Skip to main content

ವಿದ್ವಾನ್ ಬಳ್ಳಾರಿ ಎಂ ರಾಘವೇಂದ್ರ ಅವರಿಂದ ಗಾಯನ

ವಿದ್ವಾನ್ ಎಚ್ ಕೆ ನರಸಿಂಹಮೂರ್ತಿ-ಪಿಟೀಲು
ವಿದ್ವಾನ್ ಜಿ ಎಸ್ ರಾಮಾನುಜನ್-ಮೃದಂಗ
ವಿದ್ವಾನ್ ರಘುನಂದನ್-ಘಟ

Vocal Concert by Vidwan Bellary M Raghavendra

Vid H K Narasimhamurthy- Violin

Vidwan G S Ramanujan- Mridanga

Vidwan Raghunandan-Ghata

ವಿದ್ವಾನ್ ಬಳ್ಳಾರಿ ಎಂ ರಾಘವೇಂದ್ರ ಅವರು ಸಂಗೀತ ಕುಟುಂ ಬದಿಂದ ಬಂದವರು. ಬಳ್ಳಾರಿ ಸಹೋದರರು ಎಂದೇ ಖ್ಯಾತ ರಾದ ಬಳ್ಳಾರಿ ಎಂ ವೆಂಕಟೇಶ್ ಆಚಾರ್ ಇವರ ತಂದೆ. ತಂದೆ ಹಾಗೂ ಚಿಕ್ಕಪ್ಪ ಬಳ್ಳಾರಿ ಶೇಷಗಿರಿ ಆಚಾರ್ ಅವರಲ್ಲಿ ಸಂಗೀತಾಭ್ಯಾಸ ಮಾಡಿರುವ ಇವರು ಹಿಂದುಸ್ತಾನಿ ಸಂಗೀತವನ್ನು ಚಂದ್ರಶೇಖರ ಪುರಾಣಿಕಮಠ ಅವರಲ್ಲಿ ಅಭ್ಯಾಸ ಮಾಡಿದ್ದಾರೆ. ಹೃದಯಸ್ಪರ್ಶಿ ಪ್ರಸ್ತು ತಿಗೆ ಖ್ಯಾತರಾದ ಶ್ರೀ ರಾಘವೇಂದ್ರ ಅವರು ದೇಶ ವಿದೇಶಗಳ ಹಲವು ಪ್ರತಿಷ್ಠಿತ ಸಭೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. 

ಹಿರಿಯ ವಿದ್ವಾನ್ ಹೆಚ್ ಕೆ ನರಸಿಂಹಮೂರ್ತಿಯವರು ಪ್ರಖ್ಯಾತ ವಯೊಲಿನ್‌ವಾದಕ ಶ್ರೀ ಎಂ.ಎಸ್. ಗೋಪಾಲ ಕೃಷ್ಣನ್ ಅವರ ಶಿಷ್ಯರು. ಎಲ್ಲಾ ಪ್ರಮುಖ ಸಂಗೀತಗಾರರಿಗೆ ಪಕ್ಕವಾದ್ಯ ಸಹಕಾರ ನೀಡಿರುವ ಇವರು ಹಲವಾರು ಪ್ರತಿಭಾ ವಂತ ಶಿಷ್ಯರನ್ನು ಹೊಂದಿ ದ್ದಾರೆ.

ವಿದ್ವಾನ್ ಜಿ ಎಸ್ ರಾಮಾನುಜನ್ ಅವರು ವಿದ್ವಾನ್ ಪಿ.ಜಿ. ಲಕ್ಷ್ಮೀನಾರಾಯಣ ಅವರ ಹಿರಿಯ ಶಿಷ್ಯರು. ಇಂದು ಮೃದಂಗ ವಾದನದಲ್ಲಿ ಮುಂಚೂಣಿಯಲ್ಲಿರುವ ಇವರು ಎಲ್ಲಾ ಪ್ರಮುಖ ಹಿರಿಯ ಕಿರಿಯ ಕಲಾವಿದರಿಗೆ ಪಕ್ಕವಾದ್ಯ ಸಹಕಾರ ನೀಡಿದ್ದಾರೆ.

ಘಟ ಸಹಕಾರ ನೀಡುತ್ತಿರುವ ರಘುನಂದನ್ ಅವರು ವಿದ್ವಾನ್ ಪಿ ಜಿ ಲಕ್ಷ್ಮೀನಾರಾಯಣ ಅವರಲ್ಲಿ ಕಲಿತು, ಈಗ ವಿದ್ವಾನ್ ಹೆಚ್ ಎಸ್ ಸುಧೀಂದ್ರ ಅವರಲ್ಲಿ ಕಲಿಕೆಯನ್ನು ಮುಂದು ವರೆಸಿದ್ದಾರೆ.

Date: 
4 Jan 2019 - 6:00pm

Ganabharathi, Veene Seshanna Bhavana

Veene Sheshanna Bhavana, Adichunchanagiri Road, Kuvempunagar, Mysore - 23


Tel : 0821-2560313

Email: ganabharati@gmail.com

Web: www.ganabharathi.com

  • Icon
  • Icon