Skip to main content

ಸ್ವರಮೂರ್ತಿ ವಿ ಎನ್ ರಾವ್ ಅವರ ನೆನಪಿನ ಕಾರ್ಯಕ್ರಮ
ವಿದುಷಿ ಡಾ. ಕೃಪಾ ಫಡ್ಕೆಯವರಿಂದ 
ವೀಣೆ ಶೇಷಣ್ಣನವರ ಕೃತಿಗಳನ್ನು ಆಧರಿಸಿದ ವಿಶೇಷ ನೃತ್ಯ ಕಾರ್ಯಕ್ರಮ

Swaramurthy V N Rao Memorial Programme

Dance Programme based on Veene Sheshanna compositions by

 Vidushi Dr. Kripa Phadke

 

ವಿದುಷಿ ಕೃಪಾ ಫಡ್ಕೆಯವರು ಪಂದನಲ್ಲೂರು ಶೈಲಿಯ ಭರತನಾಟ್ಯ ಪ್ರವೀಣರು. ನಾಟ್ಯಾಚಾರ್ಯ ಪಿ ಕಮಲಾಕ್ಷ ಆಚಾರ್ ಹಾಗೂ ನಾಟ್ಯಾಚಾರ್ಯ ಕೆ.ಮುರುಳೀಧರರಾವ್ ಅವರಲ್ಲಿ ಕಲಿತ ಹೆಗ್ಗಳಿಕೆ ಇವರದು. ಭರತನಾಟ್ಯದಲ್ಲಿ ವಿದ್ವತ್ ಮತ್ತು ಡಾಕ್ಟರೇಟ್ ಪದವಿ ಗಳಿಸಿದ್ದಾರೆ. ನೃತ್ಯಗಿರಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ ಹಲವಾರು ವಿದ್ಯಾರ್ಥಿಗಳಿಗೆ ಭರತನಾಟ್ಯದಲ್ಲಿ ತರಬೇತಿ ನೀಡುತ್ತಿದ್ದಾರೆ. ಸಂಪೂರ್ಣ ರಾಮಾಯಣ ಮುಂತಾದ ಹಲವು ಸತ್ವಪೂರ್ಣ ಗೀತರೂಪಕಗಳನ್ನು ನಿರ್ದೇಶಿಸಿದ್ದಾರೆ. ಇವರ ಪ್ರತಿಭೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿ. ನೃತ್ಯನಿಪುಣೆ, ನೃತ್ಯಕಲಾಸಿಂಧು ಮೊದಲಾದ ಪ್ರಶಸ್ತಿಗಳನ್ನು ಇವರಿಗೆ ನೀಡಿವೆ. ಗಾನಭಾರತೀಯಲ್ಲಿ ಹಲವು ವರ್ಷಗಳ ಕಾಲ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ ಇವರು ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

 

Date: 
11 Jan 2019 - 6:00pm

Ganabharathi, Veene Seshanna Bhavana

Veene Sheshanna Bhavana, Adichunchanagiri Road, Kuvempunagar, Mysore - 23


Tel : 0821-2560313

Email: ganabharati@gmail.com

Web: www.ganabharathi.com

  • Icon
  • Icon