Skip to main content

ಚಿಗುರು ಸಂಗೀತ ಕಾರ್ಯಕ್ರಮ

ಯುವ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸುವ ದೃಷ್ಟಿಯಿಂದ ಗಾನಭಾರತೀ ಪ್ರಾರಂಭಿಸಿರುವ 'ಚಿಗುರು' ವೇದಿಕೆಯ ಮೊದಲ ಕಾರ್ಯಕ್ರಮವಾಗಿ ನವೆಂಬರ್ 9 ಶುಕ್ರವಾರ ಸಂಜೆ 6 ಗಂಟೆಗೆ ಮಹತೀ ರಘುರಾಂ ಹಾಗೂ ಶ್ಯಾಮಕೃಷ್ಣ ಅವರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಸಂಜೆ 6ರಿಂದ 7.15ರವರೆಗೆ ಕುಮಾರಿ ಮಹತೀ ರಘುರಾಂ ಅವರ ಗಾಯನ ಕಾರ್ಯಕ್ರಮವಿರುತ್ತದೆ. ಅವರಿಗೆ ಪೂಜಾ ಶ್ರೀಧರ್ ಅವರು ಪಿಟೀಲಿನಲ್ಲಿ,
ಪವನ್ ಮಾಧವ್ ಅವರು ಮೃದಂಗದಲ್ಲಿ ಹಾಗೂ ಶ್ರೀನಿಧಿ ಆರ್ ಕೌಂಡಿನ್ಯ ಅವರು ಘಟದಲ್ಲಿ ಸಹಕರಿಸಲಿದ್ದಾರೆ. ನಂತರ 7.15ರಿಂದ 8.30ರವರೆಗೆ ಶ್ಯಾಮಕೃಷ್ಣ ಸತೀಶ್ ಅವರು ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅವರಿಗೆ ಪೃಥ್ವೀ ಭಾಸ್ಕರ್ ಅವರು ಪಿಟೀಲಿನಲ್ಲಿ, ಮಲೋಲ ಸಿಂಹಅವರು ಮೃದಂಗದಲ್ಲಿ ಮತ್ತು ಸುಧೀಂದ್ರ ಘಟದಲ್ಲಿ ಸಹರಿಸಲಿದ್ದಾರೆ.

ಕುಮಾರಿ ಮಹತೀ ರಘುರಾಂ ಗಾನಕಲಾ ಭೂಷಣ ವಿದ್ವಾನ್ ವಿ. ದೇಶಿಕಾಚಾರ್ ಅವರ ಮೊಮ್ಮಗಳು. ಕಳೆದ 10 ವರ್ಷಗಳಿಂದ ವಿದುಷಿ ಆರ್ ಎನ್ ಶ್ರೀಲತಾ ಅವರಲ್ಲಿ ಸಂಗೀತ ಶಿಕ್ಷಣ ಪಡೆಯುತ್ತಿ ದ್ದಾಳೆ. ಗಾನಭಾರತೀ ಸೇರಿದಂತೆ ಹಲವು ಪ್ರತಿಷ್ಠಿತ ಸಭೆಗಳು ನಡೆಸಿರುವ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುತ್ತಾಳೆ. ಸಧ್ಯ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

ಶ್ಯಾಮಕೃಷ್ಣ ಅವರದು ಸಂಗೀತದ ಮನೆತನ. ಬಳ್ಳಾರಿ ವೆಂಕಟೇಶಾಚಾರ್ ಅವರ ಮೊಮ್ಮಗ. ತಾಯಿ ವಿದುಷಿ ವಾಣಿ ಸತೀಶ್ ಅವರಲ್ಲಿ ಸಂಗೀತ ಕಲಿಯುತ್ತಿದ್ದಾನೆ. ಹಲವಾರು ಸಭೆಗಳಲ್ಲಿ ಕಾರ್ಯಕ್ರಮ ನೀಡಿದ್ದಾನೆ. ಶ್ಯಾಮಕೃಷ್ಣ ಹಲವಾರು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದ್ದಾನೆ. ಸಧ್ಯ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

Program Details

Friday November 9th 2018.

6-7.15 PM
Kumari Mahathi Raghuram - Vocal, Pooja Sridhar - Violin, Pavan Madhav - Mridanga, Srinidhi R Kandinya - Ghata

7.15-8.30PM
Shymakrishna Sathish - Vocal, Pruthvi Bhaskar - Violin, Malola Simha - Mridanga, Sudhindra - Ghatam

Date: 
9 Nov 2018 - 6:00pm

Ganabharathi, Veene Seshanna Bhavana

Veene Sheshanna Bhavana, Adichunchanagiri Road, Kuvempunagar, Mysore - 23


Tel : 0821-2560313

Email: ganabharati@gmail.com

Web: www.ganabharathi.com

  • Icon
  • Icon