಾವು ಈಗಲೂ ಸಿನಿಮಾದಲ್ಲಿ ಸಂಗೀತವನ್ನು ಬಳಸುತ್ತಿದ್ದೇವೆ. ಇದನ್ನು ಹೆಚ್ಚಾಗಿ ಜನರಿಗಾಗಿ ಬಳಸುತ್ತೇವೆ. ಸಿನಿಮಾದಲ್ಲಿ ಮೂಡುಗಳು ಬದಲಾದರೆ ಪ್ರೇಕ್ಷಕ ರಿಗೆ ಅರ್ಥವಾಗುವುದಿಲ್ಲ ಅನ್ನುವ ಗಾಬರಿ ನಮಗೆ. ಹಾಗಾಗಿ ಬದಲಾದ ಮೂಡುಗಳಿಗೆ ಹಿನ್ನೆಲೆ ಸಂಗೀತ ಬಳಸಿ ಒತ್ತುಕೊಡುತ್ತೇವೆ. ಆದರೂ ನಾನು ಸಂಗೀತವನ್ನು ಆದಷ್ಟು ಕಡಿಮೆ, ಮತ್ತು ತೀರಾ ಅವಶ್ಯವಿದ್ದಾಗ ಮಾತ್ರ ಬಳಸುತ್ತೇನೆ. ನಿಜವಾಗಿ ಹೇಳಬೇಕೆಂದರೆ, ಸಂಗೀತವೇ ಇಲ್ಲದೆ ಸಿನಿಮಾ ಮಾಡುವುದಕ್ಕೆ ಸಾಧ್ಯವಾಗಬೇಕು.

 ಸಿನಿಮಾದಲ್ಲಿ ಯಾವ ಸಂಗೀತ ಬಳಸುತ್ತೇವೆ ಅನ್ನೋದನ್ನು ಸಿನಿಮಾ ನಿರ್ಧರಿಸುತ್ತದೆ. ನಿಜ, ನಾನು ಐರೋಪ್ಯ ಹಾಗೂ ಭಾರತೀಯ ಸಂಗೀತ ವನ್ನು ಮಿಶ್ರ ಮಾಡಿದ್ದೇನೆ. ಯಾಕೆಂದರೆ ನಮ್ಮದು ಮಿಶ್ರ ಜೀವನಶೈಲಿ. ಐರೋಪ್ಯ ಮಾದರಿಯ ಮನೆಯಲ್ಲಿ ವಾಸಿಸುತ್ತಿದ್ದೇವೆ. ಮನೆಯ ತುಂಬಾ ಇಂಗ್ಲಿಷ್ ಪುಸ್ತಕವನ್ನು ತುಂಬಿಕೊಂಡಿರುತ್ತೇವೆ. ಹೊರಗೆ ಹೋಗುವಾಗ ಐರೋಪ್ಯ ಮಾದರಿಯ ಬಟ್ಟೆಗಳನ್ನು ಧರಿಸುತ್ತೇವೆ. ಶುದ್ಧ ಭಾರತೀಯತೆ ಅನ್ನುವುದು ಉಳಿದಿಲ್ಲ. ವಸಾಹತು ಆಳ್ವಿಕೆ ಯಿಂದಲೋ ಅಥವಾ ಮತ್ತೆ ಇನ್ಯಾವುದೋ ಕಾರಣಕ್ಕೆ ನಮ್ಮದು ಇಂದು ಮಿಶ್ರ ಜೀವನ ಶೈಲಿಯಾಗಿಬಿಟ್ಟಿದೆ. ಹಾಗಾಗಿ ಇಂದು ನಾವು ಸಮಕಾಲೀನ ವಸ್ತುವುಳ್ಳ ಹಾಗೂ ನಗರದ ಸಮಕಾಲೀನ ಚಿತ್ರಕ್ಕೆ ಶುದ್ಧ ಶಾಸ್ತ್ರೀಯ ಸಂಗೀತ ಬಳಸಿದರೆ ಅದು ಸರಿಹೋಗುವುದಿಲ್ಲ. ಹಾಗಾಗಿ ನಾನು ಸಾಮಾನ್ಯವಾಗಿ ಎರಡು ಶೈಲಿಗಳನ್ನೂ ಮಿಶ್ರ ಮಾಡುತ್ತೇನೆ. ಪಾಶ್ಚಿಮಾತ್ಯ ಪ್ರಭಾವಕ್ಕೆ ಅಷ್ಟಾಗಿ ಒಳಗಾಗದ, ಶುದ್ಧ ಬದುಕಿನ, ಹಳ್ಳಿಗೆ ಸಂಬಂಧಿಸಿದ ಕಥೆಯಾಗಿದ್ದರೆ ಮಾತ್ರ ಜಾನಪದ ಮಟ್ಟುಗಳನ್ನು, ಭಾರತೀಯ ವಾದ್ಯಗಳನ್ನು, ಭಾರತೀಯ ಜಾನಪದ ವಾದ್ಯಗಳನ್ನು ಬಳಸಿ ಕೊಳ್ಳುತ್ತೇನೆ. ಅಲ್ಲಿಗೆ ಅದು ಹೊಂದಿಕೊಳ್ಳುತ್ತದೆಉಳಿದಂತೆ ನಾನು ಹೆಚ್ಚಾಗಿ ಭಾರತೀಯ ಹಾಗೂ ಪಾಶ್ಚಿಮಾತ್ಯ ಶೈಲಿಗಳನ್ನು ಮಿಶ್ರಮಾಡಿದ್ದೇನೆಸಮಕಾಲೀನ ಸನ್ನಿವೇಶದಲ್ಲಿ ನೀವು ಸಂಗೀತವನ್ನು ಬಳಸುವುದಾದರೆ ಅದು ಮಿಶ್ರಸಂಗೀತ ಆಗಿರುತ್ತದೆನಾನು ಪಟ್ಟಣದ, ಸಮಕಾಲೀನ ವಸ್ತುವಿರುವ ಸಿನಿಮಾಗಳಲ್ಲಿ ಆದಷ್ಟು ಕಡಿಮೆ ಸಂಗೀತವನ್ನು ಬಳಸುತ್ತೇನೆ. ವಾಸ್ತವದ ಬದುಕಿನಲ್ಲಿ ನಮ್ಮ ಸುತ್ತಮುತ್ತ ಇರುವ ಶಬ್ದವನ್ನೇ ಸೃಜನಶೀಲವಾಗಿ ಸಂಗೀತದ ಉದ್ದೇಶವನ್ನು ಪೂರೈಸುವಂತೆ ಬಳಸುವುದಕ್ಕೆ ಸಾಧ್ಯ.

ಸಿನಿಮಾ ಹಾಗೂ ಸಂಗೀತ ಎರಡೂ ಕಾಲದಲ್ಲಿ ನಡೆಯುವಂಥದ್ದು. ಇವೆರಡೂ ಕಾಲದಲ್ಲಿ ಅಸ್ತಿತ್ವದಲ್ಲಿರುವ ಕಲಾ ಪ್ರಕಾರಗಳು. ನೀವು 90 ನಿಮಿಷದ ಸಿನಿಮಾವನ್ನು 90 ನಿಮಿಷ ನೋಡಬೇಕು. ಹಾಗೆಯೇ ಸಂಗೀತವೂ ಕೂಡ. ಹಾಗೆ ಅದು ಅವಧಿಯನ್ನು ಪೂರೈಸಿದ ಮೇಲಷ್ಟೇ ಅದರ ಸಂಪೂರ್ಣ ಹಂದರ ಮೈತಳೆದು ನಿಮಗೊಂದು ಸಮಗ್ರ ಅನುಭವ ಆಗುವುದು. ದೃಷ್ಟಿಯಿಂದ ಸಂಗೀತ ಮತ್ತು ಸಿನಿಮಾ ಒಂದೇ ಬಗೆಯ ಕಲೆಗಳು. ಸಂಗೀತ ಹಾಗೂ ಸಿನಿಮಾ ಅರ್ಥದಲ್ಲಿ ಒಂದನ್ನೊಂದು ಹೆಚ್ಚು ಹೋಲುತ್ತವೆ. ಇದು ಬೇರೆ ಕಲೆಗಳಿಗೆ ಅನ್ವಯಿಸುವುದಿಲ್ಲ. ನೀವು ಒಂದು ಪೇಂಟಿಂಗ್ ಅನ್ನು ಹತ್ತು ನಿಮಿಷ ನೋಡಬಹುದು ಅಥವಾ ಒಂದು ಗಂಟೆಯೂ ನೋಡಬಹುದು. ವ್ಯತ್ಯಾಸ ವೇನೂ ಆಗುವುದಿಲ್ಲ. ನೀವು ಒಂದು ಪುಸ್ತಕವನ್ನು ಓದುವಾಗ ಹತ್ತು ಪುಟ ಓದಿ ನಿಲ್ಲಿಸಿಬಿಡಬಹುದು, ನಂತರ ಮತ್ತೆ ಓದಬಹುದು. ಒಂದು ಪುಸ್ತಕವನ್ನು ಒಂದು ಸಲಕ್ಕೇ ಓದಿ ಮುಗಿಸಬೇಕು ಅಂತೇನಿಲ್ಲ.

ಸಿನಿಮಾ ಎನ್ನುವುದು ಒಂದು ಘಟನೆಗಳ ಸರಣಿಗೆ ಸಂಬಂಧಿಸಿರುತ್ತದೆ. ಅಂದರೆ ಒಂದು ಕಥೆ ಅಂತ ಅಂದುಕೊಳ್ಳಬಹುದು. ಹಾಗಾದರೆ ಐರೋಪ್ಯ ಸಂಗೀತದಲ್ಲೂ ಹೀಗೆ ಒಂದು ಸ್ಟೋರಿ ಅಂದರೆ ಘಟನೆಗಳ ಸರಣಿ ಇರುತ್ತದೆಯೇ ಎಂಬ ಪ್ರಶ್ನೆ ಮುಖ್ಯವಾಗುತ್ತದೆ. 18ನೇ ಶತಮಾನದ ಐರೋಪ್ಯ ಸಂಗೀತ ಅಂದರೆ ಸುಮಾರಾಗಿ ಸೊನಾಟಾ ಹುಟ್ಟಿದ ಕಾಲ ಅಂತ ಅಂದುಕೊಳ್ಳಿ. ಸಂಗೀತಕ್ಕೆ ಮಾತು ಅನ್ವಯಿಸುತ್ತದೆ. ಬಿಥೋವನ್ ಸಂಗೀತವನ್ನು ನಾಟಕೀಕರಿಸಿದ/ದೃಶ್ಯೀಕರಿಸಿದ. ಮೊದಲು ಎಕ್ಸ್ಪೊಸಿಷನ್ (ಸಾಮಾನ್ಯವಾಗಿ ಮುಂದೆ ವೈವಿಧ್ಯ ಕೊಟ್ಟು ವಿಸ್ತರಿಸಲಾಗುವ ಪ್ರಧಾನ ಅಥವಾ ಪುನರಾವರ್ತಕ ಸ್ವರಸಂಗತಿ) ಬರುತ್ತದೆ, ಬೆಳೆವಣಿಗೆ (ಇಲ್ಲಿ ಪ್ರಧಾನ ಭಾಗವನ್ನು ಬಗೆ ಬಗೆಯಾದ ತಂತ್ರಗಳನ್ನು ಬಳಸಿಕೊಂಡು ವಿಸ್ತರಿಸಲಾಗುತ್ತದೆ), ಪುನರಾವರ್ತನ (ಸೊನಾಟಾದಲ್ಲಿ ಕೃತಿಯ ಪ್ರಧಾನ ಸ್ವರಸಂಗತಿಯ ಖಂಡವನ್ನು ಮತ್ತೆ ನುಡಿಸುವ ಭಾಗ), ಕೋಡ (ಕೃತಿಯ ಪ್ರಧಾನಭಾಗ ಮುಗಿದ ಮೇಲೂ ಅದರ ಮುಕ್ತಾಯವನ್ನು ಹೆಚ್ಚು ಆಹ್ಲಾದಕರ ಮಾಡಲು ಅದಕ್ಕೆ ಸೇರಿಸುವ ಭಾಗ) ಇವೆಲ್ಲಾ ಸೇರಿ ಒಂದು ನಾಟಕೀಯ ಚೌಕಟ್ಟು ಅದಕ್ಕೆ ಬಂದುಬಿಟ್ಟಿತ್ತು. ಬಿಥೋವನ್ನನ ಸಂಗೀತದಲ್ಲಿ ಪೌರುಷ, ಸ್ತ್ರೀತ್ವ, ಹೀಗೆ ಮಾನವ ಸ್ವಭಾವಕ್ಕೆ ಸಂಬಂಧಿಸಿದ ಹಲವು  ಅಂಶಗಳು ಇವೆÉ. ತುಂಬಾ ಭಾವನಾತ್ಮಕ ಗುಣ ಅವನ ಸಂಗೀತಕ್ಕಿದೆ. ಬಿಥೋವನ್, ಮೊeóÁರ್ಟ್, ಹೈಡನ್, ಶೂಬರ್ಟ್, ಶೂಮನ್ ಮುಂತಾದ ವರೆಲ್ಲ ಇರುವ ಐವತ್ತು ಅಥವಾ ಅರವತ್ತು ವರ್ಷಗಳ ಅವಧಿಯ ಸಂಗೀತಕ್ಕೂ ಸಿನಿಮಾಕ್ಕೂ ತುಂಬಾ ಸಾಮ್ಯವಿದೆ. ನಂತರ ಇಪ್ಪತ್ತನೆಯ ಶತಮಾನದಲ್ಲಿ ವಿನ್ಯಾಸ ಸಂಪೂರ್ಣವಾಗಿ ಛಿದ್ರವಾಯಿತು. ಈಗ ಪೌರುಷ, ಸ್ತ್ರೀತ್ವ, ಬೆಳೆವಣಿಗೆ, ಪುನರಾವರ್ತನೆ ಇವೆಲ್ಲವನ್ನು ನಾವು ಕಾಣು ವುದೇ ಇಲ್ಲ.

ಮಾಡ್ಯುಲೇಷನ್ ಅಂದರೆ ಏರಿಳಿತಗಳನ್ನು ಸಿನಿಮಾ ಹಾಗೂ ಸಂಗೀತ ಎರಡರಲ್ಲೂ ಕಾಣ ಬಹುದು. ನಮ್ಮದು ಸಿನಿಮಾವನ್ನು ಹೋಲು ವಂತಹ ಸಂಗೀತವಲ್ಲ ಅಂದರೆ ಅದರಲ್ಲಿ ನಾಟಕೀ ಯತೆ ಇಲ್ಲ. ಅದು ತುಂಬಾ ಹೆಚ್ಚು ಅಲಂಕಾರಿಕ ವೂ ಆಗಿದೆ. ಪ್ರಾರಂಭದಲ್ಲಿ ಲಯ ತುಂಬಾ ಸರಳವಾದ ಗತಿಯಲ್ಲಿ ಸಾಗುತ್ತದೆ. ನಿಧಾನವಾಗಿ ಆರಂಭವಾಗಿ ಕೊನೆಗೆ ವೇಗದಲ್ಲಿ ಮುಕ್ತಾಯ ವಾಗುತ್ತದೆ. ನಡುವಿನಲ್ಲಿ ಹೆಚ್ಚಿನ ಬದಲಾವಣೆ ಹಾಗೂ ಭಿನ್ನತೆಗಳು ಇರುವುದಿಲ್ಲನಿಧಾನವಾಗಿ ಪ್ರಾರಂಭವಾಗಿ, ಅಮೇಲೆ ಸ್ವಲ್ಪ ವೇಗ ಹೆಚ್ಚುತ್ತದೆ, ಹಾಗೇ ಹೆಚ್ಚುತ್ತಲೇ ಹೋಗಿ, ಕೊನೆಗೆ ಅತಿವೇಗದಲ್ಲಿ ಮುಕ್ತಾಯವಾಗುತ್ತದೆ. ಅದರ ವಿನ್ಯಾಸ ದೇವ ಸ್ಥಾನದ ರಚನೆಯ ಹಾಗಿದೆ. ಮೊದಲು ಬಲವಾದ ಅಡಿಪಾಯ, ಆಮೇಲೆ ಕುಸುರಿ ಕೆಲಸ, ಅಲಂಕಾರಿ ಕೆ ಕೆಲಸ, ಕೊನೆಗೆ ಮೇಲೆ ಶಿಖರ. ಎಲ್ಲಾ ಕಡೆಯೂ ಸಂಗೀತ ಹೀಗೇ ಇರುತ್ತದೆ ಅಂತ ಅನ್ನಿಸುತ್ತದೆ. ನಾನದನ್ನು ಗಮನಿಸಿದ್ದೇನೆ.

ನನ್ನ ಮೊದಲ ಸಿನಿಮಾಗಳಲ್ಲಿ ಇದು ಹೆಚ್ಚಾಗಿ ರೀತಿ ಇರಲಿಲ್ಲ. ಅವುಗಳಲ್ಲಿ ರವಿಶಂಕರ್ ಅಂತಹವರು ಸಂಯೋಜನೆ ಮಾಡುತ್ತಿದ್ದರು. ಅವರೆಲ್ಲಾ ಸಂಗೀತ ಸಂಯೋಜಕರಲ್ಲ. ಪ್ರತಿಭಾ ವಂತ ಕಲಾವಿದರು. ಅವರಿಗೆ ಹದಿನೇಳು ಸೆಕೆಂಡಿನÀ ಸಂಗೀತ ನನಗೆ ಬೇಕು ಅಂದಾಗ ಅವರು ಕೈಚೆಲ್ಲಿನಾವು ಮೂರು ನಿಮಿಷ ನುಡಿಸುತ್ತೇವೆ, ನಿಮಗೆ ಬೇಕಾದ್ದನ್ನು ನೀವು ಆರಿಸಿಕೊಳ್ಳಿಅನ್ನುತ್ತಿದ್ದರು. ಹಾಗಾಗಿ ಹೆಚ್ಚಿನ ಕೆಲಸ ಸಂಕಲನದ ಕೊಠಡಿಯಲ್ಲಿ ನಡೆಯುತ್ತಿತ್ತು. ಕೆಲವೊಮ್ಮೆ ಕೆಲವು ಘಟನೆಗಳಿಗೆ ಸೂಕ್ತವಾದ ಸಂಗೀತ ನನಗೆ ಸಿಗುತ್ತಿರಲಿಲ್ಲ್ಲ. ಅಂತಹ  ಸಂದರ್ಭ ದಲ್ಲಿ ಶೂಬರ್ಟ್ ಅವರ ಸಂಗೀತವನ್ನು ಹಿಮ್ಮುಖವಾಗಿ ಹಾಕುತ್ತಿದ್ದೆ, ಹಾಗೆಯೇ ಸಿಬೆಲಿ ಯಸ್ ಸಂಗೀತವನ್ನು ಬಳಸಿಕೊಂಡಿದ್ದೇನೆ. ಯಾರೂ ಅದನ್ನು ಗುರುತಿಸಿಲ್ಲ. ಆದರೆ ಅದು ಚೆನ್ನಾಗಿ ಸೇರಿಕೊಂಡಿದೆÉ. ನಾನು ಜಲಸಾ ಘರ್ ಸಿನಿಮಾದಲ್ಲಿ ಅದನ್ನು ಬಳಸಿಕೊಂಡಿದ್ದೇನೆ. ಅದು ಪರಿಣಾಮಕಾರಿಯಾಗಿ ಬಂದಿದೆ. ಜಲಸಾ ಘರ್ ಸಿನಿಮಾದಲ್ಲಿ ಅವನುಓಹ್ ಕತ್ತಲಾಗುತ್ತಿದೆ, ದೀಪಗಳು ಆರಿಹೋಗುತ್ತಿವೆಅನ್ನುತ್ತಾನೆ. ಆಗ ಒಂದು ಸಂಗೀತ ಬರುತ್ತದೆ. ಅಲ್ಲಿ ಸಂಗೀತ ನಿರ್ದೇಶಕರು ಕೊಟ್ಟ ಸಂಗೀತ ನನಗೆ ಸಾಲುವು ದಿಲ್ಲ ಅನ್ನಿಸಿತು. ಅದಕ್ಕೆ ಬೇರೆ ರೀತಿಯ ಟೆಕ್ಚರ್ ಬೇಕು ಅನ್ನಿಸಿತು. ಸಿಬಿಲಿಯಸ್ ಧ್ವನಿಮುದ್ರಣ ಕೊರತೆಯನ್ನು ನೀಗಿಸಿತು. ಅಲ್ಲಿ ಎರಡನ್ನೂ ಸೇರಿಸಿದ್ದೇನೆ. ವಾಸ್ತವ ಅಂದರೆ ಅದರಿಂದ ತೊಂದರೆ ಆಗಲಿಲ್ಲ, ಅನುಕೂಲವಾಗಿದೆ. ನಾನು ಬೇರೆ ಸಂಗೀತಗಾರರ ಜೊತೆ ಕೆಲಸಮಾಡುವಾಗ ಎಲ್ಲಾ ರೀತಿಯ ಟ್ರಿಕ್ಸಗಳನ್ನು ಮಾಡುತ್ತಿದ್ದೆ. ಕೆಲವೊಮ್ಮೆ ಅವರಿಗೆ ನೋವಾಗುತ್ತಿತ್ತು, ಕೆಲವೊಮ್ಮ ಆಶ್ಚರ್ಯಪಡುತ್ತಿದ್ದರು. ಹಲವು ಬಾರಿ ಅವರ ಸಂಗೀತವನ್ನು ಮೊಟಕು ಮಾಡುತ್ತಿದ್ದೆ, ಕೆಲವೊಮ್ಮೆ ಲಂಬಿಸುತ್ತಿದ್ದೆ ಅಥವಾ ನಿಧಾನ ಮಾಡುತ್ತಿದ್ದೆ, ಅದರ ವೇಗವನ್ನು ಅರ್ಧಕ್ಕೆ ಇಳಿಸಿಬಿಡುತ್ತಿದ್ದೆ, ಇದರಿಂದ ದೀರ್ಘವಾಗುತ್ತಿತ್ತು ಮತ್ತು ಅದಕ್ಕೆ ಒಂದು ಹೊಸ ನಾದಗುಣ (ಟಿಂಬರ್) ಸಿಗುತ್ತಿತ್ತು.  

ನನಗೆ ಮೊದಲಿನಿಂದಲೂ ಸ್ವತಃ ನಾನೇ ಸ್ವತಂತ್ರವಾಗಿ ಸಂಗೀತ ಸಂಯೋಜನೆ ಮಾಡ ಬೇಕು ಎನ್ನುವ ಆಸೆಯಿತ್ತು. ಉಳಿದ ಸಂಯೋಜ ಕರಿಗೆ ಪ್ರತಿಯಾಗಿ ಮಾಡಬೇಕು ಅಂತ ಅಲ್ಲ. ಅದು ನನ್ನ ಉದ್ದೇಶವೂ ಅಲ್ಲ. ನಾನು ಕೇವಲ ನನ್ನ ಸಂತೋಷಕ್ಕಾಗಿ ಕೆಲಸ ಮಾಡುತ್ತೇನೆ. ನನಗೆ ಸಂಗೀತ ಸಂಯೋಜನೆ ಇಷ್ಟ ಅದಕ್ಕಾಗಿ ನಾನು ಅದನ್ನು ಮಾಡುತ್ತೇನೆ. ನನಗೆ ಸಂಗೀತ, ಹಾಡು, ಹಿನ್ನಲೆ ಸಂಗೀತ ಇವೆಲ್ಲಾ ಕಂಪೋಸ್ ಮಾಡು ವುದು ಇಷ್ಟದ ಕೆಲಸ. ನಾನು ಒಂದಿಬ್ಬರು ಬೇರೆ ನಿರ್ದೇಶಕರಿಗೂ ಕೆಲಸ ಮಾಡಿದ್ದೇನೆ. ಶೇಕ್ಸ್ ಪಿಯರ್ವಾಲ ಅಂತಹ ಸಿನಿಮಾಕ್ಕೆ ಸಂಗೀತ ಕಂಪೋಸ್ ಮಾಡಿದ್ದೇನೆ. ಆದರೆ ನಾನು ಯಾವಾಗಲೂ ನನಗಾಗಿ ಮಾತ್ರ ಕೆಲಸ ಮಾಡು ತ್ತೇನೆ. ಈಗ ಮಾತ್ರವಲ್ಲ ಮುಂದಕ್ಕೂ ನನಗೋಸ್ಕರ ನಾನು ಸಂಗೀತ ಸಂಯೋಜನೆ ಮಾಡುತ್ತೇನೆ.

 ____

Palghat Mani Iyer

ಹಿರಿಯರು

 ಶ್ರೀ ಬಿವಿಕೆ ಶಾಸ್ತ್ರಿ

[ಮುರಳಿ ಎಂಬ ಹೆಸರಿನಲ್ಲಿ ಬರೆಯುತ್ತಿದ್ದ ಶ್ರೀ ಬಿವಿಕೆ ಶಾಸ್ತ್ರಿಯವರು ಕರ್ನಾಟಕದ ಹೆಸರಾಂತ ಕಲಾವಿಮರ್ಶಕರು. ಒಂದರ್ಥದಲ್ಲಿ ಅವರು  ಕರ್ನಾಟಕದಲ್ಲಿ ಸಂಗೀತ ವಿಮರ್ಶೆಯ ಆರಂಭದ ಹೆಜ್ಜೆಗಳನ್ನು ರೂಪಿಸಿದವರು. 1962ರಲ್ಲಿ ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾದಲ್ಲಿ ಖ್ಯಾತ ಸಂಗೀತಗಾರರನ್ನು ಕುರಿತು ಸರಣಿ ಲೇಖನಗಳನ್ನು ಬರೆದರು. ಕೆಲವು ಲೇಖನಗಳನ್ನು ಅಂಕಣದಲ್ಲಿ ಪ್ರಕಟಿಸಲಾಗುವುದು.]

 UNLIKE its counterpart in Hindustani music, where it is more or less ancillary, an accompaniment in Karnatak music is in its role and function regulated by long established conventions. The accompanist here has frequent opportunities  for individual expression - the violin, for instance, in those short solo turns following each movement of an alapana or sargam, or whenever the vocalist rests in the middle of a performance. Again, though the opportunities may not be so many, the percussion, too, has its solo turns, but of a longer duration. These come after the long elaboration of a passage in a kriti or a swara, or after the variations of a pallavi, when free rein is allowed to the percussionist’s impulses and ideas. Unfortunately however, as most mridangam players have to learn to their discomfiture, this is the time invariably chosen by the audience for an “intermission”—a philistine habit, no doubt, and one probably cultivated only in recent decades.

But the customary picture is reversed when Palghat Mani Iyer is the accompanist. In fact, a good part of the audience will take its intermission, if any, earlier, or even forgo this altogether, rather than miss his solo turns. And, of course, a large section of the audience will be there only to listen to the mridangam of Mani Iyer, which they do with all avidity, not missing even the subtlest detail. This becomes all the more interesting when we consider that Mani Iyer is an outstanding exponent of what is called the Tanjore style of mridangam art.

The Tanjore style is a very elegant version of the mridangam art. An important point about it is the convention that the mridangam should, in the main, be played as something accessory to the vocalist. The player is supposed to subject all his urges and ideas to enlivening and enhancing the beauty of the other’s exposition. He must be unobtrusive and give expression to his individual urge only in his solo turns. Even then, his playing is supposed not to overshadow the performance of the main artiste.

lf then in spite of this self-effacing ordinance Mani Iyer remains the focus of attention, the quality of his art can be easily imagined. His name is a sure draw, guaranteeing the success of any concert, In fact, most of the eminent musicians earnestly desire, and indeed feel highly flattered, to have his accompaniment. They have nothing but praise for his playing. “There is only one Mani Iyer,” they say, “and whatever he does can be matched only by Mani Iyer, and by none else!”

But what is the reaction of the master player himself to such universal praise? It is hard to say, because by nature Mani Iyer is very shy and retiring and perhaps even unsociable. It is difficult to read any reaction of his inscrutable face. When hard-presstd, he says, cryptically: “Why discuss this. It is something which I feel should not be discussed. The facts, if any, are there before you. You may draw your own conclusions.”

Obviously he is one who feels that music is something to be heard and enjoyed, rather than talked about. This self-effacing quality seems to pervade every aspect of Mani Iyer’s life.

Away from the platform, Mani Iyer can be easily lost in a crowd. There is nothing to indicate, either in his dress or talk or deportment, that he is a musician, a master of percussion. The picture of this man wearing a short sleeved khaddar shirt and a “single” veshti, with a towel over his shoulder serving the purpose of an uttariyam, has been familiar to music lovers for nearly forty years - from the time Mani, just entering his teens, shot into view. Even today, except for the streaks of grey in his closely cut hair and the polish and refinement of his performance - indications of maturity - there seems to be no significant change either in his person or dress or demeanour. In fact, at the time he received the National Award from the President, Mani Iyer was in his usual dress. When asked why he did not change into more ceremonial apparel, he said: “I believe I was given the Award for such proficiency as 1 may have in the art of the mridangam, and not for my dress.”

Despite his reticence, this ostensibly obdurate personality becomes a different man on the concert platform. It is true his impassive face does not reveal any shade of emotion except when he gives utterance to a rare “Ah”, overwhelmed by some stirring moment in the music of the vocalist or the violinist. But, as an interesting contrast, his ideas and impulses are projected vividly through that remarkably expressive pair of hands that he has. By their subtle manipulation, cultivated through indefatigable and imaginative

practice, his mridangam speaks with a wonderful eloquence. His playing does not simply beat the pace or punctuate the movements. Through the peculiar vocabulary of the instrument, the modal frame-work is projected in all its pulsating detail. With perfect correspondence between the beats of both faces, Man’s mridangam speaks with a seemingly infinite and enthralling variety of tone, in complete harmony with the situation.

There are feathery flutters alternating with hollow metallic rumbles recalling a chenda; majestic rolls recalling a thavil jostle with a tiny soft patter reminiscent of the lyrical grace of dancing feet; subtle, fluid, whisper-like strokes, which strike one as remarkably human, are thrown in relief against thunderous waves reaching a crescendo. In brief, the instrument in this virtuoso’s hands, besides displaying its characteristic qualities, seems to acquire a distinct human touch.

“Born about fiftyone years ago in Pazhayanur (a village near Palghat in Kerala), Mani Iyer hails from a family in which music has been an avocation. His father, Sesha Bhagavatar, and his grandfather, Ramaswamy Bhagavatar, were re-puted musicians, but it was Mani who took up the mridangam first in the family. Gifted with an instinctive sense of rhythm which was perhaps nourished in those congenial environs (amidst the vigorous drums of Kerala), Mani was so fascinated by the mridangam that he missed no opportunity (very often playing truant) to practise on the instrument and give vent to his impulses.

The talents of the boy, running wild, were channelled in the right direction by the late Palghat Subbier, the eminent mridangam player, and by Kalpathi Viswanatha Iyer, another expert player. As a consequence, young Mani was invited to accompany Harikatha performances, which he did with enthusiasm and fluency. In those days, unlike at present, the road to the concert platform was not a straight one. The graduation was either through accompanying Harikathas or dance recitals.

As an accompanist in such perform-ances, Mani was noticed by the late Tanjore Vaidyanatha Iyer, the mridangam maestro. He took Mani under his wing and shaped his talents to perfection. Though Mani had been performing in public even before he entered his teens, the real break, in a larger context, came when he accompanied Chembai Vaidyanatha Bhagavatar at a concert in Madras, in the early ‘twenties. This made him famous throughout the domain of Karnatak music.

In his rise, apart from intuitive gifts and an amazing sense of rhythm and dexterity in the art of the mridangam, one other point that stood him in good stead was his remarkable courage and self confidence. Though Mani Iyer says that, like any other artiste, he was also subject to different stages of fear, knowledgeable rasikas aver that the above-mentioned qualities it is that have mainly sustained him in many a concert, which would otherwise have ended disastrously.

One such testing situation fondly remembered by old timers was when teenager Mani crossed swords with the great Nayana Pillai, whose mastery of tala and laya was proverbial and overawed even eminent accompanists. (When questioned by me about this, Mani Iyer became evasive, pleading that, because of its “remoteness”, the incident had “slipped” from his memory.) One more such occasion was when he played on the same platform with the late Pudukottah Dakshinamoorthy Pillai (khanjira), the eminent percussionist. Though there was a slight misunderstanding between the two at first, eventually they became good friends and developed an ideal partnership, which ended only with the death of Pillai.

Another such partnership then developed is still going strong with the violin virtuoso, Chowdiayya. How wonderfully the instruments of these two vidwans respond to each other’s ideas cannot be adequately described: it must be witnessed to be believed. The influence of Dakshinamoorthy Pillai in further enlarging Mani Iyer’s perspectives and imbuing his already exquisite ideas with colour cannot entirely be ruled out - oldtimers often “feel” echoes from those times in his concerts.

 ______
 

ನವೆಂಬರ್ ತಿಂಗಳ ಕಾರ್ಯಕ್ರಮದ ಪ್ರಾಯೋಜಕರು

 

1.           ಶ್ರೀಮತಿ ನೇತ್ರಾವತಿ ಚಂದ್ರಶೇಖರ್ ಮತ್ತು ಶ್ರೀ ಡಿ. ಚಂದ್ರಶೇಖರ್ ಅವರು.

2.           ಶ್ರೀ ಡಿ ಕೀರ್ತಿಕುಮಾರ್ ಅವರು ಜಿ. ಆರ್. ದಾಸಪ್ಪ ಮತ್ತು ಶ್ರೀ ಜಿ. ಆರ್. ವೆಂಕಟರಾಮಯ್ಯ ಹಾಗೂ ಜಿ. ಆರ್. ಗೋಪಾಲ ಅವರ ನೆನಪಿನಲ್ಲಿ.

3.           ಅನಾಮಿಕರು ಶ್ರೀಮತಿ ಶಾರದಮ್ಮ ಮತ್ತು ಶ್ರೀ ಭಗವಂತ ರಾವ್ ಅವರ ಹೆಸರಿನಲ್ಲಿ.

4.           |ವಿದ್ವಾನ್ ಎಂ. ಜೆ. ಶ್ರೀನಿವಾಸ ಅಯ್ಯಂಗಾರ್ ಅವರು ವೀಣಾ ಜನಾರ್ದನ ಅಯ್ಯಂಗಾರ್          ಅವರ ನೆನಪಿನಲ್ಲಿ.

5.           ‘ರಾಸವೃಂದದವರು ಲಲಿತಾ ದೊರೆ ಮತ್ತು ವೈ. ಎನ್. ಸಿಂಹ ಅವರ ನೆನಪಿನಲ್ಲಿ.

6.           ಶ್ರೀ ಎಂ.ಆರ್.ಹರಿಹರನ್ ಅವರು ಎಂ.ಆರ್.ತ್ಯಾಗರಾಜನ್ ಅವರ ನೆನಪಿನಲ್ಲಿ.

7.           ಡಾ.. ಎಸ್. ರಾಘವಕುಮಾರಿಯವರು ವೆಂಕಟಲಕ್ಷಮ್ಮ ಮತ್ತು ವಿದ್ವಾನ್ . ಎಸ್. ಶ್ರೀನಿವಾಸ ರಾಘವಾಚಾರ್ಯ ಅವರ ನೆನಪಿನಲ್ಲಿ.

8.           ಶ್ರೀಮತಿ ಟಿ.ಎನ್.ಇಂದಿರಾ ಅವರು ಡಾ.ಟಿ.ಎನ್.ಪ್ರಭಾ ಅವರ ನೆನಪಿನಲ್ಲಿ.

9.           ವೈ.ಟಿ. ಮತ್ತು ಶ್ರೀಮತಿ ಮಾಧುರಿ ತಾತಾಚಾರಿಯವರ ಭ್ರಮರ ಟ್ರಸ್ಟ್ ಡಾ. ವೈ. ಟಿ.                                    ತಾತಾಚಾರಿಯವರ ನೆನಪಿನಲ್ಲಿ.

10.         ಶ್ರೀ ಜಿ. ರಾಮನಾಥ ಭಟ್ ಮತ್ತು ಶ್ರೀಮತಿ ಚಂದ್ರಾವತಿ ಭಟ್ ಅವರು ಶ್ರೀ ಗಣಪತಿ ಭಟ್ ಮರಾಠೆ, ಶ್ರೀಮತಿ ಅನ್ನಪೂರ್ಣ ಭಟ್ ಮರಾಠೆ ಮತ್ತು ಶ್ರೀ ಮುಂಡಾಜೆ   ನಾರಾಯಣ ಭಟ್ ತಾಮ್ಹನ್ಕರ್ ಅವರ ನೆನಪಿನಲ್ಲಿ.

11.         ಶ್ರೀಮತಿ ಇಂದುಮತಿ ಆರ್. ರಾವ್ ಅವರು ಸಿ. ಎನ್. ವಾಸುದೇವರಾವ್ ಮತ್ತು ಕೆ. ಎಚ್. ರಂಗನಾಥರಾವ್ ಅವರ ನೆನಪಿನಲ್ಲಿ.

12.         ಪ್ರೊ| ಮೈಸೂರು ವಿ ಸುಬ್ರಹ್ಮಣ್ಯ ಮತ್ತು ಗಾನಭಾರತೀ ಅವರು ವೀಣೆ ಶೇಷಣ್ಣನವರ ಸ್ಮರಣಾರ್ಥ.

13.         ಕನ್ನಡ ಮತ್ತು ಸಂಸ್ಕೃತಿ ಇಲಾಖೆ.

 

ಕೃಷ್ಣ ಜಯಂತಿಯ ಪ್ರಯುಕ್ತ ನಡೆದ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರು

 Carnatic Classical Music Vocal - Junior - Amulya. R. Bhat, Prerana. P (First), Dhanya, Lasya Naduthota (Second), Anwita Srikiran, Bhuvan Datta Padhiraa (Third). Senior - Mahatee Raghuram (First), Vishnu. M. R (Second), Nithyashree. R (Third), R. P. Koushik, Amogha Kashyap, Shreyas Bhat (Consolation).

Carnatic Classical Music Instrumental - Junior - Anwita Srikiran, Bhuvan Datta Padhiraa (First), Varun. P. V, Udaya Raghavendra (Second), Nihal. P. N (Third). Senior - Prajwal Rangharajan (First), Amogha. N. A (Second).

Percussion Instruments - Junior - Chidatma Datta Chaganti (First), Manoj Kumar. H (Second), Sudharshan. R. Srinivas (Third). Senior - Shamitha. S (First), Sathwik. M (Second), Varchas. V (Third).

Dasara Padagalu - Junior - Prerana. P, Dhanya (First), Amulya. R. Bhat, Skanda. N, Aayush. M. D (Second), Nayana Nagaraj, Anagha Bhat, Utpal (Third), Laysa Naduthota, Bhoomika Arun (Consolation). Senior - Nithyashree. R (First), Mahatee Raghuram (Second), Ananya. V (Third), Ananya. R. Bhat, Ruthvik. C. Raj (Consolation), Shreyas Bhat (Special).

Mankutimmana Kagga - Junior - Utpala. N (First), Bhoomika Arun (Second), Nikitha. S. Gowda (Third), Monalisa (Consolation). Senior - Priya. K.V (First), Rithvik. C. Raj (Second), Thejashree. N. Murthy (Third).

Vachana Gayana - Junior - Amulya. R. Bhat (First), Prerana. P (Second), Skanda. N (Third), Ayush. M. D, Nayana Nagaraj (Consolation). Senior - Nithyshree. R (First), Ananya. V (Second), Priya. K. V (Third), Gouri. V, Ananya. R. Bhat (Consolation).

Music Quiz - Junior - Laysa Naduthota (First), Adithi Naduthota (Second), Dhanya. N (Third), Bhoomika Arun (Consolation). Senior - Tejashri. N. Murthy (First), Gouri. V (Second).

Essay Writing - Junior - Amulya. R. Bhat (First), Lasya Naduthota (Second), Nihal. P. N (Third). Senior - Nagapooja (First), Shamanth. U (Second), Ananya. R. Bhat (Third).

 

 

ಕಲಾರಸಿಕರಲ್ಲಿ ಮನವಿ

ಗಾನಭಾರತೀಯಲ್ಲಿ ಹಲವು ಸಹೃದಯರು ಕಾರ್ಯಕ್ರಮ ನಿಯೋಜಿಸಲು ಅನುಕೂಲವಾಗುವ ದೃಷ್ಟಿಯಿಂದ ಲಾಗಾಯ್ತಿನಿಂದ ದತ್ತಿಯನ್ನು ಇಟ್ಟು ಸಹಕರಿಸುತ್ತಿದ್ದಾರೆ. ಆದರೆ ಬ್ಯಾಂಕ್ ಬಡ್ಡಿದರದ ಇಳಿಕೆ ಹಾಗೂ ಏರುತ್ತಿರುವ ಕಾರ್ಯಕ್ರಮದ ವೆಚ್ಚ ಇವುಗಳಿಂದಾಗಿ ಹಣದಲ್ಲಿ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುವುದು ಕಷ್ಟವಾಗುತ್ತಿದೆ. ಗಾನಭಾರತಿಗೆ ಇಂದು ಸಹೃದಯರ ನೆರವು ತೀರಾ ಅಗತ್ಯವಾಗಿದೆ.

ಇರುವ ಕಾರ್ಯಕ್ರಮಕ್ಕೆ ನೆರವಾಗಿ

ವೀಣೆ ಶೇಷಣ್ಣ, ವೀಣಾ ಎಸ್ ಬಾಲಚಂದರ್, ಕರ್ನಾಟಕದ ವೀಣಾ ವಿದ್ವಾನ್ ಎಂ ಜೆ ಶ್ರೀನಿವಾಸ ಅಯ್ಯಂಗಾರ್ ಹಾಗೂ ಗಾನಭಾರತೀಯ ನಿರ್ಮಾಣದಲ್ಲಿ ಬಹುವಾಗಿ ದುಡಿದ ಶ್ರೀಯುತ ಜಿ ಟಿ ನಾರಾಯಣರಾವ್ ಅವರ ಹೆಸರಿನಲ್ಲಿ ಇಟ್ಟಿರುವ ದತ್ತಿಗೆ ತಾವು ಉದಾರವಾಗಿ ಹಣ ನೀಡಿ ನೆರವಾಗಬೇಕೆಂದು ಪ್ರಾರ್ಥಿಸುತ್ತೇವೆ.

 ನಿಮ್ಮ ಆಪ್ತರ ಹೆಸರಿನಲ್ಲಿ ಒಂದು ಕಾರ್ಯಕ್ರಮ ಪ್ರಾಯೋಜಿಸಿ

ಕನಿಷ್ಠ 15,000ರೂ ನೀಡುವುದರ ಮೂಲಕ ಒಂದು ಕಾರ್ಯಕ್ರಮವನ್ನು ಪ್ರಾಯೋಜಿಸಬಹುದು.

ತಿಲ್ಲಾನದ ಓದುಗರಲ್ಲಿ ಮನವಿ

ತಿಲ್ಲಾನ ಈಗ ಹೆಚ್ಚಿನ ಪುಟಗಳೊಂದಿಗೆ ನಿಮ್ಮ ಮುಂದಿದೆ. ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ಪ್ರೀತಿಯಿಂದ ಸ್ವಾಗತಿಸಿರುವುದು ನಮ್ಮ ಉತ್ಸಾಹವನ್ನು ಹೆಚ್ಚಿಸಿ, ಧೈರ್ಯ ತಂದುಕೊಟ್ಟಿದೆ. ನೀವು ನೀಡುತ್ತಿರುವ ಪ್ರೋತ್ಸಾಹದ ಧೈರ್ಯದ ಮೇಲೆ ನಿಮ್ಮಲ್ಲಿ ಒಂದು ಅರಿಕೆಯನ್ನು ಮಾಡಿಕೊಳ್ಳುತ್ತಿದ್ದೇವೆ. ಸದಸ್ಯರಿಗೆಲ್ಲಾ ತಿಲ್ಲಾನವನ್ನು ಈವರೆಗೂ ಉಚಿತವಾಗಿ ತಲುಪಿಸುತ್ತಿದ್ದೇವೆ. ಮುಂದೆಯೂ ನಿಮಗೆ ಅದು ಉಚಿತವಾಗಿಯೇ ಲಭ್ಯವಿರುತ್ತದೆ. ಆದರೆ ಹೆಚ್ಚುತ್ತಿರುವ ಖರ್ಚು ಗಾನಭಾರತಿಗೆ ಹೊರೆಯಾಗುತ್ತಿದೆ. ಹಾಗಾಗಿ ನೀವು ನಮಗೆ ಕೆಳಗಿನ ಯಾವುದಾದರೂ ಒಂದು ವಿಧದಲ್ಲಿ ನೆರವಾದರೆ ತಿಲ್ಲಾನ ಒಂದು ಮೌಲಿಕ ಸಾಂಸ್ಕøತಿಕ ಪತ್ರಿಕೆಯಾಗಿ ಉಳಿಯುವುದಕ್ಕೆ ನೆರವಾಗುತ್ತದೆ.

1. ವಾರ್ಷಿಕ ಕೊಡುಗೆಯಾಗಿ 200 ರೂಪಾಯಿಗಳನ್ನು ನೀಡುವುದು.

2. ನಿಮಗೆ ಸಾಧ್ಯವಾಗುವಷ್ಟು ಆರ್ಥಿಕ ಸಹಾಯ ನೀಡುವುದು.

3. ಜಾಹೀರಾತನ್ನು ನೀಡುವುದು ಅಥವಾ ದೊರಕಿಸಿಕೊಡುವಲ್ಲಿ ನೆರವಾಗುವುದು

Issue: 
November, 2018

Ganabharathi, Veene Seshanna Bhavana

Veene Sheshanna Bhavana, Adichunchanagiri Road, Kuvempunagar, Mysore - 23


Tel : 0821-2560313

Email: ganabharati@gmail.com

Web: www.ganabharathi.com

  • Icon
  • Icon