Skip to main content

ಮನುಷ್ಯನ ಜೀವನ ಸಂಪೂರ್ಣವಾಗಬೇಕಿದ್ದರೆ ಆತನಿಗೆ ಸ್ವಲ್ಪವಾದರೂ ಸಂಗೀತ - ಸಾಹಿತ್ಯದಲ್ಲಿ  ಅಭಿರುಚಿ ಇರಬೇಕು.   ಮಕ್ಕಳಿಗೆ ಗಣಿತ, ವಿಜ್ಙಾನ, ಚರಿತ್ರೆ ಮುಂತಾದವನ್ನು ಮಾತ್ರ ಕಲಿಸಿದರೆ ಸಾಲದು.  ಸಾಹಿತ್ಯ, ಸಂಗೀತ, ನೃತ್ಯ ಮುಂತಾದ ಲಲಿತ ಕಲೆಗಳನ್ನು ಕಲಿಸಬೇಕು.  ಲಲಿತ ಕಲೆಗಳ ಬೀಡಾದ ಮೈಸೂರು ನಗರಕ್ಕೆ ಒಂದು ಸಂಗೀತ ನೃತ್ಯ  ಶಾಲೆ ಬೇಕು ಎಂಬ ಯೋಚನೆ ಗಾನಭಾರತೀಯನ್ನು ಸ್ಥಾಪಿಸಿದ ಹಿರಿಯರಲ್ಲಿ ಮೂಡಿತು.  ಅದರಂತೆ 12-4-1992ರಂದು ಗಾನಭಾರತೀ ಸಂಗೀತ ನೃತ್ಯ  ಶಾಲೆ  ಪ್ರಾರಂಭವಾಯಿತು..  ಶಾಲೆಯನ್ನು ಪ್ರಖ್ಯಾತ ವೀಣಾ ವಿದ್ವಾಂಸರಾದ ಶ್ರೀ. ಎಂ.ಜೆ. ಶ್ರೀನಿವಾಸ ಅಯ್ಯಂಗಾರ್ ಅವರು ಉದ್ಘಾಟಿಸಿದರು.

ಗಾನಭಾರತೀ ಸಂಗೀತ ನೃತ್ಯ ಶಾಲೆಯು ಕಳೆದ 26 ವರ್ಷಗಳಿಂದ ಕಲಾಸಕ್ತ ವಿದ್ಯಾರ್ಥಿಗಳಿಗಾಗಿ ಸಂಗೀತ, ನೃತ್ಯ, ವಾದ್ಯ ತರಗತಿಗಳನ್ನು ನಡೆಸುತ್ತಾ ಬಂದಿದೆ.  ಈ ಶಾಲೆಗೆ ಭದ್ರವಾದ ಬುನಾದಿಯನ್ನು ಹಾಕಿಕೊಟ್ಟವರು ಮೊದಲನೆಯ ಗೌ: ಪ್ರಾಂಶುಪಾಲರಾದ ಶ್ರೀ ಕೆ. ಆರ್. ಉಡುಪರವರು.  ನಂತರ      ಶ್ರೀ ಗುರುರಾಜ್, ಶ್ರೀಮತಿ ದೇವಕಿ ಮಾಧವ ಮತ್ತು ಶ್ರೀಮತಿ ಪದ್ಮ ಚಿಕ್ಕೆರೂರ ಅವರು ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದರು. ಇವರು ಗಾನಭಾರತೀ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದರೊಂದಿಗೆ ಹಲವು ನವೀನ ಕಾರ್ಯಕ್ರಮಗಳನ್ನು ಪರಿಚಯಿಸಿದರು.

ಗಾನಭಾರತೀ ವಿದ್ಯಾಸಂಸ್ಥೆಗೆ ಅತಿಥಿಗಳಾಗಿ ಬಂದಿದ್ದ ಹೆಸರಾಂತ ಗಾಯಕಿ ಶ್ರೀಮತಿ ಗಂಗೂಬಾಯಿ ಹಾನಗಲ್ ಅವರು ಕರ್ನಾಟಕದಲ್ಲಿ ಸಂಗೀತ ಸಂಸ್ಥೆಯೊಂದು ಸಂಗೀತ ನೃತ್ಯ ಶಾಲೆಯನ್ನು ನಡೆಸಿಕೊಂಡು ಹೋಗುತ್ತಿರುವುದು ಇದೇ ಮೊದಲು ಎಂದು ಮುಕ್ತವಾಗಿ ಹೊಗಳಿದ್ದರು.

ಪ್ರಾಂಶುಪಾಲರು:- ವಿದುಷಿ ಶ್ರೀಮತಿ. ಲತಾ ದೇಶಪಾಂಡೆ:-

ಸಂಗೀತದಲ್ಲಿ  ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಶ್ರೀಮತಿ. ಲತಾ ದೇಶಪಾಂಡೆ ಅವರು ವಿದುಷಿ, ಶ್ರೀಮತಿ. ಎಂ. ಎಲ್. ಭಾರತೀ, ವಿದುಷಿ ಆರ್. ಎನ್. ಶ್ರೀಲತಾ, ವಿದುಷಿ ಕೋವಿಲಡಿ ಕಲಾ ಮೊದಲಾದ ಹಿರಿಯರಲ್ಲಿ ಸಂಗೀತ ಕಲಿತಿದ್ದಾರೆ.  ಜೊತೆಗೆ ಗಮಕ, ಸುಗಮ ಸಂಗೀತದಲ್ಲೂ ಪರಿಣತಿ ಪಡೆದಿರುವ ಇವರು ಶಾಲೆಯನ್ನು ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.  

ವಿದ್ವಾನ್ ಶ್ರೀ. ಆರ್. ಕೆ. ರಾಘವನ್:-

ಆಸ್ಥಾನ ವಿದ್ವಾಂಸರಾಗಿದ್ದ ದಿ: ಆರ್.ಎಸ್. ಕೇಶವಮೂರ್ತಿಯವರ ಪುತ್ರ ವಿದ್ವಾನ್ ಶ್ರೀ.ಆರ್.ಕೆ. ರಾಘವನ್ ರವರು ದೇಶ ವಿದೇಶಗಳಲ್ಲಿ ತಮ್ಮ ಶ್ರೇಷ್ಠ ಮಟ್ಟದ ವೀಣಾವಾದನದಿಂದ ಅನೇಕ ಬಿರುದು ಸನ್ಮಾನಗಳನ್ನು  ಗಳಿಸಿದ್ದಾರೆ.  ಗಾನಭಾರತೀ ಸಂಗೀತ ಮತ್ತು ನೃತ್ಯ ಶಾಲೆಯಲ್ಲಿ ಕಳೆದ 8/10 ವರ್ಷಗಳಿಂದ ತಮ್ಮ ಸೇವೆಯನ್ನು ಸಲ್ಲಿಸುತ್ತಾ ಬರುತ್ತಿದ್ದಾರೆ.

ವಿದ್ವಾನ್ ಶ್ರೀ. ವೈ.ಎಸ್. ರಮೇಶ್:-

ಮೃದಂಗ, ಮೇರ್ಚಿಂಗ್, ಮತ್ತು ಘಟ ಇವುಗಳ ವಿದ್ವಾಂಸರಾದ ಶ್ರೀ ರಮೇಶ್ ರವರು ಕರ್ನಾಟಕ ಕಲಾಶ್ರೀ ಶ್ರೀಮತಿ ವಿದುಷೀ ಸಿ.ಎಸ್.ನಾಗರತ್ನಮ್ಮನವರ ಪುತ್ರ ಕಳೆದ 26 ವರ್ಷಗಳಿಂದ ಗಾನಭಾರತೀ ಸಂಗೀತ. ನೃತ್ಯ ಶಾಲೆಯಲ್ಲಿ ಮೃದಂಗವನ್ನು ಕಲಿಸುತ್ತಿದ್ದಾರೆ.  ಹೆಸರಾಂತ ಹಿರಿಯ ಸಂಗೀತ ವಿದ್ವಾಂಸರಿಗೆ ಸಮರ್ಪಕವಾಗಿ ಸಹಕಾರ ನೀಡುತ್ತಾ ಬರುತ್ತಿದ್ದಾರೆ.  

ಶ್ರೀ. ವಿದ್ವಾನ್ ಎಮ್. ಎಸ್. ತ್ಯಾಗರಾಜನ್:-

ಹರಿಕಥಾ ವಿದ್ವಾಂಸರಾಗಿದ್ದ ಕೊಣನೂರು ಸೀತಾರಾಮ ಶಾಸ್ತ್ರಿ ಅವರ ಪುತ್ರರಾದ ವಿದ್ವಾನ್ ್ರೀ. ಎಮ್.ಎಸ್. ತ್ಯಾಗರಾಜನ್ ಅವರು ಪಟೀಲು ಶಿಕ್ಷಕರು. ವಿದ್ವಾನ್ ಶ್ರೀ.ಎ.ಕೆ. ಮುತ್ತಣ್ಣ ಮತ್ತು ವಿದ್ವಾನ್  ಶ್ರೀ.ಎಚ್.ಕೆ. ನರಸಿಂಹ ಮೂತರ್ಿ ಅವರ ಶಿಷ್ಯರಾಗಿದ್ದ ಇವರು ಕಳೆದ 15 ವರ್ಷಗಳಿಂದ ಗಾನಭಾರತೀ ಸಂಗೀತ ನೃತ್ಯ ಸಾಲೆಯಲ್ಲಿ ಸೇವೆ ಸಲ್ಲಸುತ್ತಾ ಬರುತ್ತಿದ್ದಾರೆ.

ವಿದ್ವಾನ್ ಶ್ರೀ.ಬಿ. ಸುರೇಶ್:-

ಶ್ರೀ. ಬಿ. ಸುರೇಶ್ ಅವರು ಕೊಳಲು ವಾದನವನ್ನು ವಿದ್ವಾನ್ ದಿಂಡಿಗಲ್ ಶ್ರೀ. ಎಸ್.ಪಿ.ನಟರಾಜನ್ ಅವರಲ್ಲಿ ಕಲಿತರು.  ಗಾಯಕರೂ ಆಗಿರುವ ಇವರು ಅನೇಕ ಕಛೇರಿಗಳನ್ನು ನೀಡಿದ್ದಾರೆ.  ಕಳೆದ 6 ವರ್ಷಗಳಿಂದ ಕೊಳಲು ಶಿಕ್ಷಕರಾಗಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿದ್ವಾನ್ ಶ್ರೀ.ಎನ್. ವಿ. ಸತ್ಯನಾರಾಯಣ:-

ವಿದ್ವಾನ್ ಶ್ರೀ.ಎನ್.ವಿ. ಸತ್ಯನಾರಾಯಣ  ಅವರು ಕೊಳಲು ವಿದ್ವಾಂಸರು  ಆಕಾಶವಾಣಿಯ ಕಲಾವಿದರಾಗಿರುವ ಇವರು ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.  ಕಳೆದ 4 ವರ್ಷಗಳಿಂದ ಗಾನಭಾರತೀ ಯಲ್ಲಿ ಕೊಳಲು ಶಿಕ್ಷಕರಾಗಿ ಸಮರ್ಪಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿದ್ವಾನ್ ಶ್ರೀಮತಿ. ಕೆ.ಎನ್. ಶಾರದಾಂಬ:-

ಶ್ರೀಮತಿ. ಕೆ.ಎನ್. ಶಾರದಾಂಬ ಅವರು ಮೈಸೂರು ವಿಶ್ವವಿದ್ಯಾಲಯದ ಎಮ್ ಮ್ಯೂಸಿಕ್ ಪದವೀದರೆ ಕಳೆದ 16 ವರ್ಷಗಳಿಂದ ಗಾನಭಾರತೀ ಸಂಗೀತ ಮತ್ತು ನೃತ್ಯ ಶಾಲೆಯಲ್ಲಿ ಕನರ್ಾಟಕ ಶಾಸ್ತ್ರೀಯ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ.  ಉತ್ತಮ ಗಾಯಕಿ ಎಂಬ ಹೆಸರು ಮಾಡಿರುವ ಶ್ರೀಮತಿ ಶಾರದಾಂಬೆಯವರು ಹಲವಾರು ಅನೇಕ ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ.

ವಿದ್ವಾನ್ ಶ್ರೀಮತಿ. ವಿ.ಭಾಗ್ಯಲಕ್ಷ್ಮಿ:-

ಶ್ರೀಮತಿ. ವಿ.ಭಾಗ್ಯಲಕ್ಷ್ಮಿ ಅವರು ನಮ್ಮ ಶಾಲೆಯಲ್ಲಿ ಕಳೆದ 5 ವರ್ಷಗಳಿಂದ ಕನರ್ಾಟಕ ಶಾಸ್ತ್ರೀಯ ಸಂಗೀತ ಶಿಕ್ಷಕಿ ಆಗಿದ್ದಾರೆ.  ಸುಮಾರು 30 ವರ್ಷಗಳಿಂದ ಸಂಗೀತ ಶಿಕ್ಷಣ ನೀಡುತ್ತಿರುವ ಇವರು ಹಲವಾರು ವೇದಿಕೆಗಳಲ್ಲಿ ಕಛೇರಿಗಳನ್ನು ನೀಡಿದ್ದಾರೆ.  

ವಿದ್ವಾನ್ ಶ್ರೀಮತಿ. ಎಮ್.ಬಿ. ನಾಗಶ್ರೀ:-

ಕಳೆದ 10 ವರ್ಷಗಳಿಂದ ಗಾನಭಾರತೀ ಯಲ್ಲಿ ನೃತ್ಯ ಶಿಕ್ಷಕಿ ಆಗಿರುವ ಶ್ರೀಮತಿ.ಎಮ್.ಬಿ. ನಾಗಶ್ರೀ ಅವರು ನೃತ್ಯಗಿರಿ ಪ್ರದರ್ಶನ ಕಲಾಕೇಂದ್ರದ ಮತ್ತೋರ್ವ ಪ್ರತಿಭೆ.   ಇವರು ಎಂ.ಡಾನ್ಸ್ ಪದವೀದರೆ.  ಮೈಸೂರಿನ ಹಲವಾರು ಶಾಲೆಗಳಲ್ಲಿ ನೃತ್ಯ ಶಿಕ್ಷಣ ನೀಡುತ್ತಿದ್ದಾರೆ.

ವಿದ್ವಾನ್ ಶ್ರೀಮತಿ.ವಿ. ಸುಮ:-

ಬಾಲ್ಯದಿಂದಲೇ ಡಾ.ಕೃಪಾ ಫಡಕೆ  ಅವರಲ್ಲಿ ಭರತನಾಟ್ಯ ಅಭ್ಯಾಸ ಮಾಡಿರುವ ಶ್ರೀಮತಿ. ವಿ. ಸುಮ ಅವರು ಪದವಿಯಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎರಡು ಚಿನ್ನದ ಪದಕಗಳನ್ನು ಗಳಿಸಿದ ಪ್ರತಿಭಾನ್ವಿತೆ.  ಇವರು ಎಂ.ಡಾನ್ಸ್ ಪದವೀದರೆ. ಹಲವಾರು ಸಂಸ್ಥೆಗಳಲ್ಲಿ ನೃತ್ಯ ಶಿಕ್ಷಣ ನೀಡಿರುವ ಅನುಭವ ಇವರದು.

ವಿದ್ವಾನ್ ಶ್ರೀಮತಿ.ಎಮ್.ಪಿ. ಶೈಲಜ:-

ಕಳೆದ 10 ವರ್ಷಗಳಿಂದ ಗಾನಭಾರತೀ ಸಂಗೀತ ಮತ್ತು ನೃತ್ಯ ಶಾಲೆಯಲ್ಲಿ ಸುಗಮ ಸಂಗೀತ ಶಿಕ್ಷಕಿ ಆಗಿರುವ ಶ್ರೀಮತಿ. ಎಮ್.ಪಿ. ಸೈಲಜ  ಅವರು ಕನರ್ಾಟಕದಾದ್ಯಂತ  ಅನೇಕ ಕಾರ್ಯಕ್ರಮಗಳನ್ನು ಜನಪ್ರೀಯರಾಗಿದ್ದಾರೆ.

ವಿದ್ವಾನ್ ಎ.ಎಸ್. ಪ್ರಸನ್ನಕುಮಾರ್:-

ಮೈಸೂರಿನಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ಕೀ ಬೋಡರ್್ ಕಲಾವಿದ ವಿದ್ವಾನ್. ಎ.ಎಸ್.ಪ್ರಸನ್ನಕುಮಾರ್ ಅವರು ಕಳೆದ ಹಲವಾರು ವರ್ಷಗಳಿಂದ ಅನೇಕ ಕಾರ್ಯಕ್ರಮಗಳಿಗೆ ಕೀಬೋಡರ್್ ನುಡಿಸಿರುವ ಖ್ಯಾತಿ ಇವರದು. ಕಳೆದ 20 ವರ್ಷ ದಿಂದ ಸಹ ನಿದರ್ೇಶಕರಾಗಿ ಕೆಲಸ ಮಾಡುತ್ತಿದ್ದಾರೆ.  ನಮ್ಮ ಶಾಲೆಯಲ್ಲಿ ಹಲವಾರು ವರ್ಷಗಳಿಂದ ಕೀಬೋಡರ್್ ಶಿಕ್ಷಣ ನೀಡುತ್ತಿದ್ದಾರೆ.

Ganabharathi, Veene Seshanna Bhavana

Veene Sheshanna Bhavana, Adichunchanagiri Road, Kuvempunagar, Mysore - 23


Tel : 0821-2560313

Email: ganabharati@gmail.com

Web: www.ganabharathi.com

  • Icon
  • Icon