Skip to main content

ಚಿಗುರು ಕಾರ್ಯಕ್ರಮ - ಯುವ ಪ್ರತಿಭೆಗಳಿಗಾಗಿ

ಗಾನಭಾರತೀ ಯುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ದೃಷ್ಟಿಯಿಂದ ಚಿಗುರು ಎಂಬ ವಿಶೇಷ ಕಾರ್ಯಕ್ರಮವೊಂದನ್ನು ನಡೆಸಿಕೊಂಡು ಬರುತ್ತಿದೆ.

ಈ ತಿಂಗಳ ಚಿಗುರು ಕಾರ್ಯಕ್ರಮ ಮಾರ್ಚಿ 22 ರಂದು ಸಂಜೆ 5:30ಕ್ಕೆ ವೀಣೆ ಶೇಷಣ್ಣ ಭವನದಲ್ಲಿ ನಡೆಯುತ್ತಿದೆ. ಅದರಲ್ಲಿ ನಾಲ್ವರು ಯುವ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಕೊಡಲಾಗುತ್ತಿದೆ.  

ಮೊದಲಿಗೆ 5:30ರಿಂದ 6:30ರವರೆಗೆ ಕುಮಾರಿ ಕುಶಲ ಪ್ರಸಾದ್ ಹಿಂದುಸ್ತಾನಿ ಗಾಯನ ಕಾರ್ಯಕ್ರಮವಿರುತ್ತದೆ. ಬೆಂಗಳೂರಿನ ಈ ಯುವ ಪ್ರತಿಭೆಗೆ ಪಂಡಿತ್ ಪಂಡಿತ್ ಭೀಮಾಶಂಕರ್ ಅವರು ತಬಲಾದಲ್ಲಿ ಹಾಗೂ ಹರಿಕೃಷ್ಣ ಪುರೋಹಿತ್ ಅವರು ಹಾರ್ಮೋನಿಯಂನಲ್ಲಿ ಸಹಕರಿಸಲಿದ್ದಾರೆ.

 

ನಂತರ 6:30ರಿಂದ 6:30-7:30ರವರೆಗೆ ಕುಮಾರಿ ಅನನ್ಯ ರಾಮಾನುಜನ್ ಅವರು ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಹಿರಿಯ ವಿದುಷಿಯರಾದ ಕಮಲಾ, ರಾಜಲಕ್ಷ್ಮಿಯವರ ಶಿಷ್ಯರಾದ ಅನನ್ಯ ಅವರಿಗೆ ಕುಮಾರಿ ಪೃಥ್ವಿ ಭಾಸ್ಕರ್ ಪಿಟೀಲಿನಲ್ಲಿ ಮತ್ತು ನಂದನ್ ಕಶ್ಯಪ್ ಅವರು ಮೃದಂಗದಲ್ಲಿ ಸಹಕರಿಸಲಿದ್ದಾರೆ.

 

ಅನಂತರ ಸಂಜೆ 7:30-8:30 ರವರೆಗೆ ನಾಗಸ್ವರ ವಿದ್ವಾನ್ ಕೃಷ್ಣಮೂರ್ತಿಯವರ ಶಿಷ್ಯರಾದ ಎಂ ಎಸ್ ವಿಜಯಸೂರ್ಯ ಹಾಗೂ ಎಂ ಎಸ್ ಕಾರ್ತಿಕ್ ಅವರ ನಾಗಸ್ವರ ಕಾರ್ಯಕ್ರಮವಿರುತ್ತದೆ. ಅವರಿಗೆ ತವಿಲಿನಲ್ಲಿ ಮೈಸೂರ್ ಎಸ್ ಸಂಜಯ್ ಮತ್ತು ವಿದ್ವಾನ್ ಶಿವಕುಮಾರ್ ಸಹಕರಿಸಲಿದ್ದಾರೆ. 

   

Date: 
22 Mar 2019 - 5:00pm to 8:30pm

Ganabharathi, Veene Seshanna Bhavana

Veene Sheshanna Bhavana, Adichunchanagiri Road, Kuvempunagar, Mysore - 23


Tel : 0821-2560313

Email: ganabharati@gmail.com

Web: www.ganabharathi.com

  • Icon
  • Icon